ಹಾಕಿಯಲ್ಲಿ ಪಾಕ್ ವಿರುದ್ಧ ಗೋಲುಗಳ ಸುರಿಮಳೆ: 7-1 ಅಂತರದಿಂದ ಗೆದ್ದ ಭಾರತ

Public TV
1 Min Read
DCnNHSTWAAAjZp6

ಲಂಡನ್: ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಭಾನುವಾರ ಪಾಕಿಸ್ತಾನದ ವಿರುದ್ಧ 7-1 ಅಂತರದಿಂದ ಗೆಲುವು ಸಾಧಿಸಿದೆ.

ಮೊದಲಾರ್ಧದಲ್ಲಿ 3-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಭಾರತ ನಂತರದ ಅವಧಿಯಲ್ಲಿ 4 ಗೋಲುಗಳನ್ನು ಹೊಡೆಯುವ ಮೂಲಕ ಜಯಭೇರಿ ಭಾರಿಸಿತು.

ಹರ್ಮನ್ ಪ್ರೀತ್ ಸಿಂಗ್, ತಲ್ವಿಂದರ್ ಸಿಂಗ್, ಆಕಾಶ್‍ದೀಪ್ ಸಿಂಗ್ ತಲಾ ಎರಡು ಗೋಲು ಹೊಡೆದರು. ಪಾಕ್ ಪರ ಮಹಮ್ಮದ್ ಉಮರ್ ಒಂದು ಗೋಲು ಹೊಡೆದರು.

13 ನಿಮಿಷದಲ್ಲಿ ಹರ್ಮನ್‍ಪ್ರೀತ್ ಸಿಂಗ್ ಮೊದಲ ಗೋಲು ಹೊಡೆದರೆ 21 ನಿಮಿಷದಲ್ಲಿ ತಲ್ವಿಂದರ್ ಸಿಂಗ್ ಎರಡನೇ ಗೋಲು ಹೊಡೆದರು. 24 ನಿಮಿಷದಲ್ಲಿ ಎರಡನೇ ಗೋಲು ಹೊಡೆಯುವ ಮೂಲಕ ತಲ್ವಿಂದರ್ ಸಿಂಗ್ ಭಾರತಕ್ಕೆ 3-0 ಮುನ್ನಡೆಯನ್ನು ತಂದುಕೊಟ್ಟರು.

33 ನಿಮಿಷದಲ್ಲಿ ಹರ್ಮನ್‍ಪ್ರೀತ್ ಮತ್ತೊಂದು ಗೋಲು ಹೊಡೆದರೆ,  47 ನಿಮಿಷದಲ್ಲಿ ಆಕಾಶ್‍ದೀಪ್ ಗೋಲ್ ಹೊಡೆದರೆ, 49 ನಿಮಿಷದಲ್ಲಿ ಪ್ರದೀಪ್ ಗೋಲು ಹೊಡೆಯುವ ಮೂಲಕ ಸಂಪೂರ್ಣ ಮುನ್ನಡೆ ಸಾಧಿಸುವಲ್ಲಿ ಭಾರತ ಯಶಸ್ವಿ ಆಯ್ತು.

ಪಾಕ್ ಪರ 57 ನಿಮಿಷದಲ್ಲಿ ಮಹಮ್ಮದ್ ಉಮರ್ ಗೋಲು ಹೊಡೆದರು. 59 ನಿಮಿಷದಲ್ಲಿ ಅಕಾಶ್‍ದೀಪ್ ಎರಡನೇ ಗೋಲು ಹೊಡೆಯುವ ಮೂಲಕ ಭಾರತಕ್ಕೆ 7-1 ಮುನ್ನಡೆಯನ್ನು ತಂದು ಕೊಟ್ಟರು.

ಸ್ಕಾಟ್‍ಲ್ಯಾಂಡ್ ಮತ್ತು ಕೆನಡಾ ವಿರುದ್ಧ ಜಯಗಳಿಸಿದ್ದ ಭಾರತ ಈಗ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಬಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ನೆದರ್‍ಲ್ಯಾಂಡ್ ಮತ್ತು ಕೆನಡಾ ವಿರುದ್ಧ ಸೋತಿದ್ದ ಪಾಕ್ ಈಗ ಇಂದಿನ ಪಂದ್ಯವನ್ನು ಸೋತಿದ್ದು, ಕಾರ್ಟರ್ ಫೈನಲ್‍ಗೆ ಏರುವ ಕನಸು ಭಗ್ನಗೊಂಡಿದೆ. ನದರ್‍ಲ್ಯಾಂಡ್ 2 ಪಂದ್ಯವಾಡಿದ್ದು, 2 ಪಂದ್ಯಗಳನ್ನು ಗೆದ್ದರೆ, ಕೆನಡಾ 2 ಪಂದ್ಯಗಳನ್ನು ಆಡಿ ಒಂದರಲ್ಲಿ ಗೆಲುವು ಸಾಧಿಸಿದೆ. ಸ್ಕಾಟ್‍ಲ್ಯಾಂಡ್ ಎರಡೂ ಪಂದ್ಯಗಳನ್ನು ಸೋತಿದ್ದರೆ, ಪಾಕಿಸ್ತಾನ ಮೂರು ಪಂದ್ಯಗಳನ್ನು ಸೋತಿದೆ.

 

Share This Article
Leave a Comment

Leave a Reply

Your email address will not be published. Required fields are marked *