ತಿರುವನಂತಪುರಂ: ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ ಟೀಂ ಇಂಡಿಯಾ ಆಲ್‍ರೌಂಡರ್ ಶಿವಂ ದುಬೆ ಸಿಕ್ಸರ್‌ಗಳ ಮೂಲಕವೇ ಉತ್ತರ ನೀಡಿದ್ದಾರೆ. ದುಬೆ ಅರ್ಧಶತಕದ ಸಹಾಯದಿಂದ ಭಾರತವು ವಿಂಡೀಸ್ ತಂಡಕ್ಕೆ 171 ರನ್‍ಗಳ ಗುರಿ ನೀಡಿದೆ.
ತಿರುವನಂತಪುರಂನ ಗ್ರೀನ್‍ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ಭಾರತ ಶಿವಂ ದುಬೆ 54 ರನ್, ರಿಷಭ್ ಪಂತ್ 33 ರನ್ ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿದೆ.
Advertisement
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಆರಂಭದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಶಕ್ತವಾಯಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ (11 ರನ್) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕೆ ಇಳಿದ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಆರಂಭಿಸಿ, ರೋಹಿತ್ ಶರ್ಮಾಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತ 45 ರನ್ ಗಳಿಸಿತ್ತು. ಈ ವೇಳೆ ರನ್ ರೇಟ್ ಏರಿಸಲು ಮುಂದಾಗಿದ್ದ ರೋಹಿತ್ ಶರ್ಮಾ (15 ರನ್) ವಿಕೆಟ್ ಒಪ್ಪಿಸಿದರು.
Advertisement
ಶಿವಂ ಅರ್ಧಶತಕ:
ಇನ್ನಿಂಗ್ಸ್ ನ 9ನೇ ಓವರ್‌ನ 2 ಎರಡನೇ ಎಸೆತದಲ್ಲಿ ಶಿವಂ ದುಬೆ ಎರಡು ರನ್ ಕದಿಯಲು ಮುಂದಾಗಿದ್ದರು. ಈ ವೇಳೆ ಬೌಲರ್ ಪೋಲಾರ್ಡ್ ಪಿಚ್ ಮಧ್ಯೆ ನಿಂತು ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡ ಶಿವಂ ದುಬೆ, ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದರು. ಇದರಿಂದ ವಿಚಲಿತಗೊಂಡ ಪೋಲಾರ್ಡ್ ನಿರಂತರ ಎರಡು ವೈಡ್ ಎಸೆದರು. ಬಳಿಕ ಬ್ಯಾಟ್‌ಗೆ ಸಿಕ್ಕ ಎರಡು ಎಸೆತಗಳನ್ನು ಶಿವಂ ದುಬೆ ಸಿಕ್ಸ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಶಿವಂ ಒಂದು ರನ್ ಗಳಿಸಿದರು. ಈ ಮೂಲಕ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ಪೋಲಾರ್ಡ್ 23 ರನ್ ನೀಡಿದರು.
Advertisement
FIFTY!@IamShivamDube got promoted to No.3 in the batting order and he makes it count. He brings up his maiden T20I half-century off 27 deliveries ????????#INDvWI @Paytm pic.twitter.com/Ul2P18973n
— BCCI (@BCCI) December 8, 2019
ಸ್ಫೋಟಕ ಬ್ಯಾಟಿಂಗ್‍ನಿಂದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ20 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ. ಶಿವಂ ಅರ್ಧಶತಕದ ಬಳಿಕ ಎಸೆತಗಳನ್ನು ಬೌಂಡರಿಗೆ ಅಟ್ಟಲು ಮುಂದಾಗಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 30 ಎಸೆತಗಳಲ್ಲಿ (3 ಬೌಂಡರಿ, 4 ಸಿಕ್ಸರ್) 54 ರನ್ ಗಳಿಸಿ ಕ್ಯಾಚ್ ನೀಡಿ, ಪೆವಿಲಿಯನ್‍ಗೆ ತೆರಳಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ (19 ರನ್) ವಿಕೆಟ್ ಒಪ್ಪಿಸಿದರು.
ರೋಹಿತ್‍ರನ್ನ ಹಿಂದಿಕ್ಕಿದ ಕೊಹ್ಲಿ:
ಅಂತರಾಷ್ಟ್ರೀಯ ಟಿ20 ರನ್ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ದಾಖಲೆಸಿದ ಬ್ಯಾಟ್ಸ್‌ಮನ್ ಪೈಕಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರು. ಪಂದ್ಯದಲ್ಲಿ 19 ಗಳಿಸಿದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 2,563 ರನ್ ಗಳಿಸುವ ಮೂಲಕ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. 2,547 ಗಳಿಸಿದ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿರಾಟ್ ಕೊಹ್ಲಿ ವಿಕೆಟ್ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ (10 ರನ್) ಹಾಗೂ ರವೀಂದ್ರ ಜಡೇಜಾ (9 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸುತ್ತ ಸಾಗಿಸಿದರು. ಔಟಾಗದೆ ರಿಷಭ್ ಪಂತ್ 22 ಎಸೆತಗಳಲ್ಲಿ (3 ಬೌಂಡರಿ, ಸಿಕ್ಸ್) 33 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.