ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್‍ಸ್ವಿಪ್ ಮೂಲಕ ತನ್ನ ಮುಡಿಗೇರಿಸಿಕೊಂಡಿದೆ. ಆದರೆ ಮೌಂಟ್ ಮಾಂಗನುಯಿಯಲ್ಲಿ ಇಂದು ನಡೆದ ಕೊನೆಯ ಪಂದ್ಯದಲ್ಲಿ ಭಾರತ ತಂಡದ ಆಲ್‍ರೌಂಡರ್ ಶಿವಂ ದುಬೆ ಕೆಟ್ಟ ದಾಖಲೆಗೆ ಗುರಿಯಾಗಿದ್ದಾರೆ.
ನ್ಯೂಜಿಲೆಂಡ್ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ಬೌಲಿಂಗ್ ಮಾಡಿದ ಶಿವಂ ದುಬೆ ಕ್ರಮವಾಗಿ 6, 6, 4, 1, ನೋಬಾಲ್ + 4, 6 ಹಾಗೂ 6 ಸೇರಿ ಒಟ್ಟು 34 ರನ್ ನೀಡಿದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್ಗಳ ಪಟ್ಟಿಯಲ್ಲಿ ಶಿವಂ ದುಬೆ ಎರಡನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪಟ್ಟಿಯಲ್ಲಿ ಶಿವಂ ದುಬೆ ಅಗ್ರ ಸ್ಥಾನದಲ್ಲಿದ್ದರೆ, ಸ್ಟುವರ್ಟ್ ಬಿನ್ನಿ ನಂತರ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
Advertisement
New Zealand in the last two overs ????
6, 6, 4, 1, 4nb, 6, 6, 1, 0, 1, 6, 1, 0#NZvIND pic.twitter.com/V5HYmGC7E4
— ICC (@ICC) February 2, 2020
Advertisement
ಶಿವಂಗೆ ಮೊದಲು ಸ್ಟುವರ್ಟ್ ಬಿನ್ನಿ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ಒಂದೇ ಓವರಿನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2007ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ 36 ರನ್ ನೀಡಿದ್ದರು. ಇದನ್ನೂ ಓದಿ: ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ
Advertisement
ಎರಡನೇ ಸ್ಥಾನದಲ್ಲಿ ಶಿವಂ ದುಬೆ ಇದ್ದಾರೆ. ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಎಜತುಲ್ಲಾ ದೌಲತ್ ಜೈ ಇಂಗ್ಲೆಂಡ್ ವಿರುದ್ಧ 2012ರಲ್ಲಿ ನಡೆದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ದಕ್ಷಿಣ ಆಫ್ರಿಕಾದ ವೇಯ್ನ್ ಪೆರ್ನೆಲ್ ಇಂಗ್ಲೆಂಡ್ ವಿರುದ್ಧ 2012ರಲ್ಲಿ 32ರನ್, ಭಾರತದ ಸ್ಟುವರ್ಟ್ ಬಿನ್ನಿ ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ 32 ರನ್ ಹಾಗೂ ಮ್ಯಾಕ್ಸ್ ಒ’ಡೌಡ್ ಜಿಂಬಾಬ್ವೆ ಸ್ಕಾಟ್ಲೆಂಡ್ ವಿರುದ್ಧ 2019ರಲ್ಲಿ 32 ರನ್ ನೀಡಿದ್ದರು. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್