– ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್‌ಗಳನ್ನು ಕಲೆ ಹಾಕಿ ದಾಖಲೆ ಬರೆದ ಕೊಹ್ಲಿ
ಬೆಂಗಳೂರು: ಭಾರತ (Team India) ಹಾಗೂ ನ್ಯೂಜಿಲೆಂಡ್ (New Zealand )ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ರೋಚಕ ಘಟ್ಟಕ್ಕೆ ತಲುಪಿದೆ. ಪಂದ್ಯದ ಎರಡನೇ ದಿನ ಮೇಲುಗೈ ಸಾಧಿಸಿದ್ದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ತಕ್ಕ ಉತ್ತರ ನೀಡಿದೆ.
Advertisement
ಪಂದ್ಯದ ಮೂರನೇ ದಿನದ ಎರಡನೇ ಸೆಷನ್‌ನಲ್ಲಿ ಕಿವೀಸ್ ತಂಡವನ್ನು 91.3 ಓವರ್‌ಗಳಲ್ಲಿ 402 ರನ್ಗಳಿಗೆ ಆಲೌಟ್ ಮಾಡಿ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಮೂರನೇ ದಿನದ ಅಂತ್ಯಕ್ಕೆ 49 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಕಲೆಹಾಕಿತು. ಹೀಗಿದ್ದರೂ ಮೊದಲ ಇನ್ನಿಂಗ್ಸ್ ಹಿನ್ನಡೆ ತಪ್ಪಿಸಲು ಭಾರತ ಇನ್ನೂ 125 ರನ್‌ಗಳಿಸಬೇಕಿದೆ.
Advertisement
𝟗𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐧𝐝 𝐜𝐨𝐮𝐧𝐭𝐢𝐧𝐠….
A career milestone for @imVkohli 👏👏
He is the fourth Indian batter to achieve this feat.#INDvNZ @IDFCFIRSTBank pic.twitter.com/Bn9svKrgtl
— BCCI (@BCCI) October 18, 2024
Advertisement
ಭಾರತ ಪರ, ಯಶಸ್ವಿ ಜೈಸ್ವಾಲ್ 52 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 52 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ 102 ಎಸೆತಗಳಲ್ಲಿ 70 ರನ್ ಬಾರಿಸಿ ದಿನದಾಟದ ಕೊನೆಯಲ್ಲಿ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು. ಸರ್ಫರಾಜ್ 78 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
Advertisement
ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) 70 ರನ್‌ಗಳನ್ನು ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್‌ಗಳನ್ನು ಕಲೆ ಹಾಕಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರರಾಗಿ ಹೊರಹೊಮ್ಮಿದರು.
ಭಾರತೀಯ ಟಾಪ್-5 ಟೆಸ್ಟ್ ಬ್ಯಾಟರ್ಸ್
* ಸಚಿನ್ ತೆಂಡೂಲ್ಕರ್ – 15,921 ರನ್
* ರಾಹುಲ್ ದ್ರಾವಿಡ್ – 13,262 ರನ್
* ಸುನೀಲ್ ಗವಾಸ್ಕರ್ – 10,122 ರನ್
* ವಿರಾಟ್ ಕೊಹ್ಲಿ – 9,000 ರನ್
* ವಿವಿಎಸ್ ಲಕ್ಷ್ಮಣ್ – 8,781 ರನ್