– 3 ವಿಕೆಟ್ ಕಿತ್ತ ಮಿಶ್ರಾ
– ಬಿಷ್ಣೋಯಿ, ತ್ಯಾಗಿಗೆ ತಲಾ ಎರಡು ವಿಕೆಟ್
– ಕೇವಲ ಒಂದು ಸಿಕ್ಸ್ ಹೊಡೆದ ಪಾಕ್ ಆಟಗಾರರು
ಪೊಷೆಫ್‍ಸ್ಟ್ರೂಮ್: ಭಾರತ ಯುವ ತಂಡದ ಬೌಲರ್‌ಗಳ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನದ ಅಂಡರ್ 19 ತಂಡವು 172 ರನ್ ಆಲೌಟ್ ಆಗಿದೆ.
ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ ಪೊಷೆಫ್ ಸ್ಟ್ರೂಮ್‍ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಸೆಮಿಫೈನಲ್‍ನಲ್ಲಿ ಪಾಕಿಸ್ತಾನ ತಂಡವು 43.1 ಓವರಿನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 172 ರನ್ ಪೇರಿಸಲು ಶಕ್ತವಾಯಿತು. ಪಾಕ್ ಪರ ಹೈದರ್ ಅಲಿ 56 ರನ್ (77 ಎಸೆತ, 9 ಬೌಂಡರಿ), ರೋಹೈಲ್ ನಜೀರ್ 62 ರನ್ (102 ಎಸೆತ, 6 ಬೌಂಡರಿ) ಹಾಗೂ ಮೊಹಮ್ಮದ್ ಹರಿಸ್ 21 ರನ್ (15 ಎಸೆತ, ಬೌಂಡರಿ, ಸಿಕ್ಸ್) ಪೇರಿಸಿದರು.
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಅಂಡರ್ 19 ತಂಡವನ್ನು ಭಾರತದ ಯುವ ಪಡೆ ಸಮರ್ಥವಾಗಿ ಕಟ್ಟಿ ಹಾಕಿತು. ಇನ್ನಿಂಗ್ಸ್ ನ ಎರಡನೇ ಓವರಿನಲ್ಲಿ ಪಾಕ್ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಹೈದರ್ ಅಲಿ ವಿಕೆಟ್ ಕಾಯ್ದುಕೊಂಡು ಆಡಿದರಾದರೂ ಮೈದಾನಕ್ಕಿಳಿದ ಉಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಪಾಕ್ ತಂಡವು ಮೂರನೇ ವಿಕೆಟ್‍ಗೆ 96 ರನ್ ಪೇರಿಸಿತು.
Advertisement
ಹೈದರ್ ಅಲಿ, ರೋಹೈಲ್ ನಜೀರ್ ಹಾಗೂ ಮೊಹಮ್ಮದ್ ಹರಿಸ್ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ ಎಂಟು ಜನ ಆಟಗಾರರು ಎರಡಂಕಿ ದಾಟಲು ವಿಫರಾದರು. ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಕೇವಲ ಒಂದು ಸಿಕ್ಸ್ ಸಿಡಿಸಿದ್ದಾರೆ. 146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕ್ 26 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್‍ಗೆ ಆಲೌಟ್ ಆಯಿತು.
Advertisement
ಮಿಶ್ರಾ ಕಮಾಲ್:
ಭಾರತದ ಯುವ ಪಡೆಯ ಬೌಲರ್ ಸುಶಾಂತ್ ಮಿಶ್ರಾ 8.1 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ, 3 ವಿಕೆಟ್ ಕಿತ್ತು ಮಿಂಚಿದರು. ಕಾರ್ತಿಕ್ ತ್ಯಾಗಿ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ, ಎ.ವಿ.ಅಂಕೋಲೆಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.
India bowl Pakistan out for 172.
Can they chase it down?#U19CWC | #INDvPAK | #FutureStars pic.twitter.com/YlYgXargj5
— ICC Cricket World Cup (@cricketworldcup) February 4, 2020
ವಿಕೆಟ್ ಪತನ:
ಮೊದಲ ವಿಕೆಟ್- 9 ರನ್
ಎರಡನೇ ವಿಕೆಟ್- 34 ರನ್
ಮೂರನೇ ವಿಕೆಟ್- 96 ರನ್
ನಾಲ್ಕನೇ ವಿಕೆಟ್- 118 ರನ್
ಐದನೇ ವಿಕೆಟ್- 146 ರನ್
ಆರನೇ ವಿಕೆಟ್- 156 ರನ್
ಏಳನೇ ವಿಕೆಟ್- 163 ರನ್
ಎಂಟನೇ ವಿಕೆಟ್- 196 ರನ್
ಒಂಬತ್ತನೇ ವಿಕೆಟ್- 172 ರನ್
ಹತ್ತನೇ ವಿಕೆಟ್- 172 ರನ್
India U19 bowl out Pakistan U19 for 172.
A brilliant effort from the #TeamIndia bowlers in the #U19CWC semi-final. ????????
Full scorecard ???????? https://t.co/xkcH8vkq0v#INDvPAK pic.twitter.com/xLIleHPVtb
— BCCI (@BCCI) February 4, 2020