ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ತಪ್ಪು ಮಾಡಿದ್ರಾ ಕೊಹ್ಲಿ?

Public TV
1 Min Read
Kohli 1

ಮ್ಯಾಂಚೆಸ್ಟರ್: ಅಂಪೈರ್ ನಿರ್ಣಯಕ್ಕೂ ಮುನ್ನ ಕ್ರೀಸ್ ತೊರೆದು ನಾಯಕ ವಿರಾಟ್ ಕೊಹ್ಲಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಐಸಿಸಿ 2019ರ ಏಕದಿನ ವಿಶ್ವಕಪ್ ನಲ್ಲಿ ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಬಿರುಸಿನ ಆಟ ಆರಂಭಿಸುತ್ತಿದಂತೆ ಮಳೆರಾಯ ಪಂದ್ಯಕ್ಕೆ ಕೆಲ ಸಮಯ ವಿರಾಮ ನೀಡಿದ. ಕೆಲ ಸಮಯದ ಬಳಿಕ ಪಂದ್ಯ ಆರಂಭಗೊಂಡಿತು.

Virat A

47.4 ಓವರ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗದಿದ್ದರೂ ಕ್ರೀಸ್ ತೊರೆಯುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾದರು. 47.4 ಓವರ್ ನಲ್ಲಿ ಮೊಹಮ್ಮದ್ ಅಮೀರ್ ಬೌನ್ಸರ್ ಎಸೆತವನ್ನು ಕೊಹ್ಲಿ ಹೊಡೆಯಲು ಪ್ರಯತ್ನಿಸಿದರು. ಬೌಲ್ ಬ್ಯಾಟ್ ಗೆ ತಾಗದೇ ನೇರ ಕೀಪರ್ ಸರ್ಫರಾಜ್ ಕೈ ಸೇರಿತು. ಅಂಪೈರ್ ನಿರ್ಣಯಕ್ಕೂ ಮುನ್ನವೇ ಕೊಹ್ಲಿ ಕ್ರೀಸ್ ತೊರೆದರು. ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಮೆರೆಯಲು ಹೋಗಿ ಕೊಹ್ಲಿ ತಪ್ಪು ಮಾಡಿದರು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

https://twitter.com/RoshanKrRai/status/1140256643420057600

ಚೆಂಡು ಬ್ಯಾಟ್ ಗೆ ತಾಗದಿದ್ದರೂ ಸೌಂಡ್ ಹೇಗೆ ಬಂತು ಎಂದು ಡ್ರೆಸಿಂಗ್ ರೂಮ್‍ನಲ್ಲಿ ಪರಿಶೀಲಿಸತೊಡಗಿದರು. ಒಂದು ವೇಳೆ ಅಂಪೈರ್ ಔಟ್ ನೀಡಿದ್ದರೂ, ಕೊಹ್ಲಿ ಡಿಆರ್ ಎಸ್ ಗೆ ಮನವಿ ಸಲ್ಲಿಸಬಹುದಿತ್ತು. ಕೊನೆಗೆ 65 ಎಸೆತಗಳಲ್ಲಿ 77 ರನ್ ಗಳಿಸಿದರು. ಪಂದ್ಯದಲ್ಲಿ 57 ರನ್ ಗಳಿಸಿದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಬರೆದರು.

ರೋಹಿತ್ ಶರ್ಮಾ ಶತಕ, ಕೆ.ಎಲ್.ರಾಹುಲ್ ಮತ್ತು ಕೊಹ್ಲಿ ಅರ್ಧ ಶತಕದ ನೆರವಿನೊಂದಿಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 336 ರನ್ ಕಲೆ ಹಾಕಿತು. 337 ರನ್ ಗಳ ಗುರಿ ಬೆನ್ನತ್ತಿರುವ ಪಾಕ್, ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದೆ.

Share This Article
Leave a Comment

Leave a Reply

Your email address will not be published. Required fields are marked *