ಜೋಹಾನ್ಸ್‌ಬರ್ಗ್: ಶತಕ ವಂಚಿತ ನಾಯಕ ಡೀನ್ ಎಲ್ಗರ್ ಅವರ ಅತ್ಯುತ್ತಮ ಆಟದಿಂದ ಭಾರತ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಗೆಲ್ಲಲು 240 ರನ್‌ಗಳ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 67.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 243 ರನ್ ಹೊಡೆದು ಜಯಗಳಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 ಸಮಬಲ ಸಾಧಿಸಿವೆ.
Advertisement
Advertisement
4 ದಿನದಾಟದ ಬಹುತೇಕ ಅರ್ಧದಿನ ಮಳೆಗೆ ಬಲಿಯಾಗಿತ್ತು. ಇಂದು 34 ಓವರ್‌ಗಳ ಆಟ ನಡೆಸಲು ತೀರ್ಮಾನಿಸಲಾಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್‌ಗಳಿಸಿದ್ದ ದಕ್ಷಿಣ ಆಫ್ರಿಕಾ ಇಂದು 1 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು. ಇದನ್ನೂ ಓದಿ: ತನ್ನ ಹೆಸರನ್ನೇ ಬಿಟ್ಟು All-Time XI ಹೆಸರಿಸಿದ ಸಚಿನ್ – ಈ ಸ್ಟಾರ್ ಆಟಗಾರಿಗಿಲ್ಲ ಸ್ಥಾನ!
Advertisement
ನಿನ್ನೆ 11 ರನ್ ಗಳಿಸಿದ್ದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 40 ರನ್( 92 ಎಸೆತ, 5 ಬೌಂಡರಿ) ಹೊಡೆದು ಔಟಾದರು. ನಿನ್ನೆ 46 ರನ್‌ಗಳಿಸಿದ್ದ ನಾಯಕ ಡೀನ್ ಎಲ್ಗರ್ ಇಂದು ಔಟಾಗದೇ 96 ರನ್(188 ಎಸೆತ,10 ಬೌಂಡರಿ) ಹೊಡೆದರೆ ತೆಂಬ ಬವುಮ ಔಟಾಗದೇ 23 ರನ್(61 ಎಸೆತ, 3 ಬೌಂಡರಿ) ಹೊಡೆದರು. ಇವರಿಬ್ಬರು ಮುರಿಯದ ಮೂರನೇ ವಿಕೆಟಿಗೆ 83 ಎಸೆತಗಳಲ್ಲಿ 68 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
Advertisement
ಭಾರತದ ಪರ ಶಾರ್ದಲ್ ಠಾಕೂರ್, ಅಶ್ವಿನ್, ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಕಿತ್ತರು. ಮೂರನೇ ಟೆಸ್ಟ್ ಜ.11 ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಭಾರತ 113 ರನ್‌ಗಳಿಂದ ಜಯಗಳಿಸಿತ್ತು. ಇದನ್ನೂ ಓದಿ: ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 202/10
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 229/10
ಭಾರತ ಎರಡನೇ ಇನ್ನಿಂಗ್ಸ್ 266/10
ದಕ್ಷಿಣ ಆಫ್ರಿಕಾ 243/3