ಧರ್ಮಶಾಲಾ: ಟೆಸ್ಟ್ ಸರಣಿಯ ಗೆಲುವಿನ ಗುಂಗಿನಲ್ಲಿರುವ ಟೀಮ್ ಇಂಡಿಯಾಗೆ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ತಿರುಗೇಟು ನೀಡಿರುವ ಸಿಂಹಳೀಯರು, ಗೆಲುವಿನ ಮುನ್ನುಡಿ ಬರೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ದೆಹಲಿಯ ವಾಯು ಮಾಲಿನ್ಯದ ಬಿಸಿಯ ಬಳಿಕ ಪ್ರಕೃತಿ ರಮಣೀಯ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ. ನಾಯಕತ್ವದ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ತಿಸಾರ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಲಂಕಾ ಬೌಲರ್‍ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಟೀಂ ಇಂಡಿಯಾ ಖಾತೆ ತರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಇನ್ನು ಟೀಂ ಇಂಡಿಯಾ 16 ರನ್ ಗಳಿಸುವಷ್ಟರಲ್ಲಿ ಐದು ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿ ನೆಗೆಟಿವ್ ದಾಖಲೆಗೆ ಕಾರಣರಾದರು. ಈ ಹಿಂದೆ 1983ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಆ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು.
Advertisement
Advertisement
ಟೀಂ ಇಂಡಿಯಾ ಅನುಭವಿ ಆರಂಭಿಕ ಆಟಗಾರ ಶೇಖರ್ ಧವನ್ ಇನ್ನಿಂಗ್ಸ್‍ನ ಎರಡನೇ ಓವರ್‍ನಲ್ಲಿ ಲಂಕಾ ಬೌಲರ್ ಮ್ಯಾಥ್ಯೂಸ್ ಎಸೆತದಲ್ಲಿ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ 13 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಲಕ್ಮಲ್ ಬೌಲಿಂಗ್ ನಲ್ಲಿ ಕೀಪರ್ ಡಿಕ್ವೆಲ್ಲಾ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಂಕದಲ್ಲಿ ಕ್ರೀಸ್‍ಗಿಳಿದ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಲಂಕಾ ಬೌಲರ್ ದಾಳಿಯನ್ನು ಎದುರಿಸಲಾಗದೆ 9 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.
Advertisement
ರಹಾನೆ ಜಾಗದಲ್ಲಿ ಆಡಲು ಅವಕಾಶ ಪಡೆದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ, ಬಂದಷ್ಟೇ ವೇಗದಲ್ಲಿ ಮರಳಿದರು. ಇನ್ನು, ಮತ್ತೊಮ್ಮೆ ತನ್ನ ಆಯ್ಕೆಯನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಕನ್ನಡಿಗ ಮನೀಶ್ ಪಾಂಡೆ ತಂಡಕ್ಕೆ 2 ರನ್ ಕೊಡುಗೆ ನೀಡಿದರು. ಟೀಂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಕ್ರೀಸ್ ಗಿಳಿದ ಹಾರ್ದಿಕ್ ಪಾಂಡ್ಯಾ ಬಿರುಸಿನಿಂದ ಬ್ಯಾಟ್ ನಡೆಸಿ 10 ಎಸೆತಗಳಲ್ಲಿ 2 ಬೌಂಡಿರಿಗಳ ನೆರವಿನಿಂದ 10 ರನ್ ಗಳಿಸಿ ಪ್ರದೀಪ್‍ಗೆ ವಿಕೆಟ್ ಒಪ್ಪಿಸಿದರು.
Advertisement
ನಂತರ ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಮಾಜಿ ನಾಯಕ ದೋನಿ ತಂಡಕ್ಕೆ ಆಸರೆಯಾಗಿ 87 ಎಸೆತಗಳಲ್ಲಿ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರ, ಚಹಾಲ್ ಶೂನ್ಯ ಸಂಪಾದಿಸಿದರೆ. ಕುಲ್ದೀಪ್ ಯಾದವ್ 25 ಎಸೆತಗಲ್ಲಿ 19 ರನ್ ಗಳಿಸಿ ಟೀಂ ಇಂಡಿಯಾ ಮೊತ್ತ ಮೂರಂಕಿ ಗಡಿದಾಟಲು ನೆರವಾದರು.
ಶ್ರೀಲಂಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಲಕ್ಮಲ್ 10 ಓವರ್ 13 ರನ್ ಮಾತ್ರ ನೀಡಿ. ನಾಲ್ಕು ಮೆಡಿನ್ ಓವರ್‍ಗಳೊಂದಿಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು.
ಇನ್ನೂಳಿದಂತೆ ಲಂಕಾದ ಫರ್ನಾಂಡೋ 2 ವಿಕೆಟ್ ಹಾಗೂ ಮ್ಯಾಥ್ಯೂಸ್, ಪೆರೇರಾ, ಧನುಂಜಯ್, ಪತಿರಾಣಾ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಅಲ್ಪ ಮೊತ್ತ ಪಡೆಯಲು ಕಾರಣರಾದರು.
ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ :
0/1
2/2
8/3
16/4
16/5
28/6
29/7
70/8
87/9
112/10