ಮೊಹಾಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಅರ್ಧ ಶತಕ ಹಾಗೂ ಶಿಖರ್ ಧವನ್ ತಾಳ್ಮೆಯ ಆಟದಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಇಂದ ಕೊಹ್ಲಿ ಪಡೆ ಮುನ್ನಡೆ ಪಡೆದಿದೆ.
Advertisement
ಹರಿಣರು ನೀಡಿದ್ದ 150 ರನ್‍ಗಳ ಮೊತ್ತವನ್ನು ಬೆನ್ನುಹತ್ತಿದ ಟೀಂ ಇಂಡಿಯಾ ಒಂದು ಓವರ್ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.
Advertisement
Advertisement
ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಕೇವಲ 12 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಶಿಖರ್ ಧವನ್‍ಗೆ ಸಾಥ್ ನೀಡುತ್ತ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. 31 ಎಸೆತಗಳನ್ನು ಎದುರಿಸಿದ ಶಿಖರ್ ಧವನ್ 1 ಸಿಕ್ಸ್, 4 ಬೌಂಡರಿ ಸೇರಿ 40 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಒಳಿಕ ಬಂದ ರಿಷಭ್ ಪಂತ್ ಕೇವಲ 4 ಗಳಿಸಲು ಶಕ್ತರಾದರು.
Advertisement
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ ಔಟಾಗದೆ 52 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿ 72 ರನ್ ಸಿಡಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೀಝಾ ಹೆಂಡ್ರಿಕ್ಸ್ ಕೇವಲ 6 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಇತ್ತ ಕ್ವಿಂಟನ್ ಡಿಕಾಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಕ್ವಿಂಟನ್ ಡಿಕಾಕ್ 37 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 52 ರನ್ ಕಲೆಹಾಕಿದರು. ಡಿಕಾಕ್‍ಗೆ ಸಾಥ್ ನೀಡಿದ ತೆಂಬಾ ಬವೂಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ದುರಾದೃಷ್ಟವಶಾತ್ 50 ರನ್‍ಗಳಿಗೆ ಒಂದು ರನ್ ಬಾಕಿ ಇರುವಂತೆ ವಿಕೆಟ್ ಒಪ್ಪಿಸಿ ಅರ್ಧ ಶತಕ ವಂಚಿತರಾದರು. 43 ಎಸೆತಗಳನ್ನು ಎದುರಿಸಿದ ತೆಂಬಾ ಬವೂಮಾ 1 ಸಿಕ್ಸ್, 3 ಬೌಂಡರಿ ಸೇರಿದಂತೆ 49 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ಕಲೆ ಹಾಕಿತ್ತು.
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.