ಕೇಪ್‍ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ದಿನ ಭಾರತದ ವೇಗಿ ಉಮೇಶ್ ಯಾದವ್ ಪರ್ಫೆಕ್ಟ್ ಬೌಲಿಂಗ್‍ಗೆ ಮಿಡಲ್ ಸ್ಟಂಪ್ ಎಗರಿ ಮಾರುದ್ದ ಬಿದ್ದಿದೆ. ಈ ವೀಡಿಯೋ ಇದೀಗ ವೈರಲ್ ಆಗ ತೊಡಗಿದೆ.
Advertisement
ಮೊಹಮ್ಮದ್ ಸಿರಾಜ್ ಗಾಯಾಳುವಾಗಿ ಮೂರನೇ ಟೆಸ್ಟ್‌ನಿಂದ ಹೊರಗುಳಿದಿದ್ದು ಅವರ ಸ್ಥಾನಕ್ಕೆ ಉಮೇಶ್ ಯಾದವ್ ಆಯ್ಕೆಯಾಗಿದ್ದರು. ಎರಡನೇ ದಿನದಾಟದಲ್ಲಿ ಆಫ್ರಿಕಾ ಬ್ಯಾಟ್ಸ್‌ಮ್ಯಾನ್ ಕೇಶವ್ ಮಹರಾಜ್ ಸತತ ಬೌಂಡರಿಗಳನ್ನು ಹೊಡೆಯುತ್ತ ಭಾರತಕ್ಕೆ ಮುಳುವಾಗುವ ಸೂಚನೆ ನೀಡಿದ್ದರು. ಈ ವೇಳೆ ದಾಳಿಗಿಳಿದ ಯಾದವ್‍ರ ಉತ್ತಮ ಎಸೆತವನ್ನು ರಕ್ಷಣಾತ್ಮಕ ಆಟವಾಡಲು ಯತ್ನಿಸಿದ ಮಹರಾಜ್ ಕ್ಲೀನ್ ಬೌಲ್ಡ್ ಆದರು. ಅದೂ ಕೂಡ ಮಿಡಲ್ ಸ್ಟಂಪ್ ಎಗರಿ ಬಿತ್ತು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ
Advertisement
Always a delight to watch Umesh Yadav bowling those satisfying beauties ????
– Beating the Batsmen all ends up ????
– The sound of the leather ball hitting the wooden stump ????
– Stumps flying all over the place ✔
Already given us many reasons to remember his bowling! ????????#SAvIND pic.twitter.com/dky5V4oYtL
— Vicky Singh (@isinghvicky12) January 12, 2022
Advertisement
ಇದರೊಂದಿಗೆ ಮಹರಾಜ್‍ರ 25 ರನ್ (45 ಎಸೆತ, 4 ಬೌಂಡರಿ)ಗಳ ಸೊಗಸಾದ ಇನ್ನಿಂಗ್ಸ್ ಕೊನೆಗೊಂಡಿತು. ಇಂದು ಬ್ಯಾಟಿಂಗ್ಸ್ ಮುಂದುವರಿಸುತ್ತಿರುವ ಆಫ್ರಿಕಾ ಪರ ಕೀಗನ್ ಪೀಟರ್ಸನ್ ಅರ್ಧಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ದು, 47 ಓವರ್‌ಗಳಲ್ಲಿ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿದ್ದು, 87 ರನ್‍ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸುತ್ತಿದೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ
Advertisement