ನ್ಯೂಯಾರ್ಕ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಥಿತ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಟೂರ್ನಿ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಖರೀದಿಗೆ ಐಸಿಸಿ ಅವಕಾಶ ನೀಡಿದ್ದು, ಸೋಮವಾರ ಎರಡು ಪಂದ್ಯಗಳಿಗೆ ಟಿಕೆಟ್ (World Cup Ticket) ಮಾರಾಟವಾಗಿದೆ.
Advertisement
ಭಾರತ Vs ಪಾಕಿಸ್ತಾನ (Ind vs Pak) ಹಾಗೂ ಭಾರತ Vs ಕೆನಡಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್‌ಆಗಿದೆ. ಅದರಲ್ಲೂ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ದುಬಾರಿ ಬೆಲೆ ನಿಗದಿಯಾಗಿದೆ. ಅತಿಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ ಟಿಕೆಟ್ ದರಕ್ಕೆ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿ ಮಾರಾಟವಾಗಿದೆ. ನಿಜಕ್ಕೂ ಟಿಕೆಟ್ ಬೆಲೆ ಕೇಳಿದ್ರೆ ಒಂದು ಕ್ಷಣ ತಲೆತಿರುಗುವಂತೆ ಮಾಡುತ್ತೆ. ಇದನ್ನೂ ಓದಿ: ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್ – ಸಿಎಸ್‌ಕೆಗೆ ಭಾರೀ ಆಘಾತ
Advertisement
Advertisement
ಇದೇ ಮಾರ್ಚ್ 22 ರಿಂದ ಭಾರತದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಟೂರ್ನಿ ಆರಂಭವಾಗಲಿದೆ. ಈ ಶ್ರೀಮಂತ ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವಕಪ್ ಹಬ್ಬ ಆರಂಭವಾಗಲಿದೆ. ಜೂನ್ 1ರಿಂದ ಮೆಗಾ ಟೂರ್ನಿಗೆ ಚಾಲನೆ ಸಿಗಲಿದ್ದು, ಜೂನ್ 9ರಂದು ಇಂಡೋ-ಪಾಕ್ ಫೈಟ್ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮೈದಾನದಲ್ಲೇ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
Advertisement
ಭಾರತ-ಪಾಕಿಸ್ತಾನ ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳ ಟಿಕೆಟ್ ಬೆಲೆ 6 ಡಾಲರ್ ನಿಂದ ಅಂದರೆ (497 ರೂ.) ಗಳಿಗೆ ಮಾರಾಟವಾಗುತ್ತಿವೆ. ಆದ್ರೆ ವಿಐಪಿ ಮತ್ತು ಪ್ರೀಮಿಯಂ ಟಿಕೆಟ್ಗಳು 33.15 ಲಕ್ಷ ರೂ.ಗಳಷ್ಟಿದೆ. ತೆರಿಗೆ ಸೇರಿಸಿದ್ರೆ 41.44 ಲಕ್ಷ ರೂ.ಗಳಷ್ಟಿದೆ. ಆದ್ರೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ತೆರಿಗೆ, ಪ್ಲಾಟ್‌ಫಾರ್ಮ್ ಹಾಗೂ ಇತರೇ ಶುಲ್ಕ ಸೇರಿ 1.86 ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 20 ಕೋಟಿಯ ಸರದಾರ ಪ್ಯಾಟ್ ಕಮ್ಮಿನ್ಸ್ ಈಗ ಸನ್‌ರೈಸರ್ಸ್ ನಾಯಕ
ಟಿಕೆಟ್ ಬೆಲೆ ಕೇಳಿದವರು ಪಂದ್ಯವನ್ನು ಮನೆಯಲ್ಲೇ ಅಥವಾ ಮೊಬೈಲ್ನಲ್ಲೇ ನೋಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇಷ್ಟೊಂದು ಹಣ ಸಿಕ್ಕರೆ, ನಮ್ಮ ಲೈಫ್ ಸೆಟಲ್ ಎಂದು ಹೇಳುತ್ತಿದ್ದಾರೆ. ಆದ್ರೆ ಕೆಲ ಅಭಿಮಾನಿಗಳು ಎಷ್ಟು ಹಣ ಆದ್ರೂ ಪರ್ವಾಗಿಲ್ಲ. ಪಂದ್ಯವನ್ನು ನೋಡಿಯೇ ನೋಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್ ನಾಯಕತ್ವಕ್ಕೆ ಮೆಚ್ಚುಗೆ
ಜೂನ್ 1 ರಿಂದ ಜೂನ್ 29ರ ವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.