ಭಾರತಕ್ಕೆ ರಾಹುಲ್‌ ಬಲ – ಆಫ್ರಿಕಾಗೆ ಮೊದಲ ದಿನದ ಗೌರವ

Public TV
1 Min Read
KL Rahul Test Cricket

– ಮೊದಲ ದಿನ ಮಳೆ ಅಡ್ಡಿ

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ (First Test) ಮೊದಲ ದಿನವೇ ಭಾರತ (Team India) 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದೆ.

ವೇಗಿ ರಬಾಡ ಮಾರಕ ಬೌಲಿಂಗ್‌ ದಾಳಿಗೆ ಭಾರತ ತತ್ತರಿಸಿದೆ. 24 ರನ್‌ ಗಳಿಸುವಷ್ಟರಲ್ಲೇ ಭಾರತ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಅವರ ವಿಕೆಟ್‌ ಕಳೆದುಕೊಂಡಿತ್ತು.

ಈ ಹಂತದಲ್ಲಿ ವಿರಾಟ್‌ ಕೊಹ್ಲಿ (Virat kohli) ಮತ್ತು ಶ್ರೇಯಸ್‌ ಅಯ್ಯರ್‌ ನಾಲ್ಕನೇ ವಿಕೆಟಿಗೆ 68 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕೊಹ್ಲಿ 38 ರನ್‌, ಶ್ರೇಯಸ್‌ ಅಯ್ಯರ್‌ 31 ರನ್‌ ಗಳಿಸಿ ಔಟಾದರು.  ಇದನ್ನೂ ಓದಿ: ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕೆಎಲ್‌ ರಾಹುಲ್‌ (KL Rahul) ತಾಳ್ಮೆಯ ಆಟವಾಡಿ ಔಟಾಗದೇ 70 ರನ್‌ ಹೊಡೆದರೆ, ಶಾರ್ದೂಲ್‌ ಠಾಕೂರ್‌ 24 ರನ್‌ ಹೊಡೆದು ಸಾಥ್‌ ನೀಡಿದರು. ಸದ್ಯ ಮೊಹಮ್ಮದ್‌ ಸಿರಾಜ್‌ 0 ರನ್‌ ಹೊಡೆದು ಬುಧವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ರಾಹುಲ್‌ ಕ್ರೀಸ್‌ಗ ಬರುವಾಗ ತಂಡದ ಮೊತ್ತ 4ವಿಕೆಟ್‌ ನಷ್ಟಕ್ಕೆ 92 ಆಗಿತ್ತು. ನಂತರ ಭಾರತ 116 ರನ್‌ ಸೇರಿಸಿದ್ದು ಈ ಪೈಕಿ ರಾಹುಲ್‌ ಒಬ್ಬರೇ 70 ರನ್‌ ಹೊಡೆದಿರುವುದು ವಿಶೇಷ.

ಇಂದು ಮಳೆಯಿಂದಾಗಿ ಕೇವಲ 59 ಓವರ್‌ ಮಾತ್ರ ಎಸೆಯಲಾಗಿತ್ತು. ರಬಡಾ 44 ರನ್‌ ನೀಡಿ 5 ವಿಕೆಟ್‌ ಕಿತ್ತರೆ, ಬರ್ಜರ್‌ 2 ವಿಕೆಟ್‌, ಮಾಕ್ರೋ ಜನ್‌ಸೆನ್‌ 1 ವಿಕೆಟ್‌ ಪಡೆದರು. ಇತರ ರೂಪದಲ್ಲಿ 12 ರನ್‌ ಬಂದಿದೆ.

 

Share This Article