ಪುಣೆ: ಕ್ರಿಕೆಟ್‍ನಲ್ಲಿ ನೋಬಾಲ್ (No-Ball) ಎಸೆಯುವುದು ಅಪರಾಧ. ಆದರೆ ಅರ್ಶ್‍ದೀಪ್ ಸಿಂಗ್ (Arshdeep Singh) ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದುವರಿಯಬೇಕು ಎಂದು ಟೀಂ ಇಂಡಿಯಾ (Team India) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 2ನೇ ಟಿ20 ಪಂದ್ಯದಲ್ಲಿ 5 ನೋ ಬಾಲ್ ಎಸೆದ ವೇಗಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಶ್ರೀಲಂಕಾ (Sri Lanka) ವಿರುದ್ಧ ಗುರುವಾರ ಪುಣೆಯಲ್ಲಿ ನಡೆದ 2ನೇ ಟಿ20 (T20I) ಪಂದ್ಯದಲ್ಲಿ ಕೇವಲ 2 ಓವರ್ ಎಸೆದ ವೇಗಿ ಅರ್ಶ್‍ದೀಪ್ ಸಿಂಗ್ ಬರೋಬ್ಬರಿ 37 ರನ್ ನೀಡಿ ದುಬಾರಿ ಎನಿಸಿಕೊಂಡರು. ಜೊತೆಗೆ 5 ನೋಬಾಲ್ ಎಸೆದು ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಮಗೆ ಒಳ್ಳೆಯ ದಿನ, ಕೆಟ್ಟ ದಿನ ಇರಬಹುದು ಆದರೆ ನಾವು ಅದನ್ನು ಸಹಿಸಿಕೊಂಡು ಮುಂದುವರಿಯಬೇಕು. ಅರ್ಶ್‍ದೀಪ್ ಎಸೆದ ನೋಬಾಲ್ ಫಲಿತಾಂಶದ ಮೇಲೆ ಹೊಡೆತ ನೀಡಿದೆ. ನೋಬಾಲ್ ಯಾವುದೇ ಮಾದರಿ ಕ್ರಿಕೆಟ್‍ನಲ್ಲೂ ಅಪರಾಧ. ನಾವು ಪವರ್‌ಪ್ಲೇನಲ್ಲಿ ಮಾಡಿದ ತಪ್ಪಿನಿಂದ ಪಂದ್ಯ ಸೋತಿದ್ದೇವೆ. ಇದನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯವಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ
Advertisement
Advertisement
ಅನಗತ್ಯ ದಾಖಲೆ ಬರೆದ ಅರ್ಶ್‌ದೀಪ್:
ಗಾಯದ ಸಮಸ್ಯೆಯಿಂದಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ಅರ್ಶ್‍ದೀಪ್ ಸಿಂಗ್ 2ನೇ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ ಅರ್ಶ್‍ದೀಪ್ ಬರೊಬ್ಬರಿ 37 ರನ್ ಚಚ್ಚಿಸಿಕೊಂಡರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 5 ನೋಬಾಲ್ ಎಸೆದು ಕೆಟ್ಟದಾಖಲೆ ಬರೆದರು. ಇದನ್ನೂ ಓದಿ: ಏಕದಿನ ಮಾದರಿಯಲ್ಲಿ ಏಷ್ಯಾಕಪ್ 2023 – ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್
Advertisement
Arshdeep Singh not coming slow..Five No balls in two overs…#INDvSL pic.twitter.com/FHCrpfMS1w
— Javed Iqbal (@JavedIqbalReal) January 5, 2023
207 ರನ್ ಗಳ ಬೃಹತ್ ಗುರಿ ಪಡೆದ ಭಾರತ ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಡುವೆಯೂ ಸೋಲನುಭವಿಸಿದೆ. ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಕಂಗೆಟ್ಟಿದ್ದ ವೇಳೆ ಒಂದಾದ ಸೂರ್ಯ-ಅಕ್ಷರ್ ಜೋಡಿ 6ನೇ ವಿಕೆಟ್‍ಗೆ 91 ರನ್ (40 ಎಸೆತ) ಜೊತೆಯಾಟವಾಡಿ ಗೆಲುವಿನ ಆಸೆ ಚಿಗುರಿಸಿದರು. ಆ ಬಳಿಕ ವಿಕೆಟ್ ಕೈಚೆಲ್ಲಿಕೊಂಡು ಅಂತಿಮವಾಗಿ ಭಾರತ ಸೋಲು ಕಂಡಿತು. ಶ್ರೀಲಂಕಾ 16 ರನ್‍ಗಳ ಅಂತರದ ಜಯದೊಂದಿಗೆ ಸರಣಿಯನ್ನು 1-1 ಸಮಬಲಗೊಳಿಸಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k