ಜೋಹಾನ್ಸ್ ಬರ್ಗ್: ದಕ್ಷಿಣ ಆಪ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಆಡಲು ಟೀಂ ಇಂಡಿಯಾ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
Advertisement
ನಾಳೆಯಿಂದ ಆರಂಭವಾಗುತ್ತಿರುವ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ನಾಳೆ ಸೆಂಚುರಿಯನ್ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ. ಈ ವರ್ಷ ಡಿಸೆಂಬರ್ 26 ರಂದು ಆರಂಭವಾಗುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಎದುರುಬದುರಾದರೆ ಇತ್ತ ಆಫ್ರಿಕಾದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸೆಣಸಾಡಲಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್
Advertisement
Advertisement
ಡಿ.26ಕ್ಕೆ ಆರಂಭವಾಗುವ ಟೆಸ್ಟ್ ಬಾಕ್ಸಿಂಗ್ ಡೇ ಯಾಕೆ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಎಂದು ಕರೆಯಲು ಕಾರಣವಿದೆ. ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‍ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಜರ್ಮನಿ, ಪೊಲೆಂಡ್, ರೋಮೆನಿಯಾ, ಹಂಗೇರಿ, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‍ಮಸ್ ಡೇ ಎಂದು ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕ ರಜಾ ದಿನವಾಗಿದ್ದು, ಐರ್ಲೆಂಡ್ ಹಾಗೂ ಸ್ಪೇನ್‍ನ ಕ್ಯಾಟಲೋನಿಯಾ ರೀಜನ್‍ನಲ್ಲಿ ‘ಸೈಂಟ್ ಸ್ಟೀಫನ್ ಡೇ’ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?
Advertisement
ಈ ಹಿಂದೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳು ಬ್ರಿಟಿಷರ ವಸಹತು ಆಗಿತ್ತು. ಈ ಸಮಯದಲ್ಲಿ ಇಂಗ್ಲೆಂಡ್ ರಾಜಮನೆತನದವರು ಕ್ರಿಸ್ಮಸ್ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಡಿ.26 ರಂದು ಬಾಕ್ಸ್ ಮೂಲಕ ಉಡುಗೊರೆ ನೀಡುತ್ತಿದ್ದರು. ಬಾಕ್ಸ್‌ಗಳಲ್ಲಿ ಸಿಹಿ ತಿಂಡಿ ಸೇರಿದಂತೆ ಹಲವು ಉಡುಗೊರೆ ಡಿ.26 ರಂದು ಸಿಗುತ್ತಿದ್ದ ಕಾರಣ ಈ ದಿನಕ್ಕೆ ‘ಬಾಕ್ಸಿಂಗ್ ಡೇ’ ಎಂಬ ಹೆಸರು ಬಂತು. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ “ಬಾಕ್ಸಿಂಗ್ ಡೇ ಟೆಸ್ಟ್” ಪಂದ್ಯ ಎಂಬ ಹೆಸರು ಬಂದಿದೆ. ಇದನ್ನೂ ಓದಿ: ಇಂಡೋ, ಆಸೀಸ್ ಮ್ಯಾಚ್ – ಬಾಕ್ಸಿಂಗ್ ಡೇ ಟೆಸ್ಟ್ ಎಂದು ಯಾಕೆ ಕರೆಯುತ್ತಾರೆ?
.@imVkohli's transformation ????
Excitement about SA challenge ????
Initial few months as Head Coach ☺️
Rahul Dravid discusses it all as #TeamIndia gear up for the first #SAvIND Test in Centurion. ???? ????
Watch the full interview ???? ????https://t.co/2H0FlKQG7q pic.twitter.com/vrwqz5uQA8
— BCCI (@BCCI) December 25, 2021
ಹಲವು ಅಡೆತಡೆಗಳ ಮಧ್ಯೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಪ್ರವಾಸಕ್ಕೂ ಮೊದಲು ಕೊರೊನಾ ಕಾಟ, ನಾಯಕತ್ವ ಬದಲಾವಣೆ, ಬಯೋ ಬಬಲ್ ಹೀಗೆ ಅನೇಕ ಸಮಸ್ಯೆ ಟೀಂ ಇಂಡಿಯಾದಲ್ಲಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಉತ್ಸಾಹ ತುಂಬಿ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಕಟ್ಟಿದ್ದಾರೆ.