ದುಬೈ: ಟೀಂ ಇಂಡಿಯಾ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ (Champions Trophy Final) ಪಂದ್ಯವನ್ನು ಯುವತಿ ಜೊತೆ ಕುಳಿತುಕೊಂಡು ವೀಕ್ಷಿಸುತ್ತಿದ್ದಾರೆ.
ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಮತ್ತು ಚಹಲ್ ಈಗ ಬೇರ್ಪಟ್ಟಿದ್ದಾರೆ. ಡಿವೋರ್ಸ್ ಪಡೆದ ನಂತರ ಚಹಲ್ ಮತ್ತೇ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
Advertisement
Advertisement
Chahal average bowling speed = 85 km/h
Chahal move on speed = 850 km/h pic.twitter.com/v167VwaKev
— Sagar (@sagarcasm) March 9, 2025
Advertisement
ಚಹಲ್ ಗ್ಯಾಲರಿಯಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕುಳಿತಿದ್ದಾರೆ. ಚಹಲ್- ಆರ್.ಜೆ ಮಹ್ವಾಶ್ ಅವರ ಫುಲ್ ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ವಿಧ ವಿಧವಾದ ಕಮೆಂಟ್ ಮಾಡುತ್ತಿದ್ದಾರೆ.
Advertisement
ಕೆಲ ದಿನಗಳ ಹಿಂದೆ ಮಹ್ವಾಶ್ ಜೊತೆ ಚಹಲ್ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬೆನ್ನಲ್ಲೇ ಗಾಸಿಪ್‌ಗಳು ಎದ್ದಿದ್ದವು. ಈ ಗಾಸಿಪ್‌ಗಳನ್ನು ಮಹ್ವಾಶ್ ತಳ್ಳಿ ಹಾಕಿದ್ದರು. ಹೀಗಿದ್ದರೂ ಈಗ ಮತ್ತೆ ಚಹಲ್ ಜೊತೆ ಮಹ್ವಾಶ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?
Dubai: Actor Vivek Oberoi was spotted in the stands at the Dubai International Stadium, supporting Team India during the final match between India and New Zealand in the #ChampionsTrophy2025
He tweets on x, “Spin master Yuzvendra Chahal in our box, spinning the winning energy… pic.twitter.com/ILXeBnSUE0
— IANS (@ians_india) March 9, 2025
ಯಜುವೇಂದ್ರ ಚಹಲ್ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ಅಂತಿಮ ವಿಚ್ಛೇದನ (Divorce) ವಿಚಾರಣೆ ನಡೆಯಿತು. ಚಹಲ್ ಮತ್ತು ಧನಶ್ರೀ ಇಬ್ಬರೂ ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯವು ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯ ಮೂಲಕ ಡಿವೋರ್ಸ್ ಪಡೆಯುತ್ತೇವೆ ಎಂದು ತಿಳಿಸಿದ್ದರು.
ತಮ್ಮ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಚಹಲ್ ಮತ್ತು ಧನಶ್ರೀ ‘ಹೊಂದಾಣಿಕೆಯ ಸಮಸ್ಯೆ’ ಕಾರಣವನ್ನು ನೀಡಿದ್ದರು. ಪ್ರಕರಣವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ನ್ಯಾಯಾಧೀಶರು ಸಂಜೆ 4:30ಕ್ಕೆ ಅಧಿಕೃತವಾಗಿ ಅವರ ವಿಚ್ಛೇದನ ತೀರ್ಪು ಪ್ರಕಟಿಸಿದರು.