ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಭಾನುವಾರ ಒಂದೇ ಟೆಸ್ಟ್‌ನಲ್ಲಿ 150ಕ್ಕೂ ಅಧಿಕ ರನ್ ಸಿಡಿಸಿದ ಮತ್ತು ಐದು ವಿಕೆಟ್‍ಗಳನ್ನು ಪಡೆದ ವಿಶ್ವದ ಆರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಜಡೇಜಾ ಐದು ವಿಕೆಟ್‍ಗಳನ್ನು ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 175 ರನ್ ಸಿಡಿಸುವ ಮೂಲಕ ಭಾರತವನ್ನು 450 ರನ್‍ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Advertisement
Advertisement
ಈ ಮೊದಲು ವಿನೂ ಮಂಕಡ್, ಡೆನಿಸ್ ಅಟ್ಕಿನ್ಸನ್, ಪೊಲ್ಲಿ ಉಮ್ರಿಗರ್, ಗ್ಯಾರಿ ಸೋಬರ್ಸ್ ಮತ್ತು ಮುಷ್ತಾಕ್ ಮೊಹಮ್ಮದ್ ಈ ಸಾಧನೆ ಮಾಡಿದ ಇತರ ಐದು ಆಟಗಾರರಾಗಿದ್ದರು.
Advertisement
ಶ್ರೀ ಲಂಕಾ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ 138/4ಕ್ಕೆ ತಮ್ಮ 3ನೇ ದಿನದ ಆಟವಾವನ್ನು ಪ್ರಾರಂಭಿಸಿತ್ತು. ಲಂಕಾದ ಬ್ಯಾಟರ್‌ಗಳಾದ ಪಾತುಮ್ ನಿಸ್ಸಾಂಕ್ ಮತ್ತು ಚರಿತ್ ಅಸಲಂಕಾ ಜೋಡಿಯು ಒಟ್ಟು 53 ರನ್‍ಗಳನ್ನು ತಂಡಕ್ಕೆ ಸೇರಿಸಿದ್ದರು. ನಂತರದಲ್ಲಿ ಅಂತಿಮವಾಗಿ 58ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅಸಲಂಕಾ (29) ಅವರ ವಿಕೆಟ್ ತೆಗೆಯುವ ಮೂಲಕ ಈ ಜೋಡಿ ಆಟಕ್ಕೆ ಬ್ರೇಕ್ ಹಾಕಿದರು.
Advertisement
What a game for Ravindra Jadeja – 175* with the bat and now 5/41 with the ball. One of the finest display of all round performance. pic.twitter.com/iCIOqxcG8x
— Mufaddal Vohra (@mufaddal_vohra) March 6, 2022
ನಂತರದಲ್ಲಿ ಬ್ಯಾಟಿಂಗ್‍ಗೆ ಇಳಿದ ನಿರೋಶನ್ ಡಿಕ್ವೆಲ್ಲಾ ಕೇವಲ (2) ರನ್ ಗಳಿಸುವಷ್ಟರಲ್ಲಿ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ಜಡೇಜಾ ಸುರಂಗಾ ಲಕ್ಮಲ್ (0) ವಿಕೆಟ್‍ನ್ನು ಪಡೆಯುವಲ್ಲಿ ಯಶಸ್ವಿಯಾದರೂ.
ಕೊನೆಯಲ್ಲಿ ಶ್ರೀಲಂಕಾ ತಂಡವು 174 ರನ್‍ಗಳಿಗೆ ಆಲೌಟ್ ಆಗಿದೆ. ಈ ವೇಳೆ ಭಾರತವು 400 ರನ್‍ಗಳ ಮುನ್ನಡೆ ಸಾಧಿಸಿದ್ದು, ಅತಿಥೇಯರ ಮೇಲೆ ಫಾಲೋ-ಆನ್ ಹೆರಿದ್ದಾರೆ.