ಮುಂಬೈ: ಏಷ್ಯಾಕಪ್‍ಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 27 ರಿಂದ ಯುಎಇನಲ್ಲಿ ಏಷ್ಯಾಕಪ್ ಆರಂಭವಾಗುತ್ತಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ತಂಡದ ವೇಗಿಗಳಿಬ್ಬರು ಟೂರ್ನಿಯಿಂದ ಹೊರಗುಳಿದಿದ್ದಾರೆ.
Advertisement
ಹೌದು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಎದುರುಬದುರಾಗುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದೀಗ ಏಷ್ಯಾಕಪ್‍ನಲ್ಲಿ ಪರಸ್ಪರ ಹೋರಾಟಕ್ಕೆ ಯುಎಇ ವೇದಿಕೆಯಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮೊದಲೇ ಎರಡು ತಂಡದ ಬಲಿಷ್ಠ ನಂಬಿಕಸ್ಥ ಬೌಲರ್‌ಗಳಿಬ್ಬರು ಗಾಯಾಳುವಾಗಿ ತಂಡದಿಂದ ಹೊರ ನಡೆದಿದ್ದಾರೆ. ಟೀಂ ಇಂಡಿಯಾದ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಹೊರ ನಡೆದರೆ, ಪಾಕಿಸ್ತಾನದ ಶಾಹೀನ್ ಅಫ್ರಿದಿ ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು
Advertisement
Advertisement
ಇದರಿಂದಾಗಿ ಎರಡು ತಂಡಗಳಿಗೂ ಸಣ್ಣ ಮಟ್ಟಿನ ಹೊಡೆತ ಬಿದ್ದಿದೆ. ಇಬ್ಬರೂ ಕೂಡ ಎದುರಾಳಿ ಆಟಗಾರರ ವಿರುದ್ಧ ತಮ್ಮ ವೇಗದ ಅಸ್ತ್ರದ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಡುವ ಸಾಮರ್ಥ್ಯ ಇರುವಂತಹ ಆಟಗಾರರಾಗಿದ್ದಾರೆ. ಇದೀಗ ಈ ಬಾರಿಯ ಏಷ್ಯಾಕಪ್‍ನಲ್ಲಿ ಇವರಿಬ್ಬರ ಬೌಲಿಂಗ್‍ನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನಮ್ಮ ಹೃದಯದಲ್ಲಿ ಅಲ್ಲ: ಫ್ಯಾನ್ಸ್ ಪೋಸ್ಟರ್ ವೈರಲ್
Advertisement
ಏಷ್ಯಾಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರ ವರೆಗೆ ನಡೆಯಲಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.