ರಾಜ್‍ಕೋಟ್: ಬ್ಯಾಟಿಂಗ್‍ನಲ್ಲಿ ದಿನೇಶ್ ಕಾರ್ತಿಕ್ ಹೋರಾಟ ಮತ್ತು ಬೌಲಿಂಗ್‍ನಲ್ಲಿ ಅವೇಶ್ ಖಾನ್ ಮಿಂಚಿನ ಬೌಲಿಂಗ್ ಮೂಲಕ ಆಫ್ರಿಕಾಗೆ ಸತತ ಸೋಲಿನ ರುಚಿ ತೋರಿಸಿದ್ದಾರೆ. ಭಾರತ ತಂಡ 82 ರನ್‍ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿಕೊಂಡಿದೆ.
ಭಾರತ ನೀಡಿದ 170 ರನ್‍ಗಳ ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಅನುಭವಿಸಿದ ಬಳಿಕ ಚೇತರಿಕೆ ಕಾಣಲೇ ಇಲ್ಲ. ಭಾರತದ ಪರ ಅವೇಶ್ ಖಾನ್ 4 ವಿಕೆಟ್ ಕಿತ್ತು ಆಫ್ರಿಕಾ ತಂಡಕ್ಕೆ ಬ್ರೇಕ್ ಮೇಲೆ ಬ್ರೇಕ್ ನೀಡಿ ಪರದಾಡುವಂತೆ ಮಾಡಿದರು. ಅಂತಿಮವಾಗಿ ಆಫ್ರಿಕಾ ಓವರ್‌ಗಳಲ್ಲಿ 16.5 ಓವರ್‌ಗಳಲ್ಲಿ 82 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿ 2-2ರಲ್ಲಿ ಸಮಬಲ ಗೊಂಡಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ.
Advertisement
Advertisement
ಚೇಸಿಂಗ್ ಆರಂಭದಲ್ಲಿ ಡಿಕಾಕ್ 14 ರನ್ (13 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಬಳಿಕ ನಾಯಕ ತೆಂಬ ಬವುಮ ಗಾಯಳುವಾಗಿ ಹೊರನಡೆದರು. ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಆಫ್ರಿಕಾ ದಿಢೀರ್ ಕುಸಿತ ಕಂಡಿತು. ಭಾರತ ಪರ ಅವೇಶ್ ಖಾನ್ 4 ವಿಕೆಟ್ ಕಿತ್ತು ಮಿಂಚಿದರೆ, ಚಹಲ್ 2, ಹರ್ಷಲ್ ಪಟೇಲ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಆಫ್ರಿಕಾಗೆ ಖೆಡ್ಡಾ ತೋಡಿದರು.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಋತುರಾಜ್ ಗಾಯಕ್ವಾಡ್ 5 ರನ್, ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಒಂದು ಕಡೆ ಬೌಂಡರಿ, ಸಿಕ್ಸ್ ಸಿಡಿಸುತ್ತ ಅಬ್ಬರಿಸುವ ಸೂಚನೆ ನೀಡಿದ ಇಶನ್ ಕಿಶಾನ್ ಆಟ 27 ರನ್ (26 ಎಸೆತ, 3 ಬೌಂಡರಿ, 1 ಸಿಕ್ಸ್) ಅಂತ್ಯಗೊಂಡಿತು. ಬಳಿಕ ಬಂದ ನಾಯಕ ಪಂತ್ 17 ರನ್ (23 ಎಸೆತ, 2 ಬೌಂಡರಿ) ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ
81 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಕುಸಿತಕಂಡ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಬಲ ತುಂಬಿದರು. ನಿಧಾನವಾಗಿ ತಂಡದ ರನ್ ಏರಿಸಿದ ಇವರಿಬ್ಬರೂ ಸ್ಲಾಗ್ ಓವರ್‌ಗಳಲ್ಲಿ ಅಬ್ಬರದಾಟ ಪ್ರದರ್ಶಿಸಿದರು. ಪಾಂಡ್ಯ 46 ರನ್ (31 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 55 ರನ್ (27 ಎಸೆತ, 9 ಬೌಂಡರಿ, 2 ಸಿಕ್ಸ್) ಚಚ್ಚಿ ಔಟ್ ಅದರು. ಈ ಮೊದಲು ಈ ಜೋಡಿ 5ನೇ ವಿಕೆಟ್‍ಗೆ 65 ರನ್ (33 ಎಸೆತ) ಜೊತೆಯಾಟವಾಡಿ ತಂಡವನ್ನು ಆಧರಿಸಿತು. ಅಲ್ಲದೇ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 2 ವಿಕೆಟ್ ಪಡೆದು ಮಿಂಚಿದರೆ, ಪೆಟೋರಿಯಸ್, ಆನ್ರಿಚ್ ನಾರ್ಟ್ಜೆ, ಕೇಶವ ಮಹಾರಾಜ್, ಮಾರ್ಕೊ ಜಾನ್ಸೆನ್ ತಲಾ ಒಂದು ವಿಕೆಟ್ ಪಡೆದರು.