ರಾಯ್ಪುರ: 24 ಇನ್ನಿಂಗ್ಸ್, 15 ತಿಂಗಳ ಬಳಿಕ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಹೊಡೆದಿದ್ದಾರೆ.
ಹೌದು. ನ್ಯೂಜಿಲೆಂಡ್ (New Zealand) ವಿರುದ್ಧದ ಇಂದಿನ ಪಂದ್ಯದಲ್ಲಿ ಸೂರ್ಯ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಸ್ಕೈ ಕೊನೆಯ ಬಾರಿ ಅರ್ಧಶತಕ ಹೊಡೆದಿದ್ದು ಬಾಂಗ್ಲಾ ವಿರುದ್ಧ ಅಕ್ಟೋಬರ್ 12, 2024 ರಲ್ಲಿ. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯ 35 ಎಸೆತಗಳಲ್ಲಿ 75 ರನ್ ಹೊಡೆದಿದ್ದರು. ಈ ಪಂದ್ಯದ ಬಳಿಕ ಇಂದು ಸೂರ್ಯ ಬ್ಯಾಟ್‌ನಿಂದ ಅತ್ಯುತ್ತಮ ಆಟ ಬಂದಿದೆ.
ಕಳೆದ ವರ್ಷ 21 ಪಂದ್ಯಗಳಿಂದ ಕೇವಲ 28 ರನ್ ಹೊಡೆದಿದ್ದರು. ಅಷ್ಟೇ ಅಲ್ಲದೇ 47 ಗರಿಷ್ಠ ರನ್ ಆಗಿತ್ತು. ಸೂರ್ಯ ಕಳಪೆ ಬ್ಯಾಟಿಂಗ್‌ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಿದ್ದರೂ ಬಿಸಿಸಿಐ ಸೂರ್ಯ ಅವರನ್ನೇ ನಾಯಕನನ್ನಾಗಿ ಮುಂದುವರಿಸಿತ್ತು. ಇದನ್ನೂ ಓದಿ: ಸೂರ್ಯ, ಕಿಶನ್ ಸ್ಫೋಟಕ ಆಟಕ್ಕೆ ಪಾಕ್ ದಾಖಲೆ ಉಡೀಸ್ – ರನ್ ಮಳೆಯಲ್ಲಿ ಗೆದ್ದ ಭಾರತ

ಇಂದಿನ ಪಂದ್ಯದಲ್ಲಿ ಸೂರ್ಯ ಅವರು ಝಾಕ್ ಫೌಲ್ಕ್ಸ್ ಎಸೆದ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ 24 ರನ್(4,4,1w,4,4,6,2) ಚಚ್ಚಿದ್ದರು. 23 ಎಸೆತಗಳಲ್ಲಿ ಫಿಫ್ಟಿ ಹೊಡೆದ ಸ್ಕೈ ಅಂತಿಮವಾಗಿ ಔಟಾಗದೇ 82 ರನ್(37 ಎಸೆತ, 9 ಬೌಂಡರಿ, 4 ಸಿಕ್ಸ್) ಬಾರಿಸಿದರು.
ಮೂರನೇ ವಿಕೆಟಿಗೆ ಸೂರ್ಯ ಕುಮಾರ್ ಯಾದವ್ ಇಶನ್ ಕಿಶನ್ ಜೊತೆ 49 ಎಸೆತಗಳಲ್ಲಿ 122 ರನ್, ಮುರಿಯದ ನಾಲ್ಕನೇ ವಿಕೆಟಿಗೆ ಶಿವಂ ದುಬೆ ಜೊತೆ 37 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿ ಭಾರತಕ್ಕೆ ಜಯವನ್ನು ತಂದುಕೊಟ್ಟರು.

