ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಧೋನಿ ಅವರನ್ನು ನಂ.3 ರಲ್ಲಿ ಬ್ಯಾಟಿಂಗ್ ಕಳುಹಿಸುವಂತೆ ಕೋಚ್ ರವಿ ಶಾಸ್ತ್ರಿ ಅವರಿಗೆ ಸಿಗ್ನಲ್ ಮಾಡಿರುವ ವಿಡಿಯೋ ಈ ವೈರಲ್ ಆಗಿದೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿರುವ ವಿಧಾನ ಹಾಗೂ ಅವರ ನಿರ್ಧಾರಗಳು ಹಲವು ಹಿರಿಯ ಆಟಗಾರರ ಮೆಚ್ಚುಗೆಗೆ ಕಾರಣವಾಗಿದೆ.
Advertisement
Advertisement
ಪಂದ್ಯದ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಜೋಡಿ ಅಬ್ಬರದ ಆಟವಾಡಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಹಲವು ದಾಖಲೆಗಳಿಗೆ ಕಾರಣರಾದರು. ಈ ವೇಳೆ 43 ಎಸೆತಗಳಲ್ಲಿ 118 ರನ್ ಗಳಿದ್ದ ರೋಹಿತ್ ಔಟ್ ಆದ ತಕ್ಷಣ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಯಾರನ್ನು ಬ್ಯಾಟಿಂಗ್ ಗೆ ಕಳುಹಿಸ ಬೇಕು ಎಂಬ ಪ್ರಶ್ನೆಗೆ ರೋಹಿತ್, ಧೋನಿ ಅವರನ್ನು ಸೂಚಿಸಿದರು.
Advertisement
ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ, ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಧೋನಿ ಬ್ಯಾಟಿಂಗ್ ಅವರಿಗೆ ಮುಂಬಡ್ತಿ ನೀಡುವ ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಟೀಂ ಇಂಡಿಯಾದ ಹಲವು ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ
Advertisement
ಲಂಕಾ ವಿರುದ್ಧದ ಮೊದಲ ಟಿ2 ಪಂದ್ಯದ ವೇಳೆಯೂ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು 4ನೇ ಸ್ಥಾನಕ್ಕೆ ಹೆಚ್ಚಿಸಿ, ಧೋನಿ ಅವರು ಬ್ಯಾಟಿಂಗ್ ನಡೆಸಲು ಸೂಕ್ತ ಕ್ರಮಾಂಕ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.
https://twitter.com/CricketKaVideos/status/944217327637225472