ಎಜ್‍ಬಾಸ್ಟನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 124 ರನ್‍ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಕ್‌ವರ್ತ್ ಲೂಯಿಸ್ ನಿಯಮದ ಅನುಸಾರ ಮೊದಲು ಬ್ಯಾಟ್ ಮಾಡಿದ ಭಾರತ 48 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್‍ಗಳಿಸಿತ್ತು. ಮತ್ತೆ ಮಳೆ ಸುರಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 41 ಓವರ್ ಗಳಲ್ಲಿ 289 ರನ್‍ಗಳ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನ 33.4 ಓವರ್‍ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯ್ತು.
Advertisement
ಪಾಕಿಸ್ತಾನದ ಪರ ಆರಂಭಿಕ ಆಟಹಾರ ಅಜರ್ ಅಲಿ 50 ರನ್( 65 ಎಸೆತ, 6 ಬೌಂಡರಿ) ಹೊಡೆದರೆ ಮಹಮ್ಮದ್ ಹಫೀಸ್ 33 ರನ್(43 ಎಸೆತ, 2 ಬೌಂಡರಿ) ಹೊಡೆದರು.
Advertisement
ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ 8 ರನ್‍ಗಳನ್ನು ನೀಡಿತ್ತು.
Advertisement
ಭರ್ಜರಿ ಮೊತ್ತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿತ್ತು.
Advertisement
ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.
ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೂರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.
ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.
ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.
ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.
32 ಎಸೆತಗಳಲ್ಲಿ 53 ರನ್ ಸಿಡಿಸಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಯುವರಾಜ್ ಸಿಂಗ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಎಷ್ಟು ಓವರ್‍ಗೆ ಎಷ್ಟು ರನ್?
50 ರನ್ 10.4 ಓವರ್
100 ರನ್ 19.3 ಓವರ್
150 ರನ್ 27.3 ಓವರ್
200 ರನ್ 37.5 ಓವರ್
250 ರನ್ 44.2 ಓವರ್
300 ರನ್ 47.1 ಓವರ್
319 ರನ್ 48 ಓವರ್
⭐???? Star Performer: With a quick-fire 53 off just 32 balls, @YUVSTRONG12 helped @BCCI to a what would be a winning total ???? #INDvPAK #CT17 pic.twitter.com/t7aMNrtQ3U
— ICC (@ICC) June 4, 2017
???????????? After being sent in, the @BCCI put on a show with @ImRo45 and @imVkohli leading the way to an imposing total of 319 #INDvPAK #CT17 pic.twitter.com/tQvxNuy47i
— ICC (@ICC) June 4, 2017
53 runs off 32 balls
8 fours
1 six
A game-changing innings from Player of the Match @YUVSTRONG12 ????#INDvPAK #CT17 pic.twitter.com/2xw9wCEuu3
— ICC (@ICC) June 4, 2017