ಮೆಲ್ಬರ್ನ್: ಒಂದೆಡೆ ಭಾರತದಲ್ಲಿ ದೀಪಾವಳಿಯ (Deepavali) ಸಂಭ್ರಮ. ಮತ್ತೊಂದಡೆ ಕಾಂಗರೂ ನಾಡಲ್ಲಿ ಕ್ರಿಕೆಟ್ ಕಿಚ್ಚು ಜೋರಾಗಿದೆ. ಈ ಕಿಚ್ಚು ಹಚ್ಚಿಸಿರೋದು ಭಾರತ (India) ಮತ್ತು ಪಾಕಿಸ್ತಾನ (Pakistan) ಮಹಾಕಾಳಗ.
Advertisement
ಬದ್ಧವೈರಿಗಳ ಮುಖಾಮುಖಿಯೇ ಅಂತಹದ್ದು. ಅದು ಎಲ್ಲೇ ನಡೆಯಲಿ, ಯಾವುದೇ ಕ್ರೀಡಾಂಗಣ ಇರಲಿ, ಯಾವುದೇ ಪಂದ್ಯವಿರಲಿ. ಅದು ನಿಜಕ್ಕೂ ಮಹಾಕಾಳಗವೇ ಸರಿ. ಕಾರಣ ಇಂಡೋ-ಪಾಕ್ ತಂಡಗಳು ಅಖಾಡಕ್ಕಿಳಿಯುತ್ತವೇ ಅಂದ್ರೆ, ಜಿದ್ದು, ರೋಷಾವೇಷ, ಸೇಡಿಗೆ ಸೇಡು, ಏಟಿಗೆ ಎದುರೇಟು ಇದ್ದಿದ್ದೇ. ಅಂತಹದೇ ಕಾಳಗಕ್ಕೆ ಕಾಂಗರೂ ನಾಡಲ್ಲಿ ರಣರಂಗ ಸಿದ್ಧವಾಗಿದೆ. ಇದನ್ನೂ ಓದಿ: ಇಂಡೋ-ಪಾಕ್ ಕದನಕ್ಕೆ ಮೆಲ್ಬರ್ನ್ ಸಜ್ಜು – ಈತನೇ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್
Advertisement
Advertisement
ಇಂದು ಮೆಲ್ಬರ್ನ್ (Melbourne) ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಪಾಕ್ ವಿರುದ್ಧದ ಸಾಲು, ಸಾಲು ಸೋಲು ಟೀಂ ಇಂಡಿಯಾದ ನಿದ್ದೆ ಕೆಡಿಸಿದೆ. 2021ರ ಟಿ20 ವಿಶ್ವಕಪ್ (T20 World Cup) ಹಾಗೂ 2022ರ ಏಷ್ಯಾಕಪ್ ಸೋಲುಂಡಿದ್ದ ಭಾರತ, ಪಾಕ್ ವಿರುದ್ಧ ಸೇಡುತೀರಿಸಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದೆ. ಚುಟುಕು ಸಮರದಲ್ಲಿ ಪಾಕ್ ಮಣಿಸಿ, ಶುಭಾರಂಭ ಮಾಡಲು ಟೀಂ ಇಂಡಿಯಾ ರಣತಂತ್ರವನ್ನೇ ಹೆಣೆದಿದೆ.
Advertisement
ಟೀಂ ಇಂಡಿಯಾಗೆ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡ್ತಿರೋದು ಸುಳ್ಳಲ್ಲ. ಇದು ತಂಡಕ್ಕೆ ಮೈನಸ್ ಪಾಯಿಂಟ್ ಆದ್ರೂ, ಎದುರಾಳಿಗಳನ್ನು ಕಟ್ಟಿ ಹಾಕೋ ತಾಕತ್ ಭಾರತದ ಬೌಲರ್‌ಗಳಿಗೆ. ಶಮಿ, ಭುವಿ, ಹರ್ಷಲ್ ಪಟೇಲ್, ಹರ್ಷದೀಪ್ ಸಿಂಗ್‍ರಂತ ಬೌಲರ್‌ಗಳು, ಪಾಕ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಾಡಲಿದ್ದಾರೆ. ಚಾಹಲ್, ಅಶ್ವಿನ್ ಸ್ಪಿನ್ ಜಾದು ಮಾಡಲಿದ್ದಾರೆ. ಹೊಡಿಬಡಿ ಆಟಗಾರರ ದಂಡೇ ಭಾರತದ ಟ್ರಂಪ್‍ಕಾರ್ಡ್. ಹಿಟ್‍ಮ್ಯಾನ್ ರೋಹಿತ್, ಕೂಲ್‍ಬ್ಯಾಟ್ಸ್‌ಮ್ಯಾನ್ ಕೆ.ಎಲ್ ರಾಹುಲ್, ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್, ರನ್ ಮಿಷನ್ ಕೊಹ್ಲಿ ಅಬ್ಬರಿಸೋದು ಪಕ್ಕ. ಅಲ್‍ರೌಂಡರ್ ಪಾಂಡ್ಯ, ಡಿಕೆ, ಪಂತ್, ದೀಪಕ್ ಹೂಡಾರಂತ ಬ್ಯಾಟ್ಸ್‌ಮ್ಯಾನ್‌ಗಳು ಪಂದ್ಯದ ಗತಿಯನ್ನೇ ಬದಲಿಸುವ ಚಾಣಕ್ಯತನ ಹೊಂದಿದ್ದಾರೆ. ಇದನ್ನೂ ಓದಿ: ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ
ಇತ್ತ ಪಾಕ್ ತಂಡದ ಬತ್ತಳಿಕೆಯಲ್ಲೂ ಭರ್ಜರಿ ಅಸ್ತ್ರಗಳೇ ಇವೆ. ನಾಯಕ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹಮದ್, ಆಸಿಫ್ ಅಲಿ, ಫಕರ್ ಝಮಾನ್, ಮೊಹಮದ್ ನವಾಜ್‍ರಂತ ಬ್ಯಾಟ್ಸ್‌ಮ್ಯಾನ್‌ಗಳು ರನ್‍ಮಳೆಯನ್ನು ಸುರಿಸುವ ಶಕ್ತಿ ಹೊಂದಿದ್ದಾರೆ. ಶಾಹಿನ್ ಆಫ್ರಿದಿ, ಹ್ಯಾರೀಸ್, ನಾಸೀಂ ಶಾಹ ಬೌಲಿಂಗ್ ದಾಳಿ ಕಬ್ಬಿಣದ ಕಡಲೆಯೇ ಸರಿ. ಹಾಗಾಗಿ, ಉಭಯ ತಂಡಗಳ ನಡುವೆ ಬಿಗ್ ಫೈಟ್ ಎದುರಾಗೋದು ಪಕ್ಕ. ಪಂದ್ಯಕ್ಕೆ (Rain) ಮಳೆ ಕಾಟ ಕೊಡುವ ಸಾಧ್ಯತೆ ಇತ್ತು. ಆದರೆ ಬೆಳಗ್ಗಿನ ವಾತಾವರಣ ನೋಡಿದಾಗ ಮಳೆ ಬಿಡುವು ನೀಡುವಂತಿದೆ.
???????? #INDvPAK | Calling all Team India cricket fans in Melbourne – Join us today for our traditional Bharat Army Flag march @MCG
⏰ 5pm
???? Gate 5 Entrance #BharatArmy #T20WorldCup #India #COTI ???????? pic.twitter.com/96DkzauiQt
— The Bharat Army (@thebharatarmy) October 23, 2022
ಮಳೆ ಬಿಟ್ಟರೆ ಟೀಂ ಇಂಡಿಯಾ ಇಂದೇ ದೀಪಾವಳಿ ಪಟಾಕಿ, ಸಿಹಿ ಹಂಚಲು ರೆಡಿ ಆಗಿದೆ. ಟಿ-20 ವಿಶ್ವಕಪ್‍ನ ಇತಿಹಾಸದ ಪುಟಗಳನ್ನು ಮೆಲುಕು ಹಾಕಿದ್ರೆ ಪಾಕ್ ವಿರುದ್ಧದ ಹಣಾಹಣಿಯಲ್ಲಿ ಭಾರತದ್ದೇ ಮೇಲುಗೈ. 6 ಬಾರಿ ಇಂಡೋ-ಪಾಕ್ ತಂಡಗಳು ಎದುರಾಗಿದ್ದು, ಭಾರತ 4 ಬಾರಿ ಗೆಲುವು ಸಾಧಿಸಿದ್ರೆ, ಪಾಕ್ ಪಡೆ ಕೇವಲ 1 ಪಂದ್ಯದಲ್ಲಿ ಜಯ ತನ್ನದಾಗಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಟಿ-20 ವಿಶ್ವಕಪ್‍ನಲ್ಲಿ ಪಾಕ್ ವಿರುದ್ಧ ಸೋಲನ್ನೇ ಕಾಣದ ಭಾರತ 2021ರ ವಿಶ್ವಕಪ್‍ನಲ್ಲಿ ಮೊದಲ ಸೋಲನ್ನು ಕಂಡಿತ್ತು. ಹಾಗಾಗಿ ಮತ್ತೆ ಗೆಲುವಿನ ಟ್ರ್ಯಾಕ್‍ಗೆ ಮರಳಲು ಬ್ಲೂಬಾಯ್ಸ್ ವೀರ ಯೋಧರಂತ ಸಜ್ಜಾಗಿದ್ದಾರೆ.
ಸೂಪರ್ ಸಂಡೇ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.