– ರಾಹುಲ್, ಧವನ್ ಅರ್ಧ ಶತಕ
ಪುಣೆ: ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್, ಶಿಖರ್ ಧವನ್ ಅರ್ಧ ಶತಕ ಹಾಗೂ ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ ಶ್ರೀಲಂಕಾ ತಂಡಕ್ಕೆ 202 ರನ್‍ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಪುಣೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಕೆ.ಎಲ್.ರಾಹುಲ್ 54 ರನ್ ( 36 ಎಸೆತ, 5 ಬೌಂಡರಿ, ಸಿಕ್ಸ್), ಶಿಖರ್ ಧವನ್ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್), ಮನೀಶ್ ಪಾಂಡ್ಯ ಔಟಾಗದೆ 31 ರನ್ (18 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ ಔಟಾಗದೆ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್) ಗಳಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
Advertisement
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಕಾಡಿದರು. ಇನ್ನಿಂಗ್ಸ್ ಆರಂಭದಲ್ಲೇ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರು. ಇದಕ್ಕೆ ಅನುಭವಿ ಆಟಗಾರ ಶಿಖರ್ ಧವನ್ ಸಾಥ್ ನೀಡಿದರು. ಈ ಜೋಡಿಯು ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ ಐದನೇ ಓವರ್ ಮುಕ್ತಾಯಕ್ಕೆ 52 ರನ್ ಪೇರಿಸಿತ್ತು. ಆದರೆ ಮುಂದಿನ ಐದು ಓವರ್ ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವು 92 ರನ್‍ಗೆ ಏರಿಕೆ ಕಂಡಿತು.
Advertisement
ಧವನ್ ಫಿಫ್ಟಿ:
ಶಿಖರ್ ಧವನ್ ಇನ್ನಿಂಗ್ಸ್ ನ 11ನೇ ಓವರ್‌ನ ಎರಡನೇ ಎಸೆತದಲ್ಲಿ 1 ರನ್ ಗಳಿಸಿ ಅರ್ಧ ಶತಕ ಪೂರೈಸಿದರು. ಬಳಿಕ ಸ್ಫೋಟಕ ಬ್ಯಾಟಿಂಗ್ ಮುಂದಾಗಿ ಇದೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಟಿ20ಯಲ್ಲಿ 15 ಇನ್ನಿಂಗ್ಸ್ ಗಳ ಬಳಿಕ ಶಿಖರ್ ಧವನ್ ಅರ್ಧ ಶತಕ ಗಳಿಸಿದ್ದಾರೆ. 34 ವರ್ಷದ ಶಿಖರ್ ಧವನ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧವನ್ 76 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 32 ರನ್ ಗಳಿಸಲು ಶಕ್ತರಾಗಿದ್ದರು. ಆದರೆ ಈ ಪಂದ್ಯದಲ್ಲಿ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್) ಗಳಿಸಿದರು.
Advertisement
FIFTY!
That's a fine fine knock by @SDhawan25 as he brings up his 10th T20I half-century off 34 deliveries ????????#INDvSL pic.twitter.com/rcVWQmAL7w
— BCCI (@BCCI) January 10, 2020
ಶಿಖರ್ ಧವನ್ ಬಳಿಕ ಮೈದಾಕ್ಕಿಳಿದ ಯುವ ಆಟಗಾರ ಸಂಜು ಸ್ಯಾಮ್ಸನ್ ಬಹುಬೇಗ (6 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಈ ಬೆನ್ನಲ್ಲೇ ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದರು. ಕೆ.ಎಲ್.ರಾಹುಲ್ 54 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇದು ಅವರ 9ನೇ ಅರ್ಧ ಶತಕವಾಗಿದೆ.
ಕೆ.ಎಲ್.ರಾಹುಲ್ ವಿಕೆಟ್ ಬಳಿಕ ಮೈದಾನಕ್ಕಿಳಿದ ಶ್ರೇಯಷ್ ಅಯ್ಯರ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ಎರಡನೇ ವಿಕೆಟ್ ಒಪ್ಪಿಸಿದರು. ನಿರಂತರವಾಗಿ ಮೂರು ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡ್ಯ ಉತ್ತಮ ಜೊತೆಯಾಟ ಕಟ್ಟಿಕೊಟ್ಟರು. ಈ ಜೋಡಿಯು 5ನೇ ವಿಕೆಟ್‍ಗೆ 42 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು.
FIFTY!
@klrahul11's on song as he brings up his 9th T20I half-century off 34 deliveries here in Pune.#INDvSL pic.twitter.com/yPWeStSqi4
— BCCI (@BCCI) January 10, 2020
ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ ಎರಡು ರನ್ ಕದಿಯಲು ಮುಂದಾಗಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಅವರು 26 ರನ್ (17 ಎಸೆತ, 2 ಬೌಂಡರಿ, ಸಿಕ್ಸ್) ಗಳಿಸಿ ಪೆವಿಲಿಯನ್‍ಗೆ ತರೆಳಿದರು. ಬಳಿಕ ಮೈದಾನಕ್ಕಿಳಿ ವಾಷಿಂಗ್ಟನ್ ಸುಂದರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಬಳಿಕ ಮನೀಶ್ ಪಾಂಡ್ಯ ( ಎಸೆತ, ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್) ಗಳಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
Shardul Thakur and Manish Pandey hit the ball to all parts in the last two overs, adding 34 runs to India's total. Sri Lanka are to chase 202!#INDvSL pic.twitter.com/xGjZeV4hdH
— ICC (@ICC) January 10, 2020