ಇಂದೋರ್: ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ 3ನೇ ಟಿ20 (T20) ಪಂದ್ಯದಲ್ಲಿ ರನ್ ಮಳೆ ಸುರಿದರೆ, ಇನ್ನೊಂದೆಡೆ ಟೀಂ ಇಂಡಿಯಾ ವೇಗಿ ದೀಪಕ್ ಚಹರ್ (Deepak Chahar) ಬೌಲಿಂಗ್ ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ (Tristan Stubbs) ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್‌ಗೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಔಟ್ ಮಾಡದೇ ಸ್ಟಬ್ಸ್‌ಗೆ ಎಚ್ಚರಿಕೆ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ.
Advertisement
ಪಂದ್ಯದ 16ನೇ ಓವರ್‌ನಲ್ಲಿ ಸ್ಟಬ್ಸ್ ಅವರನ್ನು ಮಂಕಡ್ (Mankad) ರನೌಟ್ ಮೂಲಕ ಔಟ್ ಮಾಡುವ ಅವಕಾಶ ದೀಪಕ್ ಚಹರ್ ಮುಂದಿತ್ತು. 16ನೇ ಓವರ್‌ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್‍ನಿಂದ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದೀಪಕ್ ಚಹರ್ ಬೌಲಿಂಗ್ ಮಾಡದೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಚಹರ್ ಔಟ್ ಮಾಡದೇ ಸ್ಟಬ್ಸ್‌ಗೆ ಕಣ್ಸನ್ನೆಯಲ್ಲೇ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಆಫ್ರಿಕಾಗೆ 49 ರನ್‌ಗಳ ಭರ್ಜರಿ ಜಯ – ಸರಣಿ ಗೆದ್ದ ಟೀಂ ಇಂಡಿಯಾ
Advertisement
Advertisement
ಆ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲದಿನಗಳಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ (Deepti Sharma) ಮಾಡಿದ್ದ ಮಂಕಡ್ ರನೌಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿಯ ನೂತನ ನಿಯಮದ ಪ್ರಕಾರ ಮಂಕಡ್ ರನೌಟ್‍ನ್ನು ಅಧಿಕೃತವಾಗಿ ರನೌಟ್ ಎಂದು ಪರಿಗಣಿಸಲಾಗಿದೆ. ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿಮ್ಮ ಸೇವೆ ತಂಡಕ್ಕೆ ಅಗತ್ಯವಿಲ್ಲ – ಹೆಟ್ಮೆಯರ್‌ರನ್ನು T20 ವಿಶ್ವಕಪ್‍ನಿಂದ ಹೊರಗಿಟ್ಟ CWI
Advertisement
Deepak Chahar ????
Tristan Stubbs ????#INDvsSA pic.twitter.com/DbnawYv18S
— Cricket Anand ???? (@cricanandha) October 4, 2022
ಈ ಮಧ್ಯೆ ಚಹರ್ ಮಾತ್ರ ತಮಗೆ ಔಟ್ ಮಾಡುವ ಅವಕಾಶವಿದ್ದರೂ ಯುವ ಆಟಗಾರನಿಗೆ ಈ ಬಗ್ಗೆ ಎಚ್ಚರಿಕೆ ನೀಡಿ ತಮ್ಮಲ್ಲಿರುವ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ. ಇದೀಗ ಚಹರ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.
ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್‍ನಿಂದ ಅಬ್ಬರಿಸಿದ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ 49 ರನ್‍ಗಳಿಂದ ಭರ್ಜರಿ ಜಯಗಳಿಸಿತು. ಗೆಲ್ಲಲು 228 ರನ್‍ಗಳ ಕಠಿಣ ಗುರಿಯನ್ನು ಪಡೆದ ಭಾರತ 18.3 ಓವರ್‌ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯವನ್ನು ಸೋತರೂ ಭಾರತ ಮಾಸ್ಟರ್ ಕಾರ್ಡ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.