ಸೆಂಚುರಿಯನ್: ಮಳೆರಾಯನ ಬಿಡುವಿನಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ದಿನದಾಟ ಬೌಲರ್‌ಗಳ ಮೇಲಾಟಕ್ಕೆ ಸಾಕ್ಷಿಯಾಯಿತು. ಒಂದೇ ದಿನ ಎರಡು ತಂಡದ ಬೌಲರ್‌ಗಳು ಒಟ್ಟು 18 ವಿಕೆಟ್ ಕಬಳಿಸಿ ಮೆರೆದಾಡಿದ್ದಾರೆ.
Advertisement
273 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಿತು. ಮೊದಲ ದಿನ 122 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕೆ.ಎಲ್ ರಾಹುಲ್ ಆ ರನ್‍ಗೆ ಕೇವಲ 1 ರನ್ ಸೇರಿಸಿ 123 ರನ್ (260 ಎಸೆತ, 17 ಬೌಂಡರಿ, 1 ಸಿಕ್ಸ್) ಸಿಡಿಸಿ ದಿನದ ಮೊದಲ ವಿಕೆಟ್ ರೂಪದಲ್ಲಿ ಹೊರನಡೆದರು. ಬಳಿಕ ಅಜಿಂಕ್ಯಾ ರಹಾನೆ 48 ರನ್ (102 ಎಸೆತ, 9 ಬೌಂಡರಿ) ಅರ್ಧಶತಕ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ
Advertisement
Advertisement
ಲುಂಗಿ ಎನ್‍ಗಿಡಿ ಸೂಪರ್ ಸ್ಪೆಲ್
ಬೃಹತ್ ಮೊತ್ತ ಪೇರಿಸುವ ಪ್ಲಾನ್‍ನಲ್ಲಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ಆಫ್ರಿಕಾ ಬೌಲರ್ ಲುಂಗಿ ಎನ್‍ಗಿಡಿ ಕಡಿವಾಣ ಹಾಕಿದರು. ರಹಾನೆ ಔಟ್ ಆದ ಬಳಿಕ ಬಂದ ರಿಷಬ್ ಪಂತ್ 8 ರನ್(13 ಎಸೆತ. 1 ಬೌಂಡರಿ), ರವಿಚಂದ್ರನ್ ಅಶ್ವಿನ್ 4 ರನ್(5 ಎಸೆತ, 1 ಬೌಂಡರಿ), ಶಾರ್ದೂಲ್ ಠಾಕೂರ್ 4 ರನ್ (8 ಎಸೆತ, 1 ಬೌಂಡರಿ), ಮೊಹಮ್ಮದ್ ಶಮಿ, 8 ರನ್(9 ಎಸೆತ, 2 ಬೌಂಡರಿ) ಬಾರಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಜಸ್ಪ್ರೀತ್ ಬುಮ್ರಾ ಕೊನೆಯಲ್ಲಿ 14 ರನ್ (17 ಎಸೆತ, 2 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 320 ಗಡಿದಾಟಿಸಿ ಔಟ್ ಆದರು. ಅಂತಿಮವಾಗಿ 327 ರನ್ ಗಳಿಗೆ ಟೀಂ ಇಂಡಿಯಾ ಆಲ್‍ಔಟ್ ಆಯಿತು. ದಕ್ಷಿಣ ಆಫ್ರಿಕಾ ಪರ 24 ಓವರ್ ಎಸೆದ ಲುಂಗಿ ಎನ್‍ಗಿಡಿ 71 ರನ್ ಬಿಟ್ಟು ಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಕಗಿಸೊ ರಬಾಡ 3 ವಿಕೆಟ್, ಮಾರ್ಕೊ ಜಾನ್ಸೆನ್ 1 ವಿಕೆಟ್ ಕಿತ್ತರು.
Advertisement
ಬಳಿಕ ಮೊದಲ ಇನ್ನಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಡೀನ್ ಎಲ್ಗರ್ 1 ರನ್, ಮಾಕ್ರಾರ್ಮ್ 13 ರನ್, ಕೀಗನ್ ಪೀಟರ್ಸನ್ 15 ರನ್, ರಾಸ್ಸಿ ವ್ಯಾನ್‍ಡೆರ್ ಡಸೆನ್ಸ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಫೈವ್ ಸ್ಟಾರ್ ಶಮಿ
ನಂತರ ಒಂದಾದ ಟೆಂಬಾ ಬಾವುಮಾ ಮತ್ತು ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾಗೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 72 ರನ್(134 ಎಸೆತ) ಜೊತೆಯಾಟವಾಡಿತು. ಡಿ ಕಾಕ್ 34 ರನ್ (63 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ವಿಯಾನ್ ಮುಲ್ಡರ್ 12 ರನ್, ಮಾರ್ಕೊ ಜಾನ್ಸೆನ್ 19 ರನ್ ಬಾರಿಸಿ ವಿಕೆಟ್ ಕೊಟ್ಟು ಹೊರ ನಡೆದರು.
ಇನ್ನೊಂದು ಕಡೆ ತಾಳ್ಮೆಯುತ ಬ್ಯಾಟಿಂಗ್ ಮಾಡುತ್ತಿದ್ದ ಟೆಂಬಾ ಬಾವುಮಾ 54 ರನ್ (103 ಎಸೆತ, 10 ಬೌಂಡರಿ) ಅರ್ಧಶತಕ ಸಿಡಿಸಿ ಔಟ್ ಆದರು. ಬಳಿಕ ಬಂದ ಕಗಿಸೊ ರಬಾಡ 25 ರನ್ (45 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಕೇಶವ ಮಹಾರಾಜ್ 12 ರನ್ (19 ಎಸೆತ, 3 ಬೌಂಡರಿ) ಬಾರಿಸಿ ಭಾರತದ ಬೌಲರ್‌ಗಳ ದಾಳಿಗೆ ತಲೆಬಾಗಿದರು. ಭಾರತದ ಬೌಲರ್ ಶಮಿ ಪ್ರಮುಖ 5 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ಕುಸಿತಕ್ಕೆ ಕಾರಣರಾದರು.
ಅಂತಿಮವಾಗಿ 62.3 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 197 ರನ್‍ಗಳಿಗೆ ಆಲ್‍ಔಟ್ ಆಯಿತು. ಭಾರತ ಪರ ಬುಮ್ರಾ ಮತ್ತು ಠಾಕೂರ್ ತಲಾ 2 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಕಿತ್ತರು.
Stumps on Day 3 of the 1st Test.#TeamIndia 327 and 16/1, lead South Africa (197) by 146 runs.
Scorecard – https://t.co/eoM8MqSQgO #SAvIND pic.twitter.com/CZrptKnPi8
— BCCI (@BCCI) December 28, 2021
130 ರನ್‍ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ ಆರಂಭಿಸಿದ ಭಾರತ ತಂಡ 6 ಓವರ್ ಆಡಿ 16 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಯಾಂಕ್ 4 ರನ್ (14 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆಗಿದ್ದು, ಕೆ.ಎಲ್ ರಾಹುಲ್ ಅಜೇಯ 5 ರನ್ (19 ಎಸೆತ, 1 ಬೌಂಡರಿ) ಮತ್ತು ಶಾರ್ದೂಲ್ ಠಾಕೂರ್ 4 ರನ್ (5 ಎಸೆತ, 1 ಬೌಂಡರಿ) ಬಾರಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒಟ್ಟು ಭಾರತ ತಂಡ 146 ರನ್‍ಗಳ ಮುನ್ನಡೆಯಲ್ಲಿದೆ.