ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ ನಾಲ್ವರು ಕನ್ನಡಿಗರು

Public TV
1 Min Read
KL RAHUL PARSID KRISHANA MAYANK

ದುಬೈ: ಟಿ20 ವಿಶ್ವಕಪ್‍ನಲ್ಲಿ ಸೂಪರ್-12 ಹಂತದಲ್ಲೇ ಹೊರಬಿದ್ದ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಸಿದ್ಧವಾಗುತ್ತಿದೆ. ಈ ಸರಣಿಯಲ್ಲಿ ನಾಲ್ವರು ಕನ್ನಡಿಗರು ಟೀಂ ಇಂಡಿಯಾದ ಬಲ ಹೆಚ್ಚಿಸಲಿದ್ದಾರೆ.

TEAM INDIA 2 1

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿ ನವೆಂಬರ್ 17ಕ್ಕೆ ಆರಂಭಗೊಳ್ಳಲಿದ್ದು, ಡಿಸೆಂಬರ್ 7ರ ವರಗೆ ಸರಣಿ ನಡೆಯಲಿದೆ. ಮೊದಲು 3 ಟಿ20 ಪಂದ್ಯಗಳು ನಡೆದರೆ, ನಂತರ 2 ಟೆಸ್ಟ್ ಪಂದ್ಯಗಳನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಆಡಳಿದೆ. ಈ ಸರಣಿಗಾಗಿ ಇದೀಗ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಟೆಸ್ಟ್ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದು, ಈ ಮೂವರೊಂದಿಗೆ ಇನ್ನೊಬ್ಬರು ಕನ್ನಡಿಗ ಸೇರಿ ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಲಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್‍ಗೆ ಕ್ಷಣಗಣನೆ – ಆಸೀಸ್ vs ಕಿವೀಸ್ ಟ್ರ್ಯಾಕ್ ರೆಕಾರ್ಡ್

KL RAHUL

ಟೀಂ ಇಂಡಿಯಾ ಆಯ್ಕೆ ಮಾಡಿರುವ ಟೆಸ್ಟ್ ತಂಡದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ ಈ ಮೂವರು ಸ್ಥಾನ ಪಡೆದಿದ್ದಾರೆ. ಆದರೆ ಇದೀಗ ಟೀಂ ಇಂಡಿಯಾದಲ್ಲಿ ನಾಲ್ವರು ಕನ್ನಡಿಗರಿದ್ದು ಇನ್ನೊಬ್ಬ ಕನ್ನಡಿಗ ಯಾರೆಂದರೆ ಅದು ಟೀಂ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

Rahul Dravid

ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ ನೂತನ ಕೋಚ್ ಆಗಿ ದ್ರಾವಿಡ್ ಆಯ್ಕೆಗೊಂಡಿದ್ದು, ಟೀಂ ಇಂಡಿಯಾವನ್ನು ಯಶಸ್ಸಿನ ಮೆಟ್ಟಿಲೇರಿಸುವ ಹೊಣೆ ಇವರ ಮೇಲಿದೆ. ಇದೀಗ ದ್ರಾವಿಡ್ ಜೊತೆ ಅವರ ಮೂರು ಮಂದಿ ಶಿಷ್ಯರು ಸೇರಿಕೊಂಡು ಟೀಂ ಇಂಡಿಯಾ ಗೆಲುವಿಗೆ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ

Share This Article
Leave a Comment

Leave a Reply

Your email address will not be published. Required fields are marked *