– ಬುಮ್ರಾ ವಿಕೆಟ್ ದಾಖಲೆ, ಶಾರ್ದೂಲ್ ಕಮಾಲ್
– 2-0 ಅಂತರಿಂದ ಸರಣಿ ಗೆದ್ದ ಕೊಹ್ಲಿ ಪಡೆ
ಪುಣೆ: ಶಾರ್ದೂಲ್ ಠಾಕೂರ್ ಆಲ್‍ರೌಂಡರ್ ಕಮಾಲ್, ಜಸ್‍ಪ್ರೀತ್ ಬುಮ್ರಾ ದಾಖಲೆ ಹಾಗೂ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್‍ನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 78 ರನ್‍ಗಳ ಬೃಹತ್ ಮೊತ್ತದ ಅಂತರದರಿಂದ ಗೆಲುವು ಸಾಧಿಸಿದೆ.
ಪುಣೆಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಓಟವನ್ನು ಮುಂದುರಿಸಿದೆ. ಟೀಂ ಇಂಡಿಯಾ ನೀಡಿದ್ದ 202ರನ್ ಗಳ ಬೃಹತ್ ಮೊತ್ತಕ್ಕೆ ಸವಾಲೋಡ್ಡಲು ಶ್ರೀಲಂಕಾ ವಿಫಲವಾಯಿತು. ಲಂಕಾ ಪರ ಏಂಜಲೊ ಮ್ಯಾಥ್ಯೂಸ್ 31 ರನ್ (20 ಎಸೆತ, ಬೌಂಡರಿ, 3 ಸಿಕ್ಸರ್), ಧನಂಜಯ ಡಿ ಸಿಲ್ವಾ 57 ರನ್ (36 ಎಸೆತ, 8 ಬೌಂಡರಿ, ಸಿಕ್ಸ್) ಪರಿಣಾಮ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಗಳಿಸಲು ಶಕ್ತವಾಯಿತು. ಇದನ್ನೂ ಓದಿ: 8 ಎಸೆತಗಳಲ್ಲಿ 22 ರನ್ ಸಿಡಿಸಿದ ಶಾರ್ದೂಲ್
Advertisement
Advertisement
ಟೀಂ ಇಂಡಿಯಾ ನೀಡಿದ್ದ 202ರನ್ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವು ಆರಂಭದಲ್ಲೇ ಮುಗ್ಗರಿಸಿತು. ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಾದ ಧನುಷ್ಕಾ ಗುಣತಿಲಕ (1 ರನ್), ಒಶಾದ ಫರ್ನಾಂಡೊ (9 ರನ್), ಕುಸಲ್ ಪೆರೆರಾ (7 ರನ್), ಅವಿಷ್ಕಾ ಫರ್ನಾಂಡೊ (2ರನ್) ಪೆಲಿವಿಯನ್ ಕಡೆಗೆ ಪರೇಡ್ ನಡೆಸಿದರು. ಇದರಿಂದಾಗಿ ಇನ್ನಿಂಗ್ಸ್ ನ 6ನೇ ಓವರ್ ಮುಕ್ತಾಯಕ್ಕೆ ಶ್ರೀಲಂಕಾ ತಂಡವು ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿತು.
Advertisement
ಬಳಿಕ ತಂಡಕ್ಕೆ ಆಸರೆಯಾದ ಏಂಜಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿ ಸಿಲ್ವಾ ಉತ್ತಮ ಜೊತೆಯಾಟ ಕಟ್ಟಿಕೊಟ್ಟರು. ಈ ಜೋಡಿ 5ನೇ ವಿಕೆಟ್‍ಗೆ 68 ರನ್‍ಗಳ ಜೊತೆಯಾಟ ನೀಡಿತು. ಆದರೆ 31 ರನ್ ಗಳಿಸಿದ್ದ ಏಂಜಲೊ ಮ್ಯಾಥ್ಯೂಸ್ ಇನ್ನಿಂಗ್ಸ್ ನ 12ನೇ ಓವರ್ ನಲ್ಲಿ ಹಾಗೂ ಧನಂಜಯ ಡಿ ಸಿಲ್ವಾ ಇನ್ನಿಂಗ್ಸ್ 14ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಆಟಗಾರರು ಎರಡಂಕಿ ದಾಟಲು ಪರದಾಡಿ ಬಹುಬೇಗ ಪೆವಿಲಿಯನ್ ಕಡೆಗೆ ಸಾಗಿದರು. ಈ ಮೂಲಕ ಶ್ರೀಲಂಕಾ ತಂಡವು 15.2 ಓವರ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು.
Advertisement
BOOOM ????????
Jasprit Bumrah is now the leading wicket-taker in T20Is for #TeamIndia ???????? pic.twitter.com/7PWeaq2Fyj
— BCCI (@BCCI) January 10, 2020
ಬುಮ್ರಾ ದಾಖಲೆ:
ಟೀಂ ಇಂಡಿಯಾ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. 2016ರಲ್ಲಿ ಟಿ20 ಪ್ರವೇಶ ಮಾಡಿದ ಬುಮ್ರಾ 44 ಇನ್ನಿಂಗ್ಸ್ ಆಡಿ 53 ವಿಕೆಟ್ ಪಡೆದಿದ್ದಾರೆ. ಇನ್ನು ತಲಾ 52 ವಿಕೆಟ್ ಪಡೆದಿರುವ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಶಾರ್ದೂಲ್ ಠಾಕೂರ್ ಬೌಲಿಂಗ್‍ನಲ್ಲೂ ಮಿಂಚಿದ್ದಾರೆ. ಮೂರು ಓವರ್ ಮಾಡಿದ ಶಾದೂಲ್ 19 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ. ಈ ಬಾರಿಯೂ ಟೀಂ ಇಂಡಿಯಾ ಯುವ ವೇಗಿ ನವದೀಪ್ ಶೈನಿ ಮಿಂಚಿದ್ದು, 3.5 ಓವರ್ ಮಾಡಿ ಅವರು 3 ವಿಕೆಟ್ ಪಡೆದು 28 ರನ್ ನೀಡಿದ್ದಾರೆ. ಉಳಿದಂತೆ ಬುಮ್ರಾ 1 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದಿದ್ದಾರೆ. ಯಜುವೇಂದ್ರ ಚಾಹಲ್ ಯಾವುದೇ ವಿಕೆಟ್ ಪಡೆಯಲಿಲ್ಲ.
Saini picks up his THIRD. Sri Lanka are all out for 123 runs.#TeamIndia win by 78 runs and win the series 2-0 ????????#INDvSL pic.twitter.com/5XwoXPeNBx
— BCCI (@BCCI) January 10, 2020
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೆ.ಎಲ್.ರಾಹುಲ್ 54 ರನ್ ( 36 ಎಸೆತ, 5 ಬೌಂಡರಿ, ಸಿಕ್ಸ್), ಶಿಖರ್ ಧವನ್ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್), ಮನೀಶ್ ಪಾಂಡ್ಯ ಔಟಾಗದೆ 31 ರನ್ (18 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ ಔಟಾಗದೆ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್) ಗಳಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.
Another clinical display from #TeamIndia to clinch the series ????????#INDvSL pic.twitter.com/t2sABuvgAB
— BCCI (@BCCI) January 10, 2020