ಗುವಾಹಟಿ: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ (ODI) 98 ರನ್ ಗಳಿಸಿದ್ದ ಶ್ರೀಲಂಕಾ ನಾಯಕ ದಾಸುನ್ ಶನಕ (Dasun Shanaka) ಅವರನ್ನು ಮಂಕಡ್ ರನೌಟ್ ಮೂಲಕ ವೇಗಿ ಮೊಹಮ್ಮದ್ ಶಮಿ (Mohammed Shami) ಔಟ್ ಮಾಡಿದರು. ಆ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma), ಶಮಿ ಬಳಿ ಚರ್ಚಿಸಿ ಮೂರನೇ ಅಂಪೈರ್ ಮನವಿಯನ್ನು ವಾಪಸ್ ಪಡೆದು ಕ್ರೀಡಾ ಸ್ಫೂರ್ತಿ ಮರೆದಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Advertisement
ಭಾರತ ನೀಡದ 374 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಪರ ನಾಯಕ ದಾಸುನ್ ಶನಕ ಕೆಚ್ಚೆದೆಯ ಹೋರಾಟ ನಡೆಸಿದರು. ಭರ್ಜರಿ ಬ್ಯಾಟಿಂಗ್ ಮೂಲಕ ಲಂಕಾಗೆ ಗೆಲುವಿನ ಆಸೆ ಮೂಡಿಸಿದ ಶನಕ ಕೊನೆಯ ಓವರ್‌ನಲ್ಲಿ ರನೌಟ್‍ನಿಂದ ಬಚಾವ್ ಆಗಿ ಶತಕ ಪೂರೈಸುವಂತಹ ಘಟನೆಯೊಂದು ಮೊದಲ ಏಕದಿನ ಪಂದ್ಯದ ಕೊನೆಯ ಕ್ಷಣದಲ್ಲಿ ಕಾಣಸಿಕ್ಕಿತು.
Advertisement
Advertisement
ಲಂಕಾ ಸೋಲಿನ ಹೊಸ್ತಿಲಲ್ಲಿತ್ತು. ಶನಕ ಇನ್ನೇನು ಶತಕ ಸಿಡಿಸಿ ಸೋಲಿನ ನಡುವೆಯೂ ಹೀರೋ ಆಗುವ ಎಲ್ಲಾ ಲಕ್ಷಣಗಳಿತ್ತು. ಆದರೆ ಕೊನೆಯ ಓವರ್‌ನ 4 ಎಸೆತದಲ್ಲಿ ಮೊಹಮ್ಮದ್ ಶಮಿ ನಾನ್‍ಸ್ಟ್ರೈಕ್‍ನಲ್ಲಿದ್ದ ಶನಕರನ್ನು ಮಂಕಡ್ ಮೂಲಕ ರನೌಟ್ ಬಲೆಗೆ ಬೀಳಿಸಿದರು. ಈ ತೀರ್ಪನ್ನು ಅಂಪೈರ್ ಮೂರನೇ ಅಂಪೈರ್‌ಗೆ ವರ್ಗಾಹಿಸಿದರು. ಇದು ಔಟ್ ಕೂಡ ಆಗಿತ್ತು. ಆದರೆ ಕೂಡಲೇ ರೋಹಿತ್ ಶರ್ಮಾ, ಶಮಿ ಬಳಿ ಬಂದು ಮೂರನೇ ಅಂಪೈರ್ ಮನವಿಯನ್ನು ವಾಪಸ್ ಪಡೆಯುವ ಕುರಿತು ಚರ್ಚಿಸಿ ವಾಪಸ್ ಪಡೆದರು. ಈ ಮೂಲಕ ಶತಕ ವಂಚಿತರಾಗುತ್ತಿದ್ದ ಶನಕಗೆ ಜೀವದಾನ ನೀಡಿ ಶತಕ ಪೂರೈಸಲು ಶಮಿ ಹಾಗೂ ರೋಹಿತ್ ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಬೆಂಕಿ ಎಸೆತ ಎಸೆದ ಉಮ್ರಾನ್ ಮಲಿಕ್ – ಗಂಟೆಗೆ 156 ಕಿ.ಮೀ ವೇಗದಲ್ಲಿ ಬೌಲಿಂಗ್ ದಾಖಲೆ
Advertisement
ಈ ನಡೆ ಕಂಡ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದರು. ಪಂದ್ಯದ ಬಳಿಕ ಈ ಕುರಿತು ಮಾತನಾಡಿದ ರೋಹಿತ್, ಶಮಿ ಈ ರೀತಿ ಔಟ್ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. 98 ರನ್‍ಗಳಿಸಿದ್ದ ಶನಕರನ್ನು ಈ ರೀತಿ ಔಟ್ ಮಾಡಲು ನಾವು ಒಪ್ಪದೆ ಬ್ಯಾಟಿಂಗ್ ಮುಂದುವರಿಸಲು ಸೂಚಿಸಿದೆವು ಎಂದರು. ಇದನ್ನೂ ಓದಿ: ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ
This is really a heart warming ❤️ moment for all of us when shami out danush shanaka at non strikers end at 98 runs but Rohit Sharma withdrawal that appeal..
Golden heart❤#RohitSharma???? @ImRo45 pic.twitter.com/uAUergce7g
— ????????-???????????? हैं। ???????? FC 45° (@imro45sh) January 11, 2023
ಮಂಕಡ್ ಔಟ್:
ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k