ಗುವಾಹಟಿ: ಎರಡನೇ ಟೆಸ್ಟ್ (Second Test) ಪಂದ್ಯದಲ್ಲಿ ಸೋಲಿನ ಸುಳಿಯತ್ತಾ ಟೀ ಇಂಡಿಯಾ (Team India) ಸಾಗಿದ್ದು ಏನಾದರೂ ಪವಾಡ ನಡೆದರೆ ಮಾತ್ರ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
549 ರನ್‌ಗಳ ಬೃಹತ್ ಗುರಿಯನ್ನು ದಕ್ಷಿಣ ಆಫ್ರಿಕಾ (South Africa) ನೀಡಿದ್ದು ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿದೆ. ಕೊನೆಯ ದಿನ ಗೆಲುವಿಗೆ 522 ರನ್‌ಗಳ ಅಗತ್ಯವಿದೆ.
ಮೂರನೇ ದಿನ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿದ್ದ ಆಫ್ರಿಕಾ ಇಂದು 78.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದನ್ನೂ ಓದಿ: ಶಾಂತಕುಮಾರ್ ನಾಮಪತ್ರ ತಿರಸ್ಕೃತ – ವೆಂಕಟೇಶ ಪ್ರಸಾದ್ KSCA ಅಧ್ಯಕ್ಷರಾಗಿ ಅವಿರೋಧ ಆಯ್ಕೆ
A fearless upper-cut over the slips – #YashasviJaiswal rides the bounce and sends it flying into the stands! 🔥#INDvSA 2nd Test Day 4 LIVE NOW 👉 https://t.co/X0C19TxLAq pic.twitter.com/AV4mYPOxnh
— Star Sports (@StarSportsIndia) November 25, 2025
ಬ್ಯಾಟಿಂಗ್‌ಗೆ ಇಳಿದ ಭಾರತ ಇಬ್ಬರು ಆರಂಭಿಕ ಬ್ಯಾಟರ್‌ಗಳು ಔಟ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ 13 ರನ್, ಕೆಎಲ್ ರಾಹುಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸಾಯಿ ಸುದರ್ಶನ್ 2 ರನ್, ನೈಟ್ ವಾಚ್‌ಮನ್ ಆಗಿ ಅಂಗಳಕ್ಕೆ ಇಳಿದಿರುವ ಕುಲದೀಪ್ ಯಾದವ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆಫ್ರಿಕಾ ಪರ ರಿಯಾನ್ ರಿಕೆಲ್ಟನ್ 35 ರನ್, ಮಾರ್ಕ್ರಾಮ್ 29 ರನ್, ಟೆಂಬಾ ಬಾವುಮಾ 3 ರನ್, ಟೋನಿ ಡಿ ಝೋರ್ಜಿ 49 ರನ್, ಟ್ರಿಸ್ಟಾನ್ ಸ್ಟಬ್ಸ್ 94 ರನ್ ಗಳಿಸಿದರು. 180 ಎಸೆತಗಳಲ್ಲಿ 94 ರನ್ (9 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ಟ್ರಿಸ್ಟಾನ್ ಸ್ಟಬ್ಸ್ ಔಟ್ ಆದ ಬೆನ್ನಲ್ಲೇ ಬಾವುಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ – 489/10
ಭಾರತ ಮೊದಲ ಇನ್ನಿಂಗ್ಸ್ – 201/10
ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ – 260/5
ಭಾರತ ಎರಡನೇ ಇನ್ನಿಂಗ್ಸ್ – 27/2

