ಅಹಮದಾಬಾದ್: ಭಾರತ (Team India) ಮತ್ತು ನ್ಯೂಜಿಲೆಂಡ್ (New Zealand) ನಡುವೆ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ನಡೆಯಲಿರುವ ಅಹಮದಾಬಾದ್‌ನ ಮೋದಿ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ ಎಂದು ವರದಿಯಾಗಿದೆ.
ಪಿಚ್ ಕಪ್ಪು ಮತ್ತು ಕೆಂಪು ಮಣ್ಣಿನ ಮಿಶ್ರಣವನ್ನು ಹೊಂದಿದ್ದು ಬ್ಯಾಟಿಂಗ್‌ಗೆ (Batting) ಪೂರಕವಾಗಿರಲಿದೆ. ಮುಂಬೈಯ ವಾಂಖೆಡೆಯ ಸೆಮಿಫೈನಲ್ ಪಿಚ್‌ನಂತೆಯೇ, ಬೌನ್ಸ್ ಹೊಂದಿರುತ್ತದೆ ಮತ್ತು ಸೀಮರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಈ ಪಿಚ್‌ನಲ್ಲಿ 200 ರನ್ ಹೊಡೆದರೂ ಅಚ್ಚರಿ ಇಲ್ಲ.

ಟಿ20 ವಿಶ್ವಕಪ್‌ನ ಒಂದು ಪಂದ್ಯ ಮಾತ್ರ ಈ ಪಿಚ್‌ನಲ್ಲಿ ನಡೆದಿದೆ. ಫೆ.9 ರಂದು ಕೆನಡಾ (Canada) ಮತ್ತು ದಕ್ಷಿಣ ಆಫ್ರಿಕಾ (South Africa) ಪಂದ್ಯ ನಡೆದ ಪಿಚ್‌ನಲ್ಲೇ ಫೈನಲ್ ನಡೆಯಲಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 213 ರನ್ ಹೊಡೆದಿತ್ತು. ಚೇಸ್ ಮಾಡಿದ್ದ ಕೆನಡಾ 8 ವಿಕೆಟ್ ನಷ್ಟಕ್ಕೆ 156 ರನ್ ಹೊಡೆದಿತ್ತು.
ಇಲ್ಲಿಯವರೆಗೆ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಮೂರು ಬಾರಿ ಟಿ20 ವಿಶ್ವಕಪ್ ಪಂದ್ಯ ನಡೆದಿದೆ. ಈ ಮೂರು ಪಂದ್ಯಗಳನ್ನು ನ್ಯೂಜಿಲೆಂಡ್ ಜಯಗಳಿಸಿದೆ.
2007 ರಲ್ಲಿ 10 ವಿಕೆಟ್‌ಗಳಿಂದ ಗೆದ್ದರೆ 2016 ರಲ್ಲಿ ನ್ಯೂಜಿಲೆಂಡ್ 47 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ಕೇವಲ 79 ರನ್‌ಗಳಿಗೆ ಆಲೌಟ್ ಆಗಿತ್ತು. 2021 ರ ಪಂದ್ಯಲ್ಲಿ ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಜಯಗಳಿಸಿತ್ತು.

