ಕೊಲಂಬೊ: ಭಾರತ (Team India) ಪಾಕ್ (Pakistan) ನಡುವಿನ ಪಂದ್ಯಗಳಿಗೆ ನಿರಂತರವಾಗಿ ಆಘಾತ ನೀಡುತ್ತಿರುವ ಮಳೆ ಇಂದು ಕೂಡ ಮುಂದುವರೆದಿದೆ. ಮುಂಜಾನೆ ಕೂಡ ಕೊಲೊಂಬೊದಲ್ಲಿ ಮಳೆ ಸುರಿದಿದೆ. ಈ ನಡುವೆ ಎರಡೂ ತಂಡಗಳ ಪಂದ್ಯಕ್ಕೆ ಮೀಸಲು ದಿನವಾದ ಇಂದು ಪಂದ್ಯ ಮುನ್ನೆಡಸಲು ತಯಾರಿ ನಡೆಸಲಾಗುತ್ತಿದೆ.
ಭಾನುವಾರ ಶ್ರೀಲಂಕಾದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮಳೆಯಿಂದ ಸ್ಥಗಿತಗೊಂಡಿದ್ದ ಭಾರತ ಪಾಕ್ ನಡುವಿನ ಸೂಪರ್ ಫೋರ್ ಪಂದ್ಯ ಇಂದು (ಸೋಮವಾರ) ಅದೇ ಓವರ್‌ನಿಂದ ಮುಂದುವರೆಯಲಿದೆ. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್
ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಈಗ ಮೀಸಲು ದಿನದಂದು ಎರಡು ತಂಡಗಳ ಹಣಾಹಣಿ ಅದೇ ಹಂತದಿಂದ ಪುನರಾರಂಭಗೊಳ್ಳಲಿದೆ.
ಟೀಂ ಇಂಡಿಯಾ ಉಳಿದ 25.5 ಓವರ್‌ಗಳನ್ನು ಆಡುವುದು ಬಾಕಿ ಇದೆ. ಮಂಗಳವಾರ ಸಹ ಶ್ರೀಲಂಕಾ ವಿರುದ್ಧ ಭಾರತ ಸೆಣಸಲಿದ್ದು, ಸತತ ಮೂರು ದಿನಗಳ ಕಾಲ ಮೈದಾನದಲ್ಲಿ ತಂಡ ಕಾಣಿಸಿಕೊಳ್ಳಲಿದೆ. ಇದನ್ನೂ ಓದಿ: Asia Cup 2023ː ಇಂಡೋ-ಪಾಕ್ ಹೈವೋಲ್ಟೇಜ್ ಕದನಕ್ಕೆ ಮತ್ತೆ ಮಳೆ ಅಡ್ಡಿ – ಸೋಮವಾರಕ್ಕೆ ಮುಂದೂಡಿಕೆ
Web Stories