ಸೆಂಚುರಿಯನ್: ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಒಂದೇ ಒಂದು ಎಸೆತವನ್ನು ಕಾಣದೆ ಮಳೆಯಿಂದಾಗಿ ರದ್ದುಗೊಂಡಿದೆ.
Advertisement
ನಿನ್ನೆ ಆರಂಭಗೊಂಡ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸಿಡಿಸಿದ ಆಕರ್ಷಕ ಶತಕದಿಂದಾಗಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 273 ರನ್ ಗಳಿಸಿತ್ತು. ಇಂದು ಬೆಳಗ್ಗೆಯಿಂದಲೇ ಮಳೆ ಪಂದ್ಯಕ್ಕೆ ಕಾಟ ಕೊಟ್ಟಿತು. ಒಮ್ಮೆ ಮಳೆ ಬಿಟ್ಟರೂ ಕೂಡ ಮೈದಾನ ಒದ್ದೆಯಾಗಿದ್ದರಿಂದಾಗಿ ಆಡಲು ಅವಕಾಶ ದೊರೆಯಲಿಲ್ಲ. ಇದನ್ನೂ ಓದಿ: ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ
Advertisement
Advertisement
ಮೊದಲ ದಿನದಾಟದ ಅಂತ್ಯಕ್ಕೆ ರಾಹುಲ್ ಅಜೇಯ 122 ರನ್ (248 ಎಸೆತ, 17 ಬೌಂಡರಿ, 1 ಸಿಕ್ಸ್) ಮತ್ತು ಅಜಿಂಕ್ಯಾ ರಹಾನೆ 40 ರನ್ (81 ಎಸೆತ, 8 ಬೌಂಡರಿ) ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಎರಡನೇ ದಿನದಾಟ ರದ್ದಾಗಿರುವುದರಿಂದ ಮೂರನೇ ದಿನದಾಟಕ್ಕಾಗಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ನಡುವೆ ನಾಳೆ ಕೂಡ ಮಳೆ ಕಾಟ ಕೊಡುವ ಸಾಧ್ಯತೆ ಇದ್ದು ಮಳೆ ಬಿಟ್ಟರೆ ಆಟ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್
Advertisement