ಮುಂಬೈ: ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಾಳುವಾಗಿ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 (T20) ಪಂದ್ಯದಿಂದ ಹೊರಗುಳಿಯುತ್ತಿದ್ದಂತೆ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್‍ರನ್ನು (Mohammed Siraj) ಆಯ್ಕೆ ಮಾಡಲಾಗಿದೆ.
Advertisement
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ಆ ಬಳಿಕ ಗಾಯಳುವಾಗಿರುವ ಕಾರಣ ಮುಂದಿನ 2 ಟಿ20 ಪಂದ್ಯ ಮತ್ತು ಟಿ20 ವಿಶ್ವಕಪ್‍ನಿಂದ ಬುಮ್ರಾ ಹೊರನಡೆದಿದ್ದಾರೆ. ಆಫ್ರಿಕಾ ಸರಣಿಗೆ ಮಾತ್ರ ಬುಮ್ರಾ ಬದಲು ಸಿರಾಜ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ
Advertisement
Advertisement
ಟಿ20 ವಿಶ್ವಕಪ್‍ನಿಂದ (T20 World Cup) ಬುಮ್ರಾ ಹೊರಗುಳಿದ ಬಳಿಕ ಅವರ ಬದಲಿ ಆಟಗಾರನ ನೇಮಕವನ್ನು ಬಿಸಿಸಿಐ (BCCI) ಇನ್ನೂ ಮಾಡಿಲ್ಲ. ಇದೀಗ ಮೊಹಮ್ಮದ್ ಶಮಿ, ದೀಪಕ್ ಚಹರ್ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಪೈಪೋಟಿ ಇದೆ. ಈಗಾಗಲೇ ಶಮಿ ಮತ್ತು ಚಹರ್ ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್
Advertisement
ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಬಿಸಿಸಿಐ ವೈದ್ಯರ ತಂಡ ಬುಮ್ರಾ ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಬುಮ್ರಾ ಕೆಲ ದಿನಗಳ ಕಾಲ ವೈದ್ಯರ ನಿಗಾದಲ್ಲಿ ಇರಲಿದ್ದಾರೆ. 6 ತಿಂಗಳ ಕಾಲ ಬುಮ್ರಾ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಟಿ20 ತಂಡದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು, ಇದೀಗ ಬುಮ್ರಾ ಕೂಡ ತಂಡದಿಂದ ದೊರವಾಗಿರುವುದು ತಂಡಕ್ಕೆ ಹೊಡೆತ ನೀಡಿದೆ.