ಸೆಂಚುರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ರೋಚಕ ಘಟ್ಟಕ್ಕೆ ತಲುಪಿದೆ. ಐದನೇ ದಿನ ದಕ್ಷಿಣ ಆಫ್ರಿಕಾ ಗೆಲುವಿಗೆ 211 ರನ್ ಗುರಿ ಇದ್ದರೆ, ಟೀಂ ಇಂಡಿಯಾಗೆ 6 ವಿಕೆಟ್‍ಗಳ ಅವಶ್ಯಕತೆ ಇದೆ.
Advertisement
ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 16 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರಿಸಿತು. 3ನೇ ದಿನದಾಟದ ಅಂತ್ಯದಲ್ಲಿ ನೈಟ್ ವಾಚ್‍ಮ್ಯಾನ್ ಆಗಿ ಬ್ಯಾಟಿಂಗ್ ಆಗಮಿಸಿದ್ದ ಶಾರ್ದೂಲ್ ಠಾಕೂರ್ ನಾಲ್ಕನೇ ದಿನ ಆರಂಭದಲ್ಲೇ 10 ರನ್ (26 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆ ಬಳಿಕ ಕೆ.ಎಲ್ ರಾಹುಲ್ 23 ರನ್ (74 ಎಸೆತ, 4 ಬೌಂಡರಿ) ಬಾರಿಸಿ ಎನ್‍ಗಿಡಿಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಬೌಲರ್‌ಗಳ ಮೇಲಾಟ – ಒಂದೇ ದಿನ 18 ವಿಕೆಟ್ ಪತನ
Advertisement
Advertisement
54 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಆಸರೆಯಾಗುವ ಭರವಸೆ ನೀಡಿದರೂ ಕೂಡ ಅದು ಫಲಕೊಡಲಿಲ್ಲ. ಕೊಹ್ಲಿ 18 ರನ್ (32 ಎಸೆತ, 4 ಬೌಂಡರಿ), ಚೇತೇಶ್ವರ ಪೂಜಾರ 16 ರನ್ (64 ಎಸೆತ, 3 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಅಜಿಂಕ್ಯಾ ರಹಾನೆ 20 ರನ್ (23 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಿಷಬ್ ಪಂತ್ 34 ರನ್ (34 ಎಸೆತ, 6 ಬೌಂಡರಿ) ಬಾರಿಸಿ ತಂಡದ ರನ್ ಹಚ್ಚಿಸಲು ಪ್ರಯತ್ನ ಪಟ್ಟು ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಬಂದ ಅಶ್ವಿನ್ 14 ರನ್ (17 ಎಸೆತ, 2 ಬೌಂಡರಿ,), ಶಮಿ 1 ರನ್ ( 12 ಎಸೆತ), ಬುಮ್ರಾ ಅಜೇಯ 7 ರನ್ (8 ಎಸೆತ, 1ಬೌಂಡರಿ) ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಅಂತಿಮ ಟೀಂ ಇಂಡಿಯಾ 50.3 ಓವರ್‌ಗಳಲ್ಲಿ 174 ರನ್‍ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 304 ರನ್ ಮುನ್ನಡೆ ಪಡೆದುಕೊಂಡಿತು. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ
Advertisement
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಉಳಿದ 2 ವಿಕೆಟ್ ಲುಂಗಿ ಎನ್‍ಗಿಡಿ ಪಾಲಾಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?
ಗೆಲುವಿಗೆ 305 ರನ್‍ಗಳೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಶಮಿ ಆರಂಭದಲ್ಲೇ ಶಾಕ್ ಕೊಟ್ಟರು ಮಕ್ರಾರ್ಮ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೀಗನ್ ಪೀಟರ್ಸನ್ 17 ರನ್ (36 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು. ನಂತರ ಒಂದಾದ ನಾಯಕ ಡೀನ್ ಎಲ್ಗರ್ ಮತ್ತು ರಾಸ್ಸಿ ವ್ಯಾನ್‍ಡೆರ್ ಡಸೆನ್ಸ್ ಆಫ್ರಿಕಾ ಪರ ಎಚ್ಚರಿಕೆಯ ಬ್ಯಾಟಿಂಗ್ ನೆರವೇರಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 40 ರನ್ (137 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ಬುಮ್ರಾ ವ್ಯಾನ್‍ಡೆರ್ ಡಸೆನ್ಸ್ 11 ರನ್ (65 ಎಸೆತ, 1 ಬೌಂಡರಿ) ಮತ್ತು ಕೇಶವ್ ಮಹರಾಜ್ 8 ರನ್ (19 ಎಸೆತ, 1 ಬೌಂಡರಿ) ವಿಕೆಟ್ ಕಿತ್ತು ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟರು. ಇನ್ನೊಂದು ಕಡೆ ಎಲ್ಗರ್ ಏಕಾಂಗಿಯಾಗಿ ಅಜೇಯ 52 ರನ್ (122 ಎಸೆತ, 7 ಬೌಂಡರಿ) ಬಾರಿಸಿ ತಂಡವನ್ನು ಆಧರಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದ ಮುಕ್ತಾಯದ ವೇಳೆಗೆ ದಕ್ಷಿಣ ಆಫ್ರಿಕಾ 40.5 ಓವರ್‌ಗಳಲ್ಲಿ 94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. 211 ರನ್‍ಗಳ ಹಿನ್ನಡೆಯಲ್ಲಿದೆ.