ಚೆನ್ನೈ: ವೆಸ್ಟ್ ಇಂಡೀಸ್ ಸಮರ್ಪಕ ಬೌಲಿಂಗ್ ಹಾಗೂ ಫೀಲ್ಟಿಂಗ್ ಎದುರು ಭಾರತ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಭಾರೀ ಕಷ್ಟಪಟ್ಟಿದೆ. ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅರ್ಧಶತಕದ ಸಹಾಯದಿಂದ ಕೊಹ್ಲಿ ಪಡೆದ ವಿಂಡೀಸ್ ತಂಡಕ್ಕೆ 288 ರನ್‍ಗಳ ಗುರಿ ನೀಡಿದೆ.
ಚೆನ್ನೈನ ಚಪಾಕ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಏಕದಿನ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಶ್ರೇಯಸ್ ಅಯ್ಯರ್ 70 ರನ್, ರಿಷಭ್ ಪಂತ್ 71, ಕೇದಾರ್ ಜಾಧವ್ 40 ರನ್‍ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.
Advertisement
FIFTY!#TeamIndia batsman @ShreyasIyer15 brings up a well made half-century off 70 deliveries. His 5th in ODIs.#INDvWI pic.twitter.com/j05ASmbxQw
— BCCI (@BCCI) December 15, 2019
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಸಮರ್ಪಕ ಬೌಲಿಂಗ್‍ನಿಂದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾರನ್ನು ಕಟ್ಟಿ ಹಾಕಿತು. ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ಮಿಂಚಿದ್ದ ಕೆ.ಎಲ್.ರಾಹುಲ್ (6 ರನ್) ಬಹುಬೇಗ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿ ಕೊಹ್ಲಿ ಒಂದು ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದರು. ಪರಿಣಾಮ ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತವು ಎರಡು ವಿಕೆಟ್ ನಷ್ಟಕ್ಕೆ 25 ರನ್ ಪೇರಿಸಲು ಶಕ್ತವಾಗಿತ್ತು.
Advertisement
ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ವಿಕೆಟ್ ಕಾಯ್ದುಕೊಂಡು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್‍ಗೆ ಸಾಥ್ ನೀಡಿದರು. ಈ ಜೋಡಿಯು ಮೂರನೇ ವಿಕೆಟ್ ನಷ್ಟಕ್ಕೆ 55 ರನ್‍ಗಳ ಜೊತೆಯಾಟ ಕಟ್ಟಿ ತಂಡದ ಮೊತ್ತವನ್ನು ಏರಿಸಿತು. ಆದರೆ ಇನ್ನಿಂಗ್ಸ್ ನ 18ನೇ ಓವರ್ ನ ಮೊದಲ ಎಸೆತದಲ್ಲಿಯೇ ರೋಹಿತ್ ವಿಂಡೀಸ್ ನಾಯಕಪೋಲಾರ್ಡ್ ಗೆ ಕ್ಯಾಚ್ ಒಪ್ಪಿಸಿದರು. 56 ಎಸೆತಗಳಲ್ಲಿ ರೋಹಿತ್ ಶರ್ಮಾ 6 ಬೌಂಡರಿ ಸೇರಿ 36 ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಹಿಟ್‍ಮ್ಯಾನ್ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇದುವರೆಗೂ 212 ಇನ್ನಿಂಗ್ಸ್ ಗಳಲ್ಲಿ (27 ಶತಕ, 42 ಅರ್ಧಶತಕ) 8,722 ರನ್ ದಾಖಲಿಸಿದ್ದಾರೆ.
Advertisement
Maiden ODI FIFTY for @RishabhPant17 ????????#INDvWI pic.twitter.com/nJ9x1kySNu
— BCCI (@BCCI) December 15, 2019
ರೋಹಿತ್ ವಿಕೆಟ್ ಬೆನ್ನಲ್ಲೇ ಮೈದಾನಕ್ಕಿಳಿದ ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್‍ಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 24ನೇ ಓವರ್ ನ 3ನೇ ಎಸೆತದಲ್ಲಿ ಪಂತ್ ಎರಡು ರನ್ ಗಳಿಸುವ ಮೂಲಕ ಭಾರತವು 100 ರನ್ ಪೇರಿಸಿತು. ನಂತರದ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಲು ಆರಂಭಿಸಿದರು.
ಪಂತ್-ಅಯ್ಯರ್ ಆಸರೆ:
ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಅರ್ಧಶತಕ (70 ಎಸೆತ) ಪೂರೈಸಿದರು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ 5ನೇ ಅರ್ಧಶತಕ ಇದಾಗಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟಿಂಗ್ ತೋರಿದ ಪಂತ್ ಕೂಡ ಅರ್ಧಶತಕ (49 ಎಸೆತ) ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಂತ್ ಅವರ ಚೊಚ್ಚಲ ಅರ್ಧಶತಕವಾಗಿದೆ.
Who's taking this one home?#INDvWI pic.twitter.com/iMhBqmAScW
— BCCI (@BCCI) December 15, 2019
ಇನ್ನಿಂಗ್ಸ್ ನ 36ನೇ ಓವರ್ 3ನೇ ಎಸೆತದಲ್ಲಿ ಪೋಲಾರ್ಡ್ ಬೌಲಿಂಗ್ ವೇಳೆ ಪಂತ್ ನೀಡಿದ್ದ ಕ್ಯಾಚ್ ಅನ್ನು ಶೆಲ್ಡನ್ ಕಾಟ್ರೆಲ್ ಕೈಚೆಲ್ಲಿದರು. ಜೀವದಾನ ಪಡೆದ ಪಂತ್ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್ ನಷ್ಟಕ್ಕೆ 114 ರನ್‍ಗಳ ಜೊತೆಯಾಟ ಕಟ್ಟಿಕೊಟ್ಟು ತಂಡದ ಮೊತ್ತವನ್ನು ಏರಿಸಿತು. ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ನ 36ನೇ ಓವರ್ ನಲ್ಲಿ ವಿಕೆಟ್ ನೀಡಿದರು. 88 ಎಸೆತಗಳಲ್ಲಿ ಶ್ರೇಯಸ್ (5 ಬೌಂಡರಿ, ಸಿಕ್ಸ್) 70 ರನ್ ಗಳಿಸಿ ಪೆವಿಲಿಯನ್‍ಗೆ ತರೆಳಿದರು.
ಶ್ರೇಯಸ್ ಅಯ್ಯರ್ ಬೆನ್ನಲ್ಲೇ 69 ಎಸೆತಗ್ಳಲ್ಲಿ (7 ಬೌಂಡರಿ, ಸಿಕ್ಸ್) 71 ರನ್ ಗಳಿಸಿದ್ದ ಪಂತ್ ಕೂಡ ವಿಕೆಟ್ ಒಪ್ಪಿಸಿದರು. 40ನೇ ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ 210 ರನ್ ಪೇರಿಸಿತು. ಬಳಿಕ ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ 6ನೇ ವಿಕೆಟ್ ನಷ್ಟಕ್ಕೆ 59 ರನ್ ಗಳ ಜೊತೆಯಾಟ ಕಟ್ಟಿಕೊಟ್ಟರು. ಇನ್ನಿಂಗ್ಸ್ ನ 47ನೇ ಓವರ್ ನ 3ನೇ ಎಸೆತದಲ್ಲಿ ಕೇದಾರ್ ಜಾಧವ್ (40 ರನ್) ಹಾಗೂ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜಾ (21 ರನ್) ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ ಶಿವಂ ದುಬೆ (9 ರನ್) ಔಟಾದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತು.
9 ಸರಣಿಯಲ್ಲಿ ಭಾರತಕ್ಕೆ ಜಯ:
ಕಳೆದ 13 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 9 ಸರಣಿಗಳು ನಡೆದಿವೆ. ಎಲ್ಲ ಸರಣಿಯಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 2006ರಿಂದ ಉಭಯ ದೇಶಗಳ ನಡುವೆ 39 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 23 ಪಂದ್ಯ ಗೆದ್ದರೆ, 10 ಪಂದ್ಯದಲ್ಲಿ ಸೋಲು ಕಂಡಿದೆ. 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಮಣಿಸಿತು.
ಏಕದಿನದಲ್ಲಿ ಸಮಬಲ:
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಈವರೆಗೆ 130 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಉಭಯ ತಂಡಗಳು ತಲಾ 62 ಪಂದ್ಯಗಳನ್ನು ಗೆದ್ದರೆ, 6 ಪಂದ್ಯಗಳು ಡ್ರಾ ಆಗಿವೆ. ಈ ವರ್ಷದ ಆಗಸ್ಟ್ ನಲ್ಲಿ ಪೋರ್ಟ್ ಆಫ್ ಸ್ಪೇನ್‍ನಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‍ಗಳಿಂದ ವಿಂಡೀಸ್ ತಂಡವನ್ನು ಸೋಲಿಸಿತ್ತು. ಅದೇ ಸಮಯದಲ್ಲಿ, ಭಾರತವು 2019ರಲ್ಲಿ ಇದುವರೆಗೆ ಒಟ್ಟು 25 ಏಕದಿನ ಪಂದ್ಯಗಳಲ್ಲಿ 17 ಪಂದ್ಯಗಳನ್ನು ಗೆದ್ದಿದ್ದರೆ, 7 ಸೋಲು ಕಂಡಿದೆ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್ 25 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದ್ದರೆ, 13 ಪಂದ್ಯಗಳು ಸೋತಿತ್ತು.
Innings Break!#TeamIndia post a total of 287/8 on the board. Will the bowlers defend the target?#INDvWI pic.twitter.com/dCYldOFr4S
— BCCI (@BCCI) December 15, 2019