– ಗಂಗೂಲಿ, ದ್ರಾವಿಡ್‍ರನ್ನ ಹಿಂದಿಕ್ಕಲಿದ್ದಾರೆ ವಿರಾಟ್
ಧರ್ಮಶಾಲ: ರನ್ ಮೆಷಿನ್ ಖ್ಯಾತಿಯ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈಗ ಸಚಿನ್ ಹೆಸರಿನಲ್ಲಿರುವ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸನಿಹದಲ್ಲಿ ವಿರಾಟ್ ಇದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 133 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್
Advertisement
Advertisement
ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಈವರೆಗೂ 239 ಇನ್ನಿಂಗ್ಸ್ ಆಡಿದ್ದು, 43 ಶತಕ, 58 ಅರ್ಧಶತಕ ಸೇರಿ 11,867 ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 12,000 ರನ್‍ಗಳ ಮೈಲುಗಲ್ಲು ತಲುಪಲು ವಿರಾಟ್‍ಗೆ 133 ರನ್‍ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ 133 ರನ್ ಗಳಿಸಿದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 12,000 ರನ್ ದಾಖಲಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
Advertisement
ಜೊತೆಗೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆಗೂ ವಿರಾಟ್ ಭಾಜನವಾಗಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿರುವ 239 ಇನ್ನಿಂಗ್ಸ್ ಗಳಲ್ಲಿ 11,867 ರನ್ ಪೇರಿಸಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ತೆಂಡೂಲ್ಕರ್ 300ನೇ ಇನ್ನಿಂಗ್ಸ್ ನಲ್ಲಿ 12,000 ರನ್‍ಗಳ ದಾಖಲೆ ಬರೆದಿದ್ದರು.
Advertisement
ಅತಿ ವೇಗದಲ್ಲಿ 12,000 ರನ್ ಸಾಧನೆ:
ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ 300 ಇನ್ನಿಂಗ್ಸ್ ಗಳಲ್ಲಿ ವೇಗವಾಗಿ 12,000 ರನ್ ದಾಖಲಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್, ಶ್ರೀಲಂಕಾದ ಮಾಜಿ ಆಟಗಾರರಾದ ಕುಮಾರ ಸಂಗಕ್ಕರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಹಾಗೂ ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್ ಗಳಲ್ಲಿ 12,000 ರನ್‍ಗಳ ಸಾಧನೆ ಮಾಡಿದ್ದಾರೆ.
ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 452 ಇನ್ನಿಂಗ್ಸ್ ಗಳಲ್ಲಿ 18,426 ರನ್ ದಾಖಲಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕರ 14,234 ರನ್ ಹಾಗೂ ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 13,704 ರನ್ ಗಳಿಸಿದ್ದಾರೆ. ಉಳಿದಂತೆ ಸನತ್ ಜಯಸೂರ್ಯ 13,430 ರನ್ ಹಾಗೂ ಮಹೇಲಾ ಜಯವರ್ಧನೆ 12,650 ರನ್ ಗಳಿಸಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ನಂತರ ಅಂದ್ರೆ ಆರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 11,867 ರನ್ ಗಳಿಸಿದ್ದಾರೆ.
ಗಂಗೂಲಿ, ದ್ರಾವಿಡ್ ಸಾಧನೆ:
ದಕ್ಷಿಣ ಆಫ್ರಿಕಾ ವಿರುದ್ಧ ಈವರೆಗೂ 27 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ 64.35 ಸರಾಸರಿಯಲ್ಲಿ 1,287 ರನ್ ಚಚ್ಚಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗರರಾದ ಸೌರವ್ ಗಂಗೂಲಿ ಹರಿಣರ ವಿರುದ್ಧ 29 ಪಂದ್ಯ ಆಡಿ 1,313 ರನ್ ಹಾಗೂ ರಾಹುಲ್ ದ್ರಾವಿಡ್ 36 ಪಂದ್ಯಗಳನ್ನಾಡಿ 1,309 ರನ್ ಗಳಿಸಿದ್ದಾರೆ. ಈ ಇಬ್ಬರು ಆಟಗಾರರನ್ನು ಹಿಂದಿಕ್ಕಲು ವಿರಾಟ್‍ಗೆ 27 ರನ್‍ಗಳ ಅಗತ್ಯವಿದೆ. ಆದರೆ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 57 ಏಕದಿನ ಪಂದ್ಯವಾಡಿ 2001 ರನ್ ಗಳಿಸಿದ್ದಾರೆ.