ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಟೀಂ ಇಂಡಿಯಾ ವೈಟ್ ವಾಷ್‍ನಿಂದ ತಪ್ಪಿಸಿಕೊಂಡಿದೆ. ಗೆಲ್ಲಲು 241 ರನ್‍ಗಳನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 177 ರನ್‍ಗೆ ಆಲೌಟಾಯಿತು. ಈ ಮೂಲಕ 63 ರನ್‍ಗಳಿಂದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಿತು. 144 ರನ್‍ಗೆ 4ನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 177 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು.
Advertisement
ಆರಂಭಿಕ ಆಟಗಾರ ಎಲ್ಗರ್ ಭಾರತದ ದಾಳಿಗೆ ಪ್ರತಿರೋಧ ತೋರಿ 86 ರನ್ ಗಳಿಸಿದರೂ ಭಾರತದ ವೇಗಿಗಳ ಮುಂದೆ ಇತರೆ ಎಲ್ಲಾ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಆಟಗಾರರು ಎರಡಂಕಿ ರನ್ ತಲುಪುವಲ್ಲೂ ವಿಫಲರಾದರು. ಅಲ್ಲದೆ ನಾಲ್ವರು ಆಟಗಾರು ಶೂನ್ಯಕ್ಕೆ ಔಟಾದರು.
Advertisement
ಟೀಂ ಇಂಡಿಯಾ ಪರವಾಗಿ ವೇಗದ ಬೌಲರ್ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿದರೆ, ಬೂಮ್ರಾ 2, ಇಶಾಂತ್ ಶರ್ಮಾ 2, ಪಾಂಡ್ಯಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 187 ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 247 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ 194 ಹಾಗೂ 177 ರನ್ ಗಳಿಸಿತು. ಈ ಮೂಲಕ ಭಾರತ 63 ರನ್ ಗಳ ಗೆಲುವು ಸಾಧಿಸಿತು. ಭಾರತದ ಪರವಾಗಿ ಬೂಮ್ರಾ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಗಳಿಸಿದ್ದರು.
Advertisement
ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಆಟಗಾರ ಎಲ್ಗರ್ ಅಜೇಯ 86 ರನ್, ಹಶೀಂ ಆಮ್ಲ 52, ಎಬಿಡಿ ವಿಲಿಯರ್ಸ್ 6, ಫಿಲಾಂಡರ್ 10, ಮಕ್ರ್ರಮ್ 4 ರನ್ ಗಳಿಸಿದರು. ಡಿ’ಕಾಕ್, ಫೆಲುಕ್ವಾಯೋ, ರಬಾಡ ಹಾಗೂ ಮಾರ್ಕೆಲ್ ಸೊನ್ನೆ ಸುತ್ತಿದರು.