ಮ್ಯಾಂಚೆಸ್ಟರ್: ಮಳೆಯ ಪರಿಣಾಮ 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ನಿಗದಿತ ಸಮಯಕ್ಕೆ ಆರಂಭವಾಗಿದ್ದು, ನಿನ್ನೆ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿದ್ದ ನ್ಯೂಜಿಲೆಂಡ್ ಇಂದು 3 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಭಾರತಕ್ಕೆ 240 ರನ್ ಗುರಿ ನೀಡಿತು.
67 ರನ್ ಗಳಿಸಿ ಬ್ಯಾಟಿಂಗ್ ಕ್ರೀಸ್‍ನಲ್ಲಿದ್ದ ಅನುಭವಿ ಆಟಗಾರ ರಾಸ್ ಟೇಲರ್ 74 ರನ್ ಗಳಿಸಿ ರನೌಟ್ ಆಗಿ ನಿರ್ಗಮಿಸಿದರು. ಲಾಥಮ್ 11 ರನ್, ಹೆನ್ರಿ 1 ರನ್ ಗಳಿಸಿ ಔಟಾದರು. ಸ್ಯಾಂಟನರ್ ಹಾಗೂ ಬೋಲ್ಟ್ 3 ರನ್ ಗಳಿಸಿ ಅಜೇಯರಾಗಿ ಉಳಿದರು. ಪರಿಣಾಮ ಭಾರತ 240 ರನ್ ಗುರಿ ಪಡೆಯಿತು. ಪಂದ್ಯದಲ್ಲಿ ಬೀಗಿ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬುಮ್ರಾ, ಪಾಂಡ್ಯ, ಜಡೇಜಾ, ಚಹಲ್ ತಲಾ 1 ವಿಕೆಟ್ ಪಡೆದರು.
Advertisement
TWO WICKETS IN TWO BALLS!
That man Jadeja with a direct hit followed by a fantastic catch in the deep! ???? #INDvNZ | #CWC19 pic.twitter.com/RlyrvWxMou
— ICC Cricket World Cup (@cricketworldcup) July 10, 2019
Advertisement
ರಿವರ್ಸ್ ಡೇ ಹಿನ್ನೆಲೆಯಲ್ಲಿ ಮುಂದುವರಿಯತ್ತಿರುವ ಪಂದ್ಯದಲ್ಲಿ ಇದಕ್ಕೂ ಮುನ್ನ ದಿನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ ತಂಡ ನಾಯಕ ವಿಲಿಯಮ್ಸನ್ 95 ಎಸೆತಗಳಲ್ಲಿ 67 ರನ್ ಗಳ ನೆರವಿನಿಂದ 211 ರನ್ ಗಳಿಸಿತ್ತು. ಈ ನಡುವೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ಮುಂದೂಡಲಾಗಿತ್ತು. ಒಂದೊಮ್ಮೆ ಪಂದ್ಯ ಇಂದೂ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾ ರನ್ ರೇಟ್, ಅಂಕಗಳ ಅನ್ವಯ ನೇರ ಫೈನಲ್‍ಗೆ ತಲುಪಲಿದೆ.
Advertisement
Good work on the field from India has kept New Zealand to 239/8 this morning. Kohli's men will need 240 if they are to seal their spot in the #CWC19 final.
Who has the advantage? #CWC19 | #INDvNZ pic.twitter.com/oiHRxHxvhw
— ICC Cricket World Cup (@cricketworldcup) July 10, 2019