– ವಿಂಡೀಸಿಗೆ 388 ರನ್ ಗುರಿ
– ಸಿಕ್ಸರ್ ಬೌಂಡರಿಗಳ ಸುರಿಮಳೆಗೈದ ಟೀಂ ಇಂಡಿಯಾ
– 34 ಬೌಂಡರಿ, 16 ಸಿಕ್ಸರ್
ವಿಶಾಖಪಟ್ಟಣಂ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅಅವರ ದ್ವಿಶತಕದ ಜೊತೆಯಾಟ ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸಿಗೆ 388 ರನ್‍ಗಳ ಕಠಿಣ ಗುರಿಯನ್ನು ನೀಡಿದೆ.
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವಿಂಡೀಸ್ ಬೌಲರ್‌ಗಳ ದಾಳಿಯನ್ನು ಧ್ವಂಸ ಮಾಡಿದ್ದು 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ.
Advertisement
WATCH: Rohit Sharma’s stroke-filled 159
Full video here – https://t.co/L1hFmMR18n #INDvWI pic.twitter.com/VoX5SFhBSi
— BCCI (@BCCI) December 18, 2019
Advertisement
ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್( 32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿದೆ.
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡಿಸ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೊತೆಯಾಟವನ್ನು ಮುರಿಯಲು ವಿಫಲವಾಯಿತು. ತಾಳ್ಮೆಯ ಆಟ ಪ್ರರ್ದಶಿಸಿದ ಈ ಜೋಡಿಯು ಮೊದಲ ವಿಕೆಟ್‍ಗೆ 222 ಎಸೆತಗಳಲ್ಲಿ 227 ರನ್‍ಗಳ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿತು. ರೋಹಿತ್ ಶರ್ಮಾ 107 ಎಸೆತಗಳಲ್ಲಿ 28ನೇ ಶತಕ ಹೊಡೆದರು. ಈ ಬೆನ್ನಲ್ಲೇ ಕೆ.ಎಲ್.ರಾಹುಲ್ ಶತಕ ದಾಖಲಿಸಿ ವಿಕೆಟ್ ಒಪ್ಪಿಸಿದರು. 104 ಎಸೆತಗಳಲ್ಲಿ ಕೆ.ಎಲ್.ರಾಹುಲ್ (8 ಬೌಂಡರಿ, 3 ಸಿಕ್ಸರ್) 102 ರನ್ ಗಳಿಸಿದರು. ಬಳಿಕ ಮೈದಾಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಕೊಹ್ಲಿ ಏಕದಿನ ಪಂದ್ಯದಲ್ಲಿ 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
Advertisement
Innings Break!
An absolute run fest here in Visakhapatnam as #TeamIndia post a mammoth total of 387/5 on the board, courtesy batting fireworks by Rohit (159), Rahul (102), Shreyas (53), Rishabh (39).#INDvWI pic.twitter.com/rDgLwizYH4
— BCCI (@BCCI) December 18, 2019
ರನ್ ಏರಿದ್ದು ಹೇಗೆ?:
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿಯು ಇನ್ನಿಂಗ್ಸ್ 10ನೇ ಓವರ್ ಮುಕ್ತಾಯಕ್ಕೆ 55 ರನ್ ಪೇರಿಸಲು ಶಕ್ತವಾಗಿತ್ತು. 20ನೇ ಓವರ್ ಮುಕ್ತಾಯ ವೇಳೆಗೂ ಅಷ್ಟಾಗಿ ರನ್ ಏರಿಕೆ ಕಂಡು ಬರಲಿಲ್ಲ. ಈ ವೇಳೆಗೆ ರೋಹಿತ್ 41 ರನ್ ಹಾಗೂ ರಾಹುಲ್ 54 ರನ್‍ಗಳ ಸಹಾಯದಿಂದ ಭಾರತ 98 ರನ್ ಪೇರಿಸಿತ್ತು. ಬಳಿಕ ನಿಧಾನಗತಿಯಲ್ಲಿ ರನ್ ಏರಿಕೆಯಲ್ಲಿ ಕೊಂಚ ಬಲಾವಣೆ ಕಂಡಿತ್ತು. ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಆರಂಭಿಕ ಬ್ಯಾಟ್ಸ್‌ಮನ್ ಗಳು ಇನ್ನಿಂಗ್ಸ್ ನ 30ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವನ್ನು 170 ರನ್‍ಗೆ ಏರಿಸಿದರು.
ಇನ್ನಿಂಗ್ಸ್ ನ 34ನೇ ಓವರ್ ನಲ್ಲಿ ರೋಹಿತ್ ಶರ್ಮಾ ಬೌಂಡರಿ, ಸಿಕ್ಸ್ ಸಿಡಿಸಿದರು. ಈ ಓವರ್ ನಲ್ಲಿ 13 ರನ್ ಬಾರಿಸಿ, ನಂತರದ ಓವರ್ ನ 5ನೇ ಎಸೆತದಲ್ಲಿ ಒಂದು ರನ್ ಗಳಿಸಿ, 200 ರನ್‍ಗಳ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 40ನೇ ಓವರ್ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ ಭಾರತ 260ರನ್ ಪೇರಿಸಿತು. ಈ ವೇಳೆಗೆ 140 ರನ್ ಗಳಿಸಿದ್ದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಪರಿಣಾಮ 41ನೇ ಓವರ್ ನಲ್ಲಿ 9 ರನ್, 42ನೇ ಓವರ್ ನಲ್ಲಿ 13 ರನ್ ಸಹಾಯದಿಂದ ತಂಡದ ಮೊತ್ತ ಭರ್ಜರಿ ಏರಿಕೆ ಕಂಡಿತು.
????
Hitman gets to this 28th ODI Century. His 7th ODI ton of 2019. Top Man ????????#INDvWI pic.twitter.com/vxJkExGywF
— BCCI (@BCCI) December 18, 2019
ರೋಹಿತ್ ಶರ್ಮಾ ಇನ್ನಿಂಗ್ಸ್ 43ನೇ ಓವರ್ ನ 3 ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 138 ಎಸೆತಗಳಲ್ಲಿ (17 ಬೌಂಡರಿ, 5 ಸಿಕ್ಸರ್) 159 ರನ್ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿಕ್ಸರ್ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ 187 ಸಿಕ್ಸರ್ ಸಿಡಿಸಿದ್ದಾರೆ.
ಸಿಕ್ಸರ್ ಸುರಿಮಳೆ ಆರಂಭ:
3ನೇ ವಿಕೆಟಿಗೆ ರೋಹಿತ್ ಶರ್ಮಾ ಶ್ರೇಯಸ್ ಅಯ್ಯರ್ 36 ಎಸೆತದಲ್ಲಿ 60 ರನ್ ಪೇರಿಸಿದರೆ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಜೊತೆಯಾಟದಲ್ಲಿ ಸಿಕ್ಸರ್ ಬೌಂಡರಿಗಳ ಸುರಿಮಳೆ ಆರಂಭವಾಯಿತು. ಇವರಿಬ್ಬರು ನಾಲ್ಕನೇಯ ವಿಕೆಟಿಗೆ ಕೇವಲ 25 ಎಸೆತಗಳಲ್ಲಿ 73 ರನ್ ಚಚ್ಚಿದರು. 45ನೇ ಓವರಿನಲ್ಲಿ 14 ರನ್ ಬಂದರೆ, ಕಾಟ್ರೆಲ್ ಎಸೆದ 46ನೇ ಓವರಿನಲ್ಲಿ ರಿಷಬ್ ಪಂತ್ 24 ರನ್(6,0,4,6,4,4) ಹೊಡೆದರೆ, ರೊಸ್ಟಬನ್ ಚೇಸ್ ಎಸೆದ 47ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ 4 ಸಿಕ್ಸರ್ 1 ಬೌಂಡರಿ ಹೊಡೆದ ಪರಿಣಾಮ ಈ ಓವರಿನಲ್ಲಿ 31 ರನ್ ಬಂದಿತ್ತು. 400 ರನ್ ಗಳಿಸುವ ತವಕದಲ್ಲಿದ್ದ ತಂಡ ಇದ್ದರೂ ಕೊನೆಯ 3 ಓವರ್ ಗಳಲ್ಲಿ 24 ರನ್ ಬಂದಿದ್ದರಿಂದ ಈ ಆಸೆ ಈಡೇರಲಿಲ್ಲ. ಇತರೇ ರೂಪದಲ್ಲಿ ಭಾರತಕ್ಕೆ 18 ರನ್ ಬಂದಿತ್ತು.
ರನ್ ಏರಿದ್ದು ಹೇಗೆ?
50 ರನ್ – 58 ಎಸೆತ
100 ರನ್ – 121 ಎಸೆತ
150 ರನ್ – 153 ಎಸೆತ
200 ರನ್ – 203 ಎಸೆತ
250 ರನ್ – 236 ಎಸೆತ
300 ರನ್ – 367 ಎಸೆತ
350 ರನ್ – 281 ಎಸೆತ
387 ರನ್ – 300 ಎಸೆತ
ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದರು. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದರು. ಎಲ್ಲಾ ಮಾದರಿಯಲ್ಲಿ 362 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 237 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 409 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.
Most sixes in international games in India
187* Rohit Sharma in 116 inns
186 MS Dhoni in 208 inns#IndvWI #IndvsWI
— Mohandas Menon (@mohanstatsman) December 18, 2019