ಪೊಷೆಫ್‍ಸ್ಟ್ರೂಮ್: ಭಾರತ ಯುವ ತಂಡ ಆಟಗಾರ ದಿವ್ಯಾಂಶ್ ಸಕ್ಸೇನಾ ಪಾಕಿಸ್ತಾನದ ಅಂಡರ್ 19 ತಂಡದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಅಷ್ಟೇ ಅಲ್ಲದೆ ಕ್ಷೇತ್ರ ರಕ್ಷಣೆಯಲ್ಲೂ ಮಿಂಚಿದ್ದಾರೆ.
ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ ಪೊಷೆಫ್ ಸ್ಟ್ರೂಮ್‍ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್‍ನಲ್ಲಿ ಸೆಕ್ಸೇನಾ ಅದ್ಭುತ ಕ್ಯಾಚ್ ಪಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಸೆಕ್ಸೇನಾ ಕ್ಯಾಚ್ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ
Advertisement
https://twitter.com/_Cricnews_/status/1224644726361489408
Advertisement
ಪಾಕಿಸ್ತಾನದ ಬ್ಯಾಟ್ಸ್‍ಮನ್ ಮೊಹಮ್ಮದ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ ತಂಡದ ರನ್ ಏರಿಸಲು ಯತ್ನಿಸಿದರು. ಆದರೆ ಎ.ವಿ.ಅಂಕೋಲೆಕರ್ ಎಸೆದ ಇನ್ನಿಂಗ್ಸಿನ 34ನೇ ಓವರಿನ 3ನೇ ಎಸೆತವನ್ನು ಹ್ಯಾರೀಸ್ ಬೌಂಡರಿಗೆ ಅಟ್ಟಲು ಬಿರುಸಿನ ಹೊಡೆತ ಹೊಡೆದರು. ಈ ವೇಳೆ ಬೌಂಡರಿ ಲೈನ್ ಬಳಿ ನಿಂತಿದ್ದ ದಿವ್ಯಾಂಶ್ ಸಕ್ಸೇನಾ ವೇಗವಾಗಿ ಓಡಿ ಬಂದು ಡೈ ಹೊಡೆದು ಕ್ಯಾಚ್ ಹಿಡಿದು ಸಂಭ್ರಮಿಸಿದರು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
Advertisement
146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಆಟವಾಡುತ್ತಿದ್ದಾಗ ಹ್ಯಾರಿಸ್ ವಿಕೆಟ್ ಒಪ್ಪಿಸಿದ್ದೇ ಒಪ್ಪಿಸಿದ್ದು ನಂತರ ಪಾಕ್ ಗಳಿಸಿದ್ದು ಕೇವಲ 26 ರನ್. ಈ 26 ರನ್ ಗಳಿಸುವಷ್ಟರಲ್ಲಿ ಪಾಕ್ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್
Advertisement
ಮೊಹಮ್ಮದ್ ಹ್ಯಾರಿಸ್ 21 ರನ್ (15 ಎಸೆತ, ಬೌಂಡರಿ, ಸಿಕ್ಸ್) ಪೇರಿಸಿದ್ದರು. ಪಾಕ್ ತಂಡ ಪರ ಮೊಹಮ್ಮದ್ ಹ್ಯಾರಿಸ್ ಮಾತ್ರ ಸಿಕ್ಸ್ ಸಿಡಿಸಿದ್ದಾರೆ. ಉಳಿದ ಎಲ್ಲಾ ಆಟಗಾರರು ಸಿಕ್ಸ್ ಸಿಡಿಸುವಲ್ಲಿ ವಿಫಲರಾದರು. ಇದನ್ನೂ ಓದಿ: ಟಿ 20ಯಲ್ಲಿ ವೃತ್ತಿ ಜೀವನ ಶ್ರೇಷ್ಠ ಸಾಧನೆಗೈದ ಕನ್ನಡಿಗ ರಾಹುಲ್
ಪಾಕಿಸ್ತಾನದ ಅಂಡರ್ 19 ತಂಡ ನೀಡಿದ್ದ 173 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಮುರಿಯಲು ಪಾಕ್ ಬೌಲರ್‍ಗಳು ತಿಣುಕಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ 35.2 ಓವರಿನಲ್ಲಿ 176 ರನ್ ಪೇರಿಸಿ ಜಯಗಳಿಸಿತು.
What an outstanding catch this was from Divyaansh Saxena ????
All the action from today's game is on our website!#U19CWC | #INDvPAK | #FutureStarshttps://t.co/CP8UAgAY1Y
— ICC Cricket World Cup (@cricketworldcup) February 4, 2020
ಪಾಕ್ ವಿರುದ್ಧ ಭಾರತವು 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕ್ ತಂಡವು ಅಂಡರ್ 19 ವಿಶ್ವಕಪ್ ಟೂರ್ನಿಯಿಂದ ಬಿದ್ದಿದ್ದು, ಭಾರತವು 7ನೇ ಬಾರಿ ಫೈನಲ್ ಪ್ರವೇಶ ಮಾಡಿದೆ.
Sri Lanka ✅
Japan ✅
New Zealand ✅
Australia ✅
Pakistan ✅
Way to go, boys!
????????????????India U19 march into the final of the #U19CWC with a ten-wicket win over Pakistan.
Report ???????? https://t.co/ZHIRANrn09#INDvPAK #TeamIndia pic.twitter.com/HGH7yiBYA1
— BCCI (@BCCI) February 4, 2020