ಮೊಹಾಲಿ: ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ದ್ವಿಶತಕ ಸಿಡಿಸಿದ ಪರಿಣಾಮ 141 ರನ್ ಗಳಿಂದ ಲಂಕಾ ವಿರುದ್ಧದ ಎರಡನೇ ಏಕದಿನದಲ್ಲಿ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ.
ಗೆಲ್ಲಲು 393 ರನ್‍ಗಳ ಕಠಿಣ ಸವಾಲು ಪಡೆದ ಲಂಕಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಲಂಕಾ ಪರ ಏಂಜಲೋ ಮಾಥ್ಯುಸ್ 111 ರನ್(132 ಎಸೆತ, 9 ಬೌಂಡರಿ, 3 ಸಿಕ್ಸರ್) ಸಿಡಿಸಿ ಪ್ರತಿರೋಧ ಒಡ್ಡಿದ್ದರು. ಚಹಲ್ 3 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಪಡೆದರು.
Advertisement
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ ವಿಶ್ವದಾಖಲೆಯ ದ್ವಿಶತಕದಿಂದಾಗಿ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿತ್ತು. ಔಟಾಗದೇ 208 ರನ್(153 ಎಸೆತ, 13 ಬೌಂಡರಿ, 12 ಸಿಕ್ಸರ್) ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಬಾರಿ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ರೊಹಿತ್ ಶರ್ಮಾ ಪಾತ್ರರಾಗಿದ್ದಾರೆ.
Advertisement
Advertisement
ಇದರ ಜೊತೆ ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್ ಹೊಡೆದ ಎರಡನೇ ಆಟಗಾರನೆಂಬ ಪಟ್ಟ ರೋಹಿತ್ ಗೆ ಲಭಿಸಿದೆ. ಈ ಪಂದ್ಯವನ್ನು ರೋಹಿತ್ ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ರಿತಿಕಾ ಅವರು ಸ್ಟೇಡಿಯಂನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ರೋಹಿತ್ ಶರ್ಮಾ ದ್ವಿಶತಕ ಸಿಡಿಸುತ್ತಿದ್ದಂತೆ ರಿತಿಕಾ ಸಂತೋಷದಿಂದ ಆನಂದ ಭಾಷ್ಪ ಸುರಿಸಿದ್ದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
Advertisement
ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದರು.
ರೋಹಿತ್ ಶರ್ಮಾ ಔಟಾಗದೇ 208 ರನ್(13 ಬೌಂಡರಿ, 12 ಸಿಕ್ಸರ್), ಶಿಖರ್ ಧವನ್ 68 ರನ್(67 ಎಸೆತ, 9 ಬೌಂಡರಿ), ಶ್ರೇಯಸ್ ಅಯ್ಯರ್ 88 ರನ್(70 ಎಸೆತ, 9 ಬೌಂಡರಿ, 2 ಸಿಕ್ಸರ್) ಧೋನಿ 7 ರನ್, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದ್ದರು.
115 ಎಸೆತದಲ್ಲಿ ಶತಕ ಹೊಡೆದ ರೋಹಿತ್ ಶರ್ಮಾ ನಂತರದ 100 ರನ್ ಗಳನ್ನು 36 ಎಸೆತದಲ್ಲಿ ಹೊಡೆದಿದ್ದರು. ವಿಶೇಷ ಏನೆಂದರೆ ಶತಕದ ಬಳಿಕ 18 ಎಸೆತದಲ್ಲಿ 50 ರನ್ ಹೊಡೆದ ನಂತರ 18 ಎಸೆತದಲ್ಲಿ 50 ರನ್ ಹೊಡೆದು ದ್ವಿಶತಕ ಪೂರ್ಣಗೊಳಿಸಿದ್ದರು. ರೋಹಿತ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ಕೊನೆಯ 57 ಎಸೆತದಲ್ಲಿ 142 ರನ್ ಗಳಿಸಿತ್ತು.
ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ 7 ವಿಕೆಟ್ ಗಳಿಂದ ಜಯಗಳಿತ್ತು. ಸರಣಿಯ ಕೊನೆಯ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ಡಿಸೆಂಬರ್ 17 ಭಾನುವಾರದಂದು ನಡೆಯಲಿದೆ.
ರೋಹಿತ್ ಶರ್ಮಾ ಈ ಹಿಂದೆ 2013ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್(158 ಎಸೆತ, 12 ಬೌಂಡರಿ, 16 ಸಿಕ್ಸರ್) ಹೊಡೆಯುವ ಮೂಲಕ ಮೊದಲ ದ್ವಿಶತಕ ಹೊಡೆದಿದ್ದರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿತ್ತು. 2014ರ ನವೆಂಬರ್ ನಲ್ಲಿ ಲಂಕಾ ವಿರುದ್ಧ ರೋಹಿತ್ ಶರ್ಮಾ 264 ರನ್(173 ಎಸೆತ, 33 ಬೌಂಡರಿ, 9 ಸಿಕ್ಸರ್) ಸಿಡಿಸಿದ್ದರು. ಈ ಮ್ಯಾಚ್ ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 404 ರನ್ ಗಳಿಸಿತ್ತು.
ಸಚಿನ್ ತೆಂಡೂಲ್ಕರ್ (200*) ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕ ಸಾಧನೆ ಮಾಡಿದ್ದರೆ ನಂತರ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (219) ಸಹ ಇದೇ ಸಾಲಿಗೆ ಸೇರಿದ್ದರು. ವೆಸ್ಟ್‍ಇಂಡೀಸ್‍ನ ಕ್ರಿಸ್ ಗೇಲ್ (215) ಮತ್ತು ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ (237*) ದ್ವಿಶತಕ ಹೊಡೆದಿದ್ದಾರೆ.
ರೋಹಿತ್ ರನ್ ಏರಿದ್ದು ಹೀಗೆ:
50 ರನ್ – 65 ಎಸೆತ, 5 ಬೌಂಡರಿ
100 ರನ್ – 115 ಎಸೆತ, 115 ಎಸೆತ, 9 ಬೌಂಡರಿ, 1 ಸಿಕ್ಸರ್
150 ರನ್ – 133 ಎಸೆತ, 10 ಬೌಂಡರಿ, 7 ಸಿಕ್ಸರ್
200 ರನ್ – 151 ಎಸೆತ, 13 ಬೌಂಡರಿ, 11 ಸಿಕ್ಸರ್
208 ರನ್ – 153 ಎಸೆತ, 13 ಬೌಂಡರಿ, 12 ಸಿಕ್ಸರ್
ಭಾರತದ ರನ್ ಏರಿದ್ದು ಹೀಗೆ:
50 ರನ್ – 73 ಎಸೆತ
100 ರನ್ – 116 ಎಸೆತ
150 ರನ್ – 161 ಎಸೆತ
200 ರನ್ – 205 ಎಸೆತ
250 ರನ್ – 243 ಎಸೆತ
300 ರನ್ – 263 ಎಸೆತ
350 ರನ್ – 284 ಎಸೆತ
392 ರನ್ – 300 ಎಸೆತ