ನವದೆಹಲಿ: ಸೆ.10ರ ಭಾರತ (Team India) ಮತ್ತು ಪಾಕ್‍ನ (Pakistan) ಸೂಪರ್ ಫೋರ್ ಪಂದ್ಯಕ್ಕೆ 90% ವರುಣ ಅಡ್ಡಗಾಲಾಗುವ ಲಕ್ಷಣ ಕಂಡು ಬಂದಿದೆ. ಒಂದು ವೇಳೆ ಪಂದ್ಯ ರದ್ದಾದರೆ ರಿಸರ್ವ್ ದಿನದಂದು ಪಂದ್ಯ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಖಚಿತಪಡಿಸಿದೆ.
ಪಂದ್ಯದ ದಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಗೋಚರವಾಗುತ್ತಿರುವ ಹಿನ್ನೆಲೆಯಲ್ಲಿ ಎಸಿಸಿ ಈ ನಿರ್ಧಾರಕ್ಕೆ ಕೈಗೊಂಡಿದೆ. ಈ ಮೂಲಕ ಸೆ.10 ರಂದು ಕೊಲಂಬೋದ ಆರ್. ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮರುದಿನ ಪಂದ್ಯ ನಡೆಯಲಿದೆ. ಅಂದರೆ ಸೆ.11 ರಂದು ಪಂದ್ಯ ನಡೆಯಲಿದೆ ಎಂದು ಎಸಿಸಿ ತಿಳಿಸಿದೆ. ಇದನ್ನೂ ಓದಿ: Asia Cup 2023: ಈ ಬಾರಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಕಿರೀಟ – ಮಾಜಿ ಕ್ರಿಕೆಟಿಗರ ಭವಿಷ್ಯ
ಈ ಪಂದ್ಯಕ್ಕೆ ಟಿಕೆಟ್ ಪಡೆದ ಪ್ರೇಕ್ಷಕರಿಗೆ ಒಂದು ವೇಳೆ ಮಳೆಯಿಂದ ನಿರಾಸೆಯಾದರೆ ಅದೇ ಟಿಕೆಟ್ ಮೂಲಕ ಮರುದಿನದ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಪಂದ್ಯ ರದ್ದಾದರೆ ಟಿಕೆಟ್ ಯಾವುದೇ ಕಾರಣಕ್ಕೂ ಎಸೆಯದಂತೆ ಪ್ರೇಕ್ಷಕರಿಗೆ ಎಸಿಸಿ ಮನವಿ ಮಾಡಿದೆ.
ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಹಿಂದಿನ ಪಂದ್ಯ ಕ್ಯಾಂಡಿಯಲ್ಲಿ ಮಳೆಯಿಂದ ರದ್ದಾಗಿತ್ತು. ಈ ವೇಳೆ ಮೊದಲ ಇನ್ನಿಂಗ್ಸ್ ಮಾತ್ರ ಆಡಲು ಸಾಧ್ಯವಾಗಿತ್ತು. ಪಂದ್ಯದಲ್ಲಿ ಭಾರತ 266 ರನ್ ಗಳಿಸಿತ್ತು. ಆದರೆ ನಿರಂತರ ಮಳೆಯಿಂದಾಗಿ ಅದು ಬೌಲಿಂಗ್‍ಗೆ ಮರಳಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: World Cup 2023 – 5 ತಂಡಗಳ ಪ್ರಕಟ
Web Stories