ಮೌಂಟ್ ಮಾಂಗನುಯಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೀಪಿಂಗ್ ಹೊಣೆ ಹೊತ್ತು ಸೈ ಎಸಿನಿಕೊಂಡ ಕನ್ನಡಿಗ ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯತ್ವದ ಜವಾಬ್ದಾರಿ ಹೊತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರು ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು. ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ರೋಹಿತ್ ಶರ್ಮಾ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಅವರು 60 ರನ್ ಗಳಿಸಿ ನಿವೃತ್ತರಾದರು. ಇದರಿಂದಾಗಿ ಕೆ.ಎಲ್.ರಾಹುಲ್ ಇದ್ದಕ್ಕಿದ್ದಂತೆ ತಂಡದ ನಾಯಕನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಯಿತು. ಇದನ್ನೂ ಓದಿ: ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ
Advertisement
UPDATE – Rohit Sharma hasn't made his way to the field. KL Rahul is the stand-in Captain.#NZvIND
— BCCI (@BCCI) February 2, 2020
Advertisement
ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಸಮಯದಲ್ಲಿ ಕಾಲಿನ ಸ್ನಾಯುವಿನ ಸೆಳೆತಕ್ಕೆ ಒಳಗಾದರು. ಆದ್ದರಿಂದ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ರೋಹಿತ್ ಮೈದಾನದಿಂದ ಹೊರ ನಡೆದರು. ಈ ವೇಳೆ ಬಿಸಿಸಿಐ, ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿ ಇರುವುದರಿಂದ ನಮ್ಮ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿತು. ಹೀಗಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಅಂದರೆ ಮಧ್ಯದ ಪಂದ್ಯದಲ್ಲಿ ರಾಹುಲ್ ಅವರಿಗೆ ತಂಡದ ನಾಯಕನಾಗಲು ಅವಕಾಶ ಸಿಕ್ಕಿತು.
Advertisement
ರಾಹುಲ್ ಹೊಸ ದಾಖಲೆ:
ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ನ್ಯೂಜಿಲೆಂಡ್‍ನಲ್ಲಿ ವಿರುದ್ಧ ನಡೆದ ಟಿ20 ಸರಣಿಯ ಐದು ಪಂದ್ಯಗಳಲ್ಲಿ 224 ರನ್ ಗಳಿಸಿ ಅಂತರರಾಷ್ಟ್ರೀಯ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಬರೆದಿದ್ದಾರೆ.
Advertisement
163 on the board. Can #TeamIndia defend the target? ???????? #NZvIND pic.twitter.com/GlS4lqIoJL
— BCCI (@BCCI) February 2, 2020
ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ 45 ರನ್ (33 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ಈ ಮೂಲಕ ಮೊಜಾಂಬಿಕ್‍ನ ದೇಶದ ಬ್ಯಾಟ್ಸ್‌ಮನ್ ಡಾಮಿಯಾವೊ ಕೂನಾ (2019-20ರಲ್ಲಿ ಮಲಾವಿ ವಿರುದ್ಧ) ಮತ್ತು ನ್ಯೂಜಿಲೆಂಡ್ ಓಪನರ್ ಬ್ಯಾಟ್ಸ್‌ಮನ್ ಕಾಲಿನ್ ಮನ್ರೊ (2017-18ರಲ್ಲಿ ವೆಸ್ಟ್ ಇಂಡೀಸ್).
ಈ ಸರಣಿಯಲ್ಲಿ ರಾಹುಲ್ 56ರ ಸರಾಸರಿಯಲ್ಲಿ ಐದು ಪಂದ್ಯಗಳಲ್ಲಿ 224 ರನ್ ಗಳಿಸಿದ್ದಾರೆ. ರಾಹುಲ್ ಐದು ಪಂದ್ಯಗಳಲ್ಲಿ ಕ್ರಮವಾಗಿ 45 ರನ್, 39 ರನ್, 27 ರನ್, 57 ರನ್ ಮತ್ತು 56 ರನ್ ಪೇರಿಸಿದ್ದಾರೆ. ಈ ಪಟ್ಟಿಯಲ್ಲಿ ಮುಂದಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಮನ್ರೊ ಅವರು 5 ಇನ್ನಿಂಗ್ಸ್ ಗಳಲ್ಲಿ 178 ರನ್ ಗಳಿಸಿದ್ದಾರೆ. ಗಾಯದಿಂದಾಗಿ ಅಂತಿಮ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡ ಕಿವಿ ನಾಯಕ ಕೇನ್ ವಿಲಿಯಮ್ಸನ್ ಎರಡು ಅರ್ಧಶತಕಗಳೊಂದಿಗೆ 160 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
#SpiritOfCricket ????????#NZvIND pic.twitter.com/97kkQP8y02
— BCCI (@BCCI) February 2, 2020