ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡದ ಮೇಲೆ ಫಾಲೋಆನ್ ಹೇರಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಇಶಾಂತ್ ಶರ್ಮಾ, ಅಶ್ವಿನ್ ಅಘಾತ ನೀಡಿದ್ದಾರೆ.
2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಏಡನ್ ಮಾರ್ಕ್ರಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವೇಗಿ ಇಶಾಂತ್ ಶರ್ಮಾರ ಎಸೆತವನ್ನು ಗ್ರಹಿಸಲು ವಿಫಲರಾದ ಮಾರ್ಕ್ರಮ್ ಎಲ್‍ಡಿಬ್ಲ್ಯು ಬಲೆಗೆ ಸಿಲುಕಿ ಔಟಾದರು. ಆ ಬಳಿಕ ಹರಿಣಗಳ ಪಡೆಗೆ ಮತ್ತೊಂದು ಅಘಾತ ನೀಡಿದ ಉಮೇಶ್ ಯಾದವ್ 8 ರನ್ ಗಳಿಸಿದ್ದ ಡಿಬ್ರಯನ್ ವಿಕೆಟ್ ಪಡೆದು ಇನ್ನಿಂಗ್ಸ್ ಆರಂಭದಲ್ಲೇ ತಂಡ ಮೈಲುಗೈ ಸಾಧಿಸಲು ಕಾರಣರಾದರು.
Advertisement
Watch the full video of the catch here – https://t.co/kTqlAuzzAW#INDvSA https://t.co/Of6TlgQeWA
— BCCI (@BCCI) October 13, 2019
Advertisement
ಅಶ್ವಿನ್ ಮಿಂಚು: ಟೀಂ ಇಂಡಿಯಾ ವೇಗಿಗಳ ಎದುರು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಫ್ರಿಕಾಗೆ ಅಶ್ವಿನ್ ಡಬಲ್ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಅಶ್ವಿನ್, 48 ರನ್ ಗಳಿಸಿ ಅರ್ಧ ಶತಕ ಸಮೀಪಿಸುತ್ತಿದ್ದ ಡೀನ್ ಎಲ್ಗರ್ ಹಾಗೂ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಪಡೆದರು. ಇದರೊಂದಿಗೆ 71 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸೋಲಿನ ಸುಳಿಯಲ್ಲಿ ಸಿಲುಕಿದ್ದರೆ ಟೀಂ ಇಂಡಿಯಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.
Advertisement
ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟಾದ ಪರಿಣಾಮ ಟೀಂ ಇಂಡಿಯಾಗೆ 326 ರನ್‍ಗಳ ಬೃಹತ್ ಮುನ್ನಡೆ ಲಭಿಸಿತ್ತು. ಪಂದ್ಯದ 4ನೇ ದಿನದ ಆರಂಭದಲ್ಲೇ ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ಇತ್ತ ಭಾರೀ ಮುನ್ನಡೆಯೊಂದಿಗೆ ಇನ್ನು 2 ದಿನಗಳ ಆಟ ಭಾಗಿ ಇರುವುದರಿಂದ ಟೀಂ ಇಂಡಿಯಾ ಆಟಗಾರರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿರ ದ್ವಿಶತಕದ ಬಲದಿಂದ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ನೀಡಿತ್ತು.
Advertisement
A great morning session for #TeamIndia as they pick 4 wickets after enforcing the follow on.
South Africa 275 & 74/4, trail India 601/5d by 252 runs with 6 wickets remaining. pic.twitter.com/bo9nnnJjyw
— BCCI (@BCCI) October 13, 2019
#TeamIndia enforce the follow-on and its wicket in the 1st over courtesy @ImIshant #INDvSA @Paytm pic.twitter.com/YvqcVL0TPL
— BCCI (@BCCI) October 13, 2019