ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಈ ಮೂಲಕ ಸರಣಿ 2-2ರಲ್ಲಿ ಸಮಬಲದೊಂದಿಗೆ ನಿರಾಶಾದಾಯಕ ಅಂತ್ಯಗೊಂಡಿದೆ.
Advertisement
ಸರಣಿ 2-2ರಲ್ಲಿ ಸಮಬಲ ಸಾಧಿಸಿದ್ದ ಉಭಯ ತಂಡಗಳಿಗೂ ಚಿನ್ನಸ್ವಾಮಿಯಲ್ಲಿ ನಡೆದ ಇಂದಿನ ಪಂದ್ಯ ಫೈನಲ್ ಪಂದ್ಯವಾಗಿತ್ತು. ಹಾಗಾಗಿ ಬ್ಯಾಟಿಂಗ್ ಸ್ನೇಹಿ ಪಿಚ್‍ನಲ್ಲಿ ಇಂದು ರನ್ ಪ್ರವಾಹ ಹರಿಯುವ ಸಾಧ್ಯತೆ ಇತ್ತು. ಆದರೆ ಪಂದ್ಯಕ್ಕೆ ವರುಣ ಅಡ್ಡಿ ಬಂದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲು ಬಿಸಿಸಿಐ ತೀರ್ಮಾನಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯವನ್ನು ಗೆದ್ದು ಸಮಬಲಕ್ಕೆ ತೃಪ್ತಿ ಪಟ್ಟಿದೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ
Advertisement
For his impressive bowling performance against South Africa, @BhuviOfficial bags the Payer of the Series award. ????????#TeamIndia | #INDvSA | @Paytm pic.twitter.com/gcIuFS4J9y
— BCCI (@BCCI) June 19, 2022
Advertisement
ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದ ಪರಿಣಾಮ ಪಂದ್ಯ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಆಫ್ರಿಕಾ ನಾಯಕ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ 15 ರನ್ (7 ಎಸೆತ, 2 ಸಿಕ್ಸ್) ಬಾರಿಸಿ ಲುಂಗಿ ಎನ್‍ಗಿಡಿ ಬೌಲಿಂಗ್‍ನಲ್ಲಿ ಬೌಲ್ಡ್ ಆದರು. ಇವರ ಹಿಂದೆ ಇನ್ನೋರ್ವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ 10 ರನ್ (12 ಎಸೆತ, 1 ಬೌಂಡರಿ) ಬಾರಿಸಿ ಔಟ್ ಆದರು.
Advertisement
???? Update ????
Play has heen officially called off.
The fifth & final @Paytm #INDvSA T20I has been abandoned due to rain. #TeamIndia pic.twitter.com/tQWmfaK3SV
— BCCI (@BCCI) June 19, 2022
ಲುಂಗಿ ಎನ್‍ಗಿಡಿ ಎರಡು ವಿಕೆಟ್ ಕಿತ್ತು ಯಶಸ್ಸು ಗಳಿಸುತ್ತಿದ್ದಂತೆ ಮತ್ತೆ ಮಳೆ ಆರಂಭವಾಯಿತು. ಈ ವೇಳೆ 3.3 ಓವರ್‌ಗಳಲ್ಲಿ ಭಾರತ ತಂಡ 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿತ್ತು. ಆ ಬಳಿಕ ಮಳೆ ಬಿಡದ ಕಾರಣ ಪಂದ್ಯ ಯಾವುದೇ ಫಲಿತಾಂಶ ಕಾಣದೆ ರದ್ದುಗೊಂಡಿದೆ.