ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮುನ್ನಡೆಯತ್ತ ಸಾಗಿದೆ. ಬ್ಯಾಟಿಂಗ್‍ನಲ್ಲಿ ಮಿಂಚಿದ ವಿಕೆಟ್ ಕೀಪರ್ ರಿಷಬ್ ಪಂತ್ ಶತಕದಂಚಿನಲ್ಲಿ ಔಟ್ ಆಗಿ ನಿರಾಸೆ ಅನುಭವಿಸಿದ್ದಾರೆ.
Advertisement
ಕೊಹ್ಲಿಯ ನೂರನೇ ಟೆಸ್ಟ್‌ನ ಸಂಭ್ರಮದೊಂದಿಗೆ ಆಡಿದ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನದೊಂದಿಗೆ ಗಮನಸೆಳೆದರು. ದಿನದಾಟದ ಅಂತ್ಯಕ್ಕೆ ಭಾರತ 85 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 375 ರನ್ ಪೇರಿಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಇದನ್ನೂ ಓದಿ: ನೂರನೇ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲಿಗಲ್ಲು ಬರೆದ ವಿರಾಟ್ ಕೊಹ್ಲಿ
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 51 ರನ್ (61 ಎಸೆತ) ಸೇರಿಸಿ ಬೇರ್ಪಟ್ಟಿತು. ರೋಹಿತ್ 29 ರನ್ (28 ಎಸೆತ, 6 ಬೌಂಡರಿ) ಮತ್ತು ಅಗರ್ವಾಲ್ 33 ರನ್ (49 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ಒಂದಾದ ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದರು. ಈ ಜೋಡಿ ಮೂರನೇ ವಿಕೆಟ್‍ಗೆ 90 ರನ್ (155 ಎಸೆತ) ಜೊತೆಯಾಟವಾಡಿ ಮಿಂಚಿತು.
Advertisement
ವಿಹಾರಿ 58 ರನ್ (128 ಎಸೆತ, 5 ಬೌಂಡರಿ) ಅರ್ಧಶತಕ ಸಿಡಿಸಿ ಗಮನಸೆಳೆದರೆ, ಕೊಹ್ಲಿ 45 ರನ್ (76 ಎಸೆತ, 5 ಬೌಂಡರಿ) ಸಿಡಿಸಿ ಅರ್ಧಶತಕ ವಂಚಿತರಾದರು. ಇವರಿಬ್ಬರ ಬಳಿಕ ಭಾರತವನ್ನು ಆಧಾರಿಸಿದ್ದು, ರಿಷಬ್ ಪಂತ್, ತಮ್ಮ ಭರ್ಜರಿ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮೂಲಕ ಲಂಕಾ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 27 ರನ್ (48 ಎಸೆತ, 3 ಬೌಂಡರಿ) ಬಾರಿಸಿ ಎಲ್‍ಬಿಡಬ್ಲ್ಯೂ ಆಗಿ ಔಟ್ ಆದರು. ಇದನ್ನೂ ಓದಿ: ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ
ಆ ಬಳಿಕ ಒಂದಾದ ಪಂತ್, ರವೀಂದ್ರ ಜಡೇಜಾ ಜೋಡಿ ಇನ್ನೊಂದು ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ನೆರವಾಯಿತು. 6 ನೇ ವಿಕೆಟ್‍ಗೆ 104 ರನ್ (118 ಎಸೆತ) ಕೊಳ್ಳೆ ಹೊಡೆದ ಈ ಜೋಡಿ ಲಂಕಾ ತಂಡಕ್ಕೆ ಕಾಟ ಕೊಟ್ಟಿತ್ತು. ಈ ವೇಳೆ ಇನ್ನೇನೂ ಶತಕದಂಚಿನಲ್ಲಿದ್ದ ಪಂತ್ 96 ರನ್ (97 ಎಸೆತ, 9 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡು ಶತಕ ವಂಚಿತರಾದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ
ಮೊದಲ ದಿನದಾಟದಂತ್ಯಕ್ಕೆ ರವೀಂದ್ರ ಜಡೇಜಾ ಅಜೇಯ 45 ರನ್ (82 ಎಸೆತ, 5 ಬೌಂಡರಿ) ಮತ್ತು ಆರ್ ಅಶ್ವಿನ್ 10 ರನ್ (11 ಎಸೆತ, 2 ಬೌಂಡರಿ) ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.