ಟಿ20ಯಲ್ಲಿ 13 ಇನ್ನಿಂಗ್ಸ್‌ಗಳಿಂದ 50 ರನ್ ಗಡಿ ದಾಟದ ಧವನ್

Public TV
2 Min Read
dhawan 1

ಇಂದೋರ್: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಅವರು ಟಿ20ಯಲ್ಲಿ ಕಳೆದ 13 ಇನ್ನಿಂಗ್ಸ್‌ಗಳಲ್ಲಿ ಒಂದು ಬಾರಿಯೂ 50 ರನ್ ಗಡಿ ದಾಟಿಲ್ಲ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಧವನ್ ಮತ್ತೆ ಫಾರ್ಮ್ ಗೆ ಮರಳುವ ಸಾಧ್ಯತೆ ಇದೆ.

ಗುವಾಹಟಿಯಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಹಾಗೂ ಭಾರತದ ತಂಡಗಳ ನಡುವಿನ ಮೊದಲ ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲ್ಲಲು ದಾಖಲಿಸಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅದೇ ಸಮಯದಲ್ಲಿ ಶಿಖರ್ ಧವನ್ ಅವರು ಫಾರ್ಮ್ ಗೆ ಮರಳಲು ಅವಕಾಶವಿದೆ. 34 ವರ್ಷದ ಶಿಖರ್ ಧವನ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧವನ್ 76 ರನ್ ಗಳಿಸಿದ್ದರು. ಇದನ್ನೂ ಓದಿ: ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

Dhawan Rahul Practise PTI

ಧವನ್ ಕಳೆದ ವರ್ಷ 12 ಪಂದ್ಯಗಳಲ್ಲಿ 110 ಸ್ಟ್ರೈಕ್ ದರದಲ್ಲಿ 272 ರನ್ ಗಳಿಸಿದ್ದು, ತಂಡದಲ್ಲಿ ಮತ್ತೆ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಸರಣಿಯಲ್ಲಿ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ನೀಡಿ, ತಮ್ಮ ಸ್ಥಾನವನ್ನು ಭದ್ರವಾಗಿಸಿಕೊಂಡಿದ್ದಾರೆ. ಟಿ20 ಮತ್ತು ಏಕದಿನ ಪಂದ್ಯಗಳ ಒಟ್ಟು ಆರು ಇನ್ನಿಂಗ್ಸ್ ಗಳಲ್ಲಿ ಅವರು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದರು.

ಶ್ರೀಲಂಕಾ ಹಾಗೂ ಭಾರತ ತಂಡಗಳು ಎರಡು ವರ್ಷಗಳ ಬಳಿಕ ಇಂದೋರ್‍ನಲ್ಲಿ ಮುಖಾಮುಖಿಯಾಗಿವೆ. ಈ ಮೈದಾನದಲ್ಲಿ ಡಿಸೆಂಬರ್ 2017ರ ನಂತರ ಉಭಯ ತಂಡಗಳು ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 88 ರನ್‍ಗಳಿಂದ ಸೋಲಿಸಿತ್ತು. ಆಗ ಭಾರತ ಪರ ರೋಹಿತ್ ಶರ್ಮಾ 118 ಮತ್ತು ಕೆ.ಎಲ್.ರಾಹುಲ್ 89 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ರಾಹುಲ್ ಲಭ್ಯವಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮೈದಾನಕ್ಕೆ ಇಳಿಯಲಿದ್ದಾರೆ. ಆದರೆ ರೋಹಿತ್ ತಂಡದಿಂದ ಹೊರಗುಳಿದಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ.

dhawan 1

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಮನೀಶ್ ಪಾಂಡೆ, ಯುಜ್ವೇಂದ್ರ ಚಾಹಲ್, ರವೀಂದ್ರ ಜಡೇಜಾ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಆಡುವ ಇಲೆವೆನ್‍ನಿಂದ ಹೊರಗಿಡಲಾಗಿತ್ತು. ಇಂದೋರ್‍ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಡುವ ಇಲೆವೆನ್‍ನಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ತಂಡಕ್ಕೆ ಮರಳಿದ ಜಸ್ಪ್ರಿತ್ ಬುಮ್ರಾ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಅವರು ಶಾರ್ದುಲ್ ಠಾಕೂರ್ ಮತ್ತು ನವದೀಪ್ ಸೈನಿ ಅವರೊಂದಿಗೆ ವೇಗದ ಬೌಲಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *