ಬುಮ್ರಾ ಬೊಂಬಾಟ್ ಬೌಲಿಂಗ್ – ಒಂದೇ ದಿನ 11 ವಿಕೆಟ್ ಪತನ

Public TV
2 Min Read
TEAM INDIA 3

ಕೇಪ್‍ಟೌನ್: ಮೊದಲ ಇನ್ನಿಂಗ್ಸ್‌ನ 13 ರನ್‍ಗಳ ಅಲ್ಪಮುನ್ನಡೆಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಒಟ್ಟು 70 ರನ್‍ಗಳ ಮುನ್ನಡೆ ಪಡೆದುಕೊಂಡಿದ್ದು, ಮೂರನೇ ದಿನ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿದೆ.

TEAM INDIA 1 1

ಇಂದು ಒಂದೇ ದಿನ ಎರಡು ತಂಡಗಳು ಸೇರಿ 11 ವಿಕೆಟ್ ಪತನಗೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 17ರನ್ ಗಳಿಸಿದ್ದ ಆಫ್ರಿಕಾ ಪರ ಮಕ್ರಾರ್ಮ್ ಮತ್ತು ಕೇಶವ್ ಮಹರಾಜ್ ಬ್ಯಾಟಿಂಗ್ ಮುಂದುವರಿಸಿದರು. ಮಕ್ರಾರ್ಮ್ 8 ರನ್ (22 ಎಸೆತ, 1 ಬೌಂಡರಿ) ಮತ್ತು ಕೇಶವ್ ಮಹರಾಜ್ 25 ರನ್ (45 ಎಸೆತ, 4 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

TEAM INDIA 2

ಬುಮ್ರಾ, ಯಾದವ್, ಶಮಿ ಶೈನ್:
ನಂತರ ಒಂದಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 21 ರನ್ (54 ಎಸೆತ), ತೆಂಬ ಬವುಮ 28 ರನ್ (52 ಎಸೆತ, 4 ಬೌಂಡರಿ) ಸಿಡಿಸಿ ಸ್ಪಲ್ಪಮಟ್ಟಿನ ಪ್ರತಿರೋಧ ತೋರಿ ಬುಮ್ರಾ, ಶಮಿ ಮತ್ತು ಯಾದವ್ ದಾಳಿಗೆ ಸಿಲುಕಿ ವಿಕೆಟ್ ಕಳೆದುಕೊಂಡರು.

Keegan Petersen

ಪೀಟರ್ಸನ್ ಆಸರೆ:
ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಕೂಡ ಆಫ್ರಿಕಾ ಪರ ಕೀಗನ್ ಪೀಟರ್ಸನ್ ತಾಳ್ಮೆಯಿಂದ ಬ್ಯಾಟ್‍ಬೀಸಿ 72 ರನ್ (166 ಎಸೆತ, 9 ಬೌಂಡರಿ) ಬಾರಿಸಿ ಔಟ್ ಆದರು. ಅಂತಿಮವಾಗಿ ಆಫ್ರಿಕಾ 76.3 ಓವರ್‌ಗಳಲ್ಲಿ 210 ರನ್‍ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್

UMESH YADAV 1

ಭಾರತದ ಪರ ಬುಮ್ರಾ 5 ವಿಕೆಟ್ ಕಿತ್ತು ಮಿಂಚಿದರೆ, ಉಮೇಶ್ ಯಾದವ್ ಮತ್ತು ಶಮಿ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 1 ವಿಕೆಟ್ ಕಿತ್ತರು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ

TEAM INDIA 2 1

ಆ ಬಳಿಕ ಸೆಕೆಂಡ್ ಇನ್ನಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಕೆ.ಎಲ್ ರಾಹುಲ್, 10 ರನ್ (22 ಎಸೆತ, 2 ಬೌಂಡರಿ) ಮತ್ತು ಮಯಾಂಕ್ ಅಗರ್ವಾಲ್ 7 ರನ್ (15 ಎಸೆತ, 1 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ದಿನದಾಟದ ಅಂತ್ಯಕ್ಕೆ 17 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಭಾರತ 57 ರನ್ ಗಳಿಸಿದೆ. ಚೇತೇಶ್ವರ ಪೂಜಾರ ಅಜೇಯ 9 ರನ್ (31 ಎಸೆತ, 2 ಬೌಂಡರಿ) ಮತ್ತು ವಿರಾಟ್ ಕೊಹ್ಲಿ 14 ರನ್ (39 ಎಸೆತ, 2 ಬೌಂಡರಿ) ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 13 ರನ್ ಮತ್ತು ಸೆಕೆಂಡ್ ಇನ್ನಿಂಗ್ಸ್‌ನ 57 ರನ್‍ಗಳೊಂದಿಗೆ ಟೀಂ ಇಂಡಿಯಾ ಒಟ್ಟು 70 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *