ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಅಬ್ಬರದ ಶತಕ ಸಿಡಿಸಿ ಟೀಮ್ ಇಂಡಿಯಾಗೆ ಗೆಲುವು ತಂದಿತ್ತ ವಿರಾಟ್ ಕೊಹ್ಲಿ ಸಾಧನೆಯನ್ನು ಪತ್ನಿ ಅನುಷ್ಕಾ ವಿಶೇಷವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ತಂಡ ಕೇವಲ 67ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕೊಹ್ಲಿ ತಮ್ಮ ಸಮಯೋಚಿತ ಆಟದ ನೆರವಿನಿಂದ ಮೂಲಕ ಶತಕ ಸಿಡಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಒಟ್ಟು 119 ಎಸೆತಗಳನ್ನು ಎದುರಿಸಿದ ಕೊಹ್ಲಿ 112 ರನ್ ಸಿಡಿಸಿ ಅಂತಿಮ ಹಂತದಲ್ಲಿ ನಿರ್ಗಮಿಸಿದರು. ಕೊಹ್ಲಿಗೆ ರಹಾನೆ ಉತ್ತಮ ಸಾಥ್ ನೀಡಿದ್ದರು.
Advertisement
Advertisement
ಡರ್ಬನ್‍ನಲ್ಲಿ ಶತಕ ಗಳಿಸಿದ ಕೊಹ್ಲಿ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ, ಅದರ ಮೇಲೆ `what a guy ‘ ಎಂದು ಬರೆದು ಹೃದಯದ ಸ್ಟಿಕ್ಕರ್ ಅನ್ನು ಹಾಕಿ ಅದನ್ನು ತಮ್ಮ ಇನ್‍ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದರ ಜತೆಗೆ ಕೊಹ್ಲಿ ಶತಕದ ಇನ್ನೊಂದು ಫೋಟೋ ಮೇಲೆ ಎರಡು ಹೃದಯದ ಸ್ಟಿಕ್ಕರ್ ಗಳ ನಡುವೆ 100 ಎನ್ನುವ ಸ್ಟಿಕ್ಕರ್ ಹಾಕಿ ಅದನ್ನು ಮತ್ತು ಭಾರತ ಜಯ ಗಳಿಸಿದ ಇನ್ನೊಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ.
Advertisement
ಈ ಹಿಂದೆ ಟೆಸ್ಟ್ ಪಂದ್ಯದಲ್ಲಿ ಶತಕ ಹೊಡೆದ ಮೇಲೆ ಕೊಹ್ಲಿ ಮದುವೆಯ ಉಂಗುರ ತೋರಿಸಿ ಮುತ್ತಿಕ್ಕಿ ಮೈದಾನದಲ್ಲೇ ತಮ್ಮ ಪ್ರೀತಿ ವ್ಯಕ್ತಡಿಸಿದ್ದರು. ಇದೀಗ ಅನುಷ್ಕಾ ಶತಕ ಗಳಿಸಿದ ಕೊಹ್ಲಿ ಅವರಿಗೆ ವಿಶಿಷ್ಟವಾಗಿ ಇನ್‍ಸ್ಟಾಗ್ರಾಂ ಪುಟದಲ್ಲಿ ಪ್ರೀತಿ ತೋರಿಸಿದ್ದಾರೆ. ಇದನ್ನು ಓದಿ: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ