ವಿಶಾಖಪಟ್ಟಣಂ: ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ರೋಹಿತ್ ಶರ್ಮಾ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಏಕದಿನದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ರೋಹಿತ್ ಶರ್ಮಾ 27 ಟೆಸ್ಟ್ ಆಡಿದ್ದು ಯಾವುದೇ ಪಂದ್ಯದಲ್ಲಿ ಓಪನರ್ ಆಗಿ ಇಳಿದಿರಲಿಲ್ಲ. ಆದರೆ ಇಂದು ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು 154 ಎಸೆತಗಳಲ್ಲಿ 100 ರನ್ ಹೊಡೆಯುವ ಮೂಲಕ 4ನೇ ಶತಕ ಹೊಡೆದರು.
Advertisement
ವಿಶೇಷ ಏನೆಂದರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಕ್ಯಾಪ್ ಧರಿಸಿದ್ದು 2013ರ ನವೆಂಬರ್ ತಿಂಗಳಿನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ. ಮೊದಲ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿ ಮೊದಲ ಇನ್ನಿಂಗ್ಸ್ ನಲ್ಲಿ 177 ರನ್(301 ಎಸೆತ, 23 ಬೌಂಡರಿ, 1 ಸಿಕ್ಸ್) ಹೊಡೆದಿದ್ದರು. ಈ ಮೂಲಕ ಮೊದಲ ಪಂದ್ಯದಲ್ಲಿ ಶತಕದ ಜೊತೆ ಈಗ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದಲ್ಲಿ 100 ರನ್ ಸಿಡಿಸುವ ಮೂಲಕ ತಮ್ಮ ವೈಯಕ್ತಿಕ ಕ್ರಿಕೆಟ್ ಬದುಕಿನಲ್ಲಿ ವಿಶೇಷ ಸಾಧನೆ ಮಾಡಿದರು.
Advertisement
Advertisement
84 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ ರೋಹಿತ್ 154 ಎಸೆತಗಳಲ್ಲಿ ಶತಕ ಹೊಡೆದರು. ಸದ್ಯ ಈಗ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಿದ್ದು ಭಾರತ 59.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಹೊಡೆದಿದೆ.
Advertisement
ರೋಹಿತ್ ಶರ್ಮಾ ಔಟಾಗದೇ 115 ರನ್(174 ಎಸೆತ, 12 ಬೌಂಡರಿ, 5 ಸಿಕ್ಸರ್) ಹೊಡೆದಿದ್ದರೆ ಕೆಎಲ್ ರಾಹುಲ್ ಬದಲು ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಮಯಾಂಕ್ ಅಗರ್‍ವಾಲ್ ಔಟಾಗದೇ 84 ರನ್(183 ಎಸೆತ, 11 ಬೌಂಡರಿ, 2ಸಿಕ್ಸರ್) ಹೊಡೆದಿದ್ದಾರೆ. ಈ ಹಿಂದೆ ಆರಂಭಿಕರಾಗಿ ಕಣಕ್ಕೆ ಇಳಿದ ಮೊದಲ ಪಂದ್ಯದಲ್ಲಿ ಶಿಖರ್ ಧವನ್, ಕೆಎಲ್ ರಾಹುಲ್, ಪೃಥ್ವಿ ಶಾ ಶತಕದ ಸಾಧನೆ ಮಾಡಿದ್ದರು.
???????? pic.twitter.com/GTKZdUXa3w
— BCCI (@BCCI) October 2, 2019